ಕೇವಲ 500 ರೂಪಾಯಿ ಹೂಡಿಕೆಯೊಂದಿಗೆ ಶ್ರೀಮಂತರಾಗಲು ಉತ್ತಮ ಅವಕಾಶ

                 

  • Dec 10, 2020, 12:56 PM IST

ನೀವು ಕೇವಲ 500 ರೂಪಾಯಿ  ಮಾತ್ರ ಹೂಡಿಕೆ ಮಾಡಿ ಉತ್ತಮ ಹಣ ಗಳಿಸಲು ಹಲವು ಯೋಜನೆಗಳಿವೆ. ಈ ರೀತಿ ಇನ್ವೆಸ್ಟ್‌ಮೆಂಟ್ನಲ್ಲಿ ಹಲವು ರೀತಿಯ ಪ್ರಯೋಜನಗಳೂ ಇವೆ.

1 /6

ಬೆಂಗಳೂರು: ಸರ್ಕಾರದ ಖಾತರಿ, ಕಡಿಮೆ ಹೂಡಿಕೆ ಮೂಲಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದಾದ ಮಾರ್ಗ ಯಾರನ್ನಾದರೂ ಆಕರ್ಷಿಸಬಹುದು. ಸಣ್ಣ ಉಳಿತಾಯ ಯೋಜನೆಯ ಅನುಕೂಲವೇ ಇದು. ನೀವು ಕೇವಲ 500 ರೂಪಾಯಿ  ಮಾತ್ರ ಹೂಡಿಕೆ ಮಾಡಿ ಉತ್ತಮ ಹಣ ಗಳಿಸಲು ಹಲವು ಯೋಜನೆಗಳಿವೆ. ಈ ರೀತಿ ಇನ್ವೆಸ್ಟ್‌ಮೆಂಟ್ನಲ್ಲಿ ಹಲವು ರೀತಿಯ ಪ್ರಯೋಜನಗಳೂ ಇವೆ. ಇದು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವ ಮೂಲಕ ಶ್ರೀಮಂತರಾಗಲು ನಿಮಗೆ ಅವಕಾಶ ನೀಡುತ್ತದೆ. ಇಲ್ಲಿ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ ಮತ್ತು ಉತ್ತಮ ಆದಾಯವನ್ನು ನೀಡುತ್ತದೆ. ನಿಮಗೆ ಅಂತಹ 5 ಅತ್ಯುತ್ತಮ ಹೂಡಿಕೆ ಆಯ್ಕೆಗಳನ್ನು ನಾವಿಂದು ತಿಳಿಸಲಿದ್ದೇವೆ. ಇದರಲ್ಲಿ ನೀವು 500 ರೂಪಾಯಿಗಳನ್ನು ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸಬಹುದು.  

2 /6

ಮ್ಯೂಚುವಲ್ ಫಂಡ್‌ಗಳಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. 15 ವರ್ಷಗಳವರೆಗೆ 500 ರೂಪಾಯಿಗಳ ಮಾಸಿಕ ಹೂಡಿಕೆ ಮಾಡುವುದರಿಂದ ನೀವು ಶೇಕಡಾ 10 ರಷ್ಟು ಬಡ್ಡಿದರದಲ್ಲಿ 2 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಅದರಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಇದಲ್ಲದೆ 90,000 ರೂ.ಗಳ ಹೂಡಿಕೆಗೆ ನೀವು 1.10 ಲಕ್ಷ ರೂ.ವರೆಗೆ ಪಡೆಯಬಹುದು. ನೀವು ಅದನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.

3 /6

ಸಾರ್ವಜನಿಕ ಭವಿಷ್ಯ ನಿಧಿ (PPF) ದೀರ್ಘಾವಧಿಗೆ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಪಿಪಿಎಫ್ ಪ್ರಸ್ತುತ ವಾರ್ಷಿಕವಾಗಿ ಶೇಕಡಾ 7.1 ರಷ್ಟು ಸಂಯುಕ್ತ ಬಡ್ಡಿಯನ್ನು ಪಡೆಯುತ್ತಿದೆ. ಏಕೆಂದರೆ ಇದು ದೀರ್ಘಾವಧಿಯ ಹೂಡಿಕೆಯಾಗಿದೆ. ಪಿಪಿಎಫ್‌ನಲ್ಲಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಪಿಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿ ಪಡೆಯಬಹುದು. ಇದರ ಮೇಲೆ ಪಡೆದ ಬಡ್ಡಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. 

4 /6

ಸುಕನ್ಯಾ ಸಮೃದ್ಧಿ ಯೋಜನೆ ಸರ್ಕಾರದ ಯೋಜನೆಯಾಗಿದೆ. ಅದರಲ್ಲಿ ಹೂಡಿಕೆ ಮಾಡಿದ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದರಲ್ಲಿ ನೀವು 250 ರೂಪಾಯಿಗೆ ಖಾತೆ ತೆರೆಯಬಹುದು. ಎಸ್‌ಎಸ್‌ವೈನಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನೂ ಗ್ರಾಹಕರು ಪಡೆಯುತ್ತಾರೆ. ನಿಮ್ಮ ಮಗಳ ಹೆಸರಿನಲ್ಲಿ ನೀವು ಖಾತೆಯನ್ನು ತೆರೆಯಬಹುದು. ಸಂಯುಕ್ತ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಇದು ಸ್ವಲ್ಪ ಹೆಚ್ಚಿನ ಲಾಭವನ್ನು ನೀಡುತ್ತದೆ. ಪ್ರತಿ ವರ್ಷ ಕನಿಷ್ಠ 1000 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.

5 /6

ಎನ್‌ಎಸ್‌ಸಿ ಜನಪ್ರಿಯ ಯೋಜನೆಯಾಗಿದ್ದು, ಇದನ್ನು ಅಂಚೆ ಕಚೇರಿ ನಡೆಸುತ್ತಿದೆ. ನೀವು ಈ ಪ್ರಮಾಣಪತ್ರವನ್ನು 100 ರೂಪಾಯಿ, 500 ರೂಪಾಯಿ, 1000 ರೂಪಾಯಿ ಮತ್ತು 5000 ರೂಪಾಯಿಗಳಿಗೆ ಖರೀದಿಸಬಹುದು. ಎನ್‌ಎಸ್‌ಸಿಯ ಹೂಡಿಕೆಯ ಅವಧಿ 5 ವರ್ಷಗಳು ಮತ್ತು ಈ ಸಮಯದಲ್ಲಿ ಬಡ್ಡಿಯನ್ನು ಶೇಕಡಾ 6.8 ದರದಲ್ಲಿ ಪಾವತಿಸಲಾಗುತ್ತಿದೆ. ಇದರೊಂದಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಇದೆ.

6 /6

ಹಣವನ್ನು ಉಳಿಸಲು ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು 4 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಇದಲ್ಲದೆ ನಿಮ್ಮ ಹಣವೂ ಸುರಕ್ಷಿತವಾಗಿರಲಿದೆ. ನೀವು ಅಂಚೆ ಕಚೇರಿಯಲ್ಲಿ 10 ಸಾವಿರ ರೂಪಾಯಿಗಳವರೆಗೆ ಪಡೆಯುವ ಬದ್ದಿಯು ತೆರಿಗೆ ಮುಕ್ತವಾಗಿರುತ್ತದೆ.