Garlic Controls Hair Fall: ಕೂದಲು ಉದುರುವಿಕೆ ಪುರುಷರು ಮತ್ತು ಮಹಿಳೆಯರನ್ನು ಭಾದಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ನಾವು ಅದನ್ನು ಹೇಗೆ ನಿಯಂತ್ರಿಸುತ್ತೇವೆ ಎಂಬುದು ಮುಖ್ಯ. ಕೂದಲನ್ನು ಉದುರಲು ಪ್ರಾರಂಭಿಸುವ ಮುನ್ನವೇ ಕಾಳಜಿ ವಹಿಸಬೇಕು..
ಪುರುಷರು ಮತ್ತು ಮಹಿಳೆಯರ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾದ ಕೂದಲು ಉದುರುವಿಕೆಗೆ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವುದು ಉತ್ತಮ... ಇಲ್ಲವಾದರೇ ಅದೇ ಗಂಭೀರ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಗಳಿರುತ್ತವೆ.
ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ನಾವು ಈಗಾಗಲೇ ಹಲವು ಸಲಹೆಗಳನ್ನು ಕಲಿತಿದ್ದೇವೆ. ಅದರಂತೆ ಬೆಳ್ಳುಳ್ಳಿ ಕೂಡ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಸಂಯುಕ್ತವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಿ.. ಅವುಗಳನ್ನು ಬಲಗೊಳಿಸುತ್ತದೆ.
ಬಳಸುವುದು ಹೇಗೆ?: ಗಾಜಿನ ಬಾಟಲಿಯನ್ನು ತೆಗೆದುಕೊಳ್ಳಿ. ಅದರಲ್ಲಿ ಬೆಳ್ಳುಳ್ಳಿ ಸೇರಿಸಿ. ಅದರಲ್ಲಿ ಅರ್ಧದಷ್ಟು ನೀರು ಸೇರಿಸಿ. ಈ ಬಾಟಲಿಯನ್ನು ಬಿಸಿಲಿನಲ್ಲಿ ಅಥವಾ ಎರಡು ದಿನಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಇರಿಸಿ. ಅದರ ನಂತರ ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ. ಸ್ನಾನ ಮಾಡುವ ಎರಡು ಗಂಟೆಗಳ ಮೊದಲು ಈ ನೀರನ್ನು ತಲೆಗೆ ಹಚ್ಚಬೇಕು.
ನಿಮ್ಮ ತಲೆಯಿಂದ ಬೆಳ್ಳುಳ್ಳಿಯ ವಾಸನೆ ಬರುತ್ತಿದೆ ಎಂದೆನಿಸಿದರೆ.. ಈ ಬೆಳ್ಳುಳ್ಳಿ ನೀರಿನಲ್ಲಿ ನಿಂಬೆ ರಸವನ್ನು ಹಾಕಿ ತಲೆಗೆ ಹಚ್ಚಿಕೊಳ್ಳಿ. ಈ ಬೆಳ್ಳುಳ್ಳಿ ನೀರನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದುರುವುದು, ಒಡೆಯುವುದು, ಕಿರಿಕಿರಿ ಮತ್ತು ತುರಿಕೆ ಕಡಿಮೆಯಾಗುತ್ತದೆ. ಹೇಣಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ..
ವಾರಕ್ಕೆ ಎರಡು ಬಾರಿ ಬೆಳ್ಳುಳ್ಳಿ ನೀರನ್ನು ಹಚ್ಚಿದೇ ಕೆಲವೇ ದಿನಗಳಲ್ಲಿ ನೀವು ಖಂಡಿತವಾಗಿಯೂ ಫಲಿತಾಂಶವನ್ನು ನೋಡುತ್ತೀರಿ. ಈ ನೀರನ್ನು ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಮೃದುವಾಗಿ ಮತ್ತು ಉದ್ದವಾಗಿ ಬೆಳೆಯುತ್ತವೆ..
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.