ಸೆ.1ರಿಂದ PF, LPG, PAN ಕಾರ್ಡ್ ಗೆ ಸಂಬಂಧಿಸಿದ ಈ ನಿಯಮಗಳಲ್ಲಿ ಬದಲಾವಣೆ

ಸೆಪ್ಟೆಂಬರ್ 1ರಿಂದ ಅನೇಕ ನಿಯಮಗಳು ಬದಲಾಗಲಿದ್ದು, ಇದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.

ಸೆಪ್ಟೆಂಬರ್ 1ರಿಂದ ಅನೇಕ ನಿಯಮಗಳು ಬದಲಾಗಲಿದ್ದು, ಇದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಏಕೆಂದರೆ ಬದಲಾವಣೆಯಾಗುತ್ತಿರುವ ಈ ನಿಮಯಗಳು ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳೊಂದಿಗೆ ಸಂಬಂಧ ಹೊಂದಿದೆ. ಯಾವ್ಯಾವ ನಿಯಮಗಳಲ್ಲಿ ಬದಲಾವಣೆಯಾಗಲಿವೆ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಪಿಎಫ್ ಚಂದಾದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಪಿಎಫ್ ಖಾತೆಯೊಂದಿಗೆ ಸೆಪ್ಟೆಂಬರ್ 1 ರವರೆಗೆ ಲಿಂಕ್ ಮಾಡಬಹುದು. ಒಂದು ವೇಳೆ ಮಾಡದಿದ್ದರೆ ನೀವು ಇಪಿಎಫ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ನೀವು ಪಿಎಫ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಲು ವಿಫಲವಾದರೆ ಅಥವಾ ನಿಮ್ಮ ಯುಎಎನ್ ಅನ್ನು ಆಧಾರ್ ಪರಿಶೀಲಿಸದಿದ್ದರೆ, ನಿಮ್ಮ ಇಸಿಆರ್-ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಭರ್ತಿಯಾಗುವುದಿಲ್ಲ. ಇದರರ್ಥ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯ ಕೊಡುಗೆಯನ್ನು ವೀಕ್ಷಿಸಬಹುದು. ಆದರೆ ಅವರು ಉದ್ಯೋಗದಾತರ ಪಾಲನ್ನು ಪಡೆಯಲು ಸಾಧ್ಯವಾಗುವುದಿಲ್ಲ.

2 /5

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನಿಮ್ಮ PAN ಸಂಖ್ಯೆಯನ್ನು  ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಗಡುವು ಸೆಪ್ಟೆಂಬರ್ 30 ಆಗಿದೆ. ಈ ಮೊದಲು ಈ ಗಡುವು ಜೂನ್ 30 ಆಗಿತ್ತು. ಆದರೆ ಕೇಂದ್ರ ಸರ್ಕಾರವು ಅದನ್ನು ವಿಸ್ತರಿಸಿದೆ. ಈ ಅವಧಿಯೊಳಗೆ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ನಿಮಗೆ ಸಮಸ್ಯೆಯುಂಟಾಗುತ್ತದೆ.

3 /5

ಸೆಪ್ಟೆಂಬರ್‌ನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬದಲಾಗುತ್ತದೆ. ಕಳೆದ ಎರಡ್ಮೂರು ತಿಂಗಳಿಂದ LPG ಸಿಲಿಂಡರ್ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗುತ್ತಿವೆ.

4 /5

ಸೆಪ್ಟೆಂಬರ್ 1, 2021ರಿಂದ ಕೇಂದ್ರ ಜಿಎಸ್‌ಟಿ ನಿಯಮಗಳ ನಿಯಮ -59 (6) ಜಾರಿಗೆ ಬರಲಿದೆ ಎಂದು ಜಿಎಸ್‌ಟಿಎನ್ ಹೇಳಿದೆ. ಹೊಸ ನಿಯಮವು ‘ನೋಂದಾಯಿತ ವ್ಯಕ್ತಿಗೆ ಸರಕು ಅಥವಾ ಸೇವೆಗಳ ಬಾಹ್ಯ ಪೂರೈಕೆಗಳ ವಿವರಗಳನ್ನು ನೀಡಲು ಅನುಮತಿಸಲಾಗುವುದಿಲ್ಲ’ ಎಂದು ಹೇಳಿದೆ. ಇದಲ್ಲದೆ ಇನ್ನು ಕೆಲ ಜಿಎಸ್‌ಟಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ಎಂದು ತಿಳಿದುಬಂದಿದೆ.    

5 /5

ಮಕ್ಕಳನ್ನು ಗುರಿಯಾಗಿಸುವ ಆ್ಯಪ್‌ಗಳಲ್ಲಿ ಬಳಸುವ ಐಡೆಂಟಿಫೈಯರ್‌ಗಳ ಮೇಲೆ Google ತನ್ನ Families Policy Requirements ಗಳಲ್ಲಿ ಹೊಸ ನಿರ್ಬಂಧಗಳನ್ನು ಸೇರಿಸಲು ಸಜ್ಜಾಗಿದೆ. ಜಾಹೀರಾತು ಐಡಿ ಬದಲಾವಣೆಗಳನ್ನು ಹೊರತುಪಡಿಸಿ ಸೆಪ್ಟೆಂಬರ್ 1, 2021 ರೊಳಗೆ ಈ ನಿಯಮ ಅನುಸರಿಸುವಂತೆ ಕಂಪನಿಯು ಡೆವಲಪರ್‌ಗಳನ್ನು ಕೇಳಿದೆ.