ಸೂರ್ಯನ ಕರ್ಕ ಗೋಚರದಿಂದ 4 ರಾಜಯೋಗಗಳ ನಿರ್ಮಾಣ, ವೃಷಭ ಸೇರಿದಂತೆ 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ!

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಕರ್ಕ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಸ್ಥಾನಮಾನ ಹೆಚ್ಚಾಗಲಿದೆ ಹಾಗೂ ವೃತ್ತಿ-ವ್ಯಾಪಾರದಲ್ಲಿ ಅಪಾರ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ. ಅಷ್ಟೇ ಅಲ್ಲ ಸೂರ್ಯನ ಈ ಕರ್ಕ ರಾಶಿ ಗೋಚರದಿಂದ 4 ಶುಭ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತೀವೆ. 
 

ವೈದಿಕ ಜೋತಿಷ್ಯ ಪಂಚಾಂಗದಲ್ಲಿ ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಹೇಳಲಾಗಿದೆ. ಜೊತೆಗೆ ಸೂರ್ಯ ಪಿತೃ, ಮೇಲಾಧಿಕಾರಿ, ಆತ್ಮ, ಆಡಳಿತ, ನೌಕರಿ ಹಾಗೂ ಸ್ಥಾನಮಾನಕ್ಕೆ ಕಾರಕ ಗ್ರಹನಾಗಿದ್ದಾನೆ. ಹೀಗಾಗಿ ಸೂರ್ಯನ ನಡೆಯಲ್ಲಿ ಬದಲಾವಣೆಯಾದಾಗ ಅದರ ಪ್ರಭಾವ ಮಾನವ ಜೀವನ ಹಾಗೂ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಪ್ರಸ್ತುತ ಸೂರ್ಯದೇವ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕರ್ಕ ರಾಶಿಯಲ್ಲಿ ಒಟ್ಟು ನಾಲ್ಕು ಯೋಗಗಳು ನಿರ್ಮಾಣಗೊಳ್ಳುತ್ತಲಿವೆ. ಈ ರಾಜಯೋಗಗಳಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯದ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.

 

ಇದನ್ನೂ ಓದಿ-ಬರೋಬ್ಬರಿ ಒಂದು ತಿಂಗಳ ಬಳಿಕ ಸಂಭವಿಸಲಿದೆ ಈ ಮಹಾಬದಲಾವಣೆ, ಜೇಬು ಹಣದಿಂದ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೃಷಭ ರಾಶಿ- ನಿಮ್ಮ ಗೋಚರ ಜಾತಕದ ಆಸ್ತಿ-ಪಾಸ್ತಿ, ಸುಖ ಸೌಕರ್ಯ ಭಾವಕ್ಕೆ ಸೂರ್ಯ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಸೂರ್ಯನ ಈ ಗೋಚರ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಅಷ್ಟೇ ಅಲ್ಲದೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸೂರ್ಯ ಹಾಗೂ ಕರ್ಕರಾಶಿಯಲ್ಲಿ ಈಗಾಗಲೇ ಇರುವ ಬುಧನ ಮೈತ್ರಿಯ ಕಾರಣ ಬುದ್ಧಾದಿತ್ಯ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದೆಡೆ ಶಶ ಮಹಾಪುರುಷ ರಾಜಯೋಗ, ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಶುಕ್ರ, ಮಂಗಳ ಹಾಗೂ ಶನಿಯ ಕೃಪೆಯಿಂದ ಸಮಸಪ್ತಕ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಈ 4 ರಾಜಯೋಗಗಳ ಕಾರಣ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ನೌಕರವರ್ಗದ ಜನರಿಗೆ ಬಡ್ತಿ ಭಾಗ್ಯ ಸಿಗಲಿದೆ. ಆಸ್ತಿ-ವಾಹನ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

2 /5

ಕನ್ಯಾ ರಾಶಿ: ಸೂರ್ಯನ ಈ ಗೋಚರ ಹಾಗೂ ಅದರಿಂದ ನಿರ್ಮಾಣಗೊಳ್ಳುತ್ತಿರುವ ನಾಲ್ಕು ರಾಜಯೋಗಗಳ ಕಾರಣ ಕನ್ಯಾ ರಾಶಿಯ ಜಾತಕದವರ ಸುದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ನಿಮ್ಮ ಜಾತಕದ ರಾಷ್ಯಾಧಿಪ ಬುಧ ಲಾಭ ಸ್ಥಾನದಲ್ಲಿದ್ದಾನೆ ಹಾಗೂ ಆತ ಇದರಿಂದ ಬಲಿಷ್ಠನಾಗುತ್ತಾನೆ. ಇನ್ನೊಂದೆಡೆ ಸೂರ್ಯ ಕೂಡ ನಿಮ್ಮ ಗೋಚರ ಜಾತಕದಲ್ಲಿ ಬಲಿಷ್ಠನಾಗುತ್ತಾನೆ. ಹೀಗಾಗಿ ಇದರಿಂದ ನಿಮ್ಮ ಆರೋಗ್ಯದಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ನೌಕರಿಯಲ್ಲಿ ಉನ್ನತಿಯಾಗಲಿದೆ. ಸ್ಥಾನಮಾನ ಹೆಚ್ಚಾಗಲಿದೆ. ರಾಜಕೀಯ ಜೀವನಕ್ಕೆ ಸಮರ್ಪಿತ ಜನರಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಆದಾಯದಲ್ಲಿ ವೃದ್ಧಿಯ ಬಲವಾದ ಸಂಕೇತಗಳಿವೆ.  

3 /5

ವೃಶ್ಚಿಕ ರಾಶಿ: ನಿಮ್ಮ ಗೋಚರ ಜಾತಕದಲ್ಲಿ ಸೂರ್ಯ ಹಾಗೂ ಬುಧ ನಿಮ್ಮ ಭಾಗ್ಯಸ್ಥಾನದಲ್ಲಿ ಬಂದು ಕುಳಿತಿದ್ದಾರೆ. ಹೀಗಾಗಿ ಸೂರ್ಯನ ಈ ಗೋಚರ ನಿಮ್ಮ ಪಾಲಿಗೂ ಕೂಡ ಅತ್ಯದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾತ್ರೆ ಜರುಗಬಹುದು. ನೌಕರ ವರ್ಗದವರಿಗೆ ಉತ್ತಮ ಇಂಕ್ರಿಮೆಂಟ್ ಸಿಗಲಿದೆ. ಸ್ಥಾನಮಾನದಲ್ಲಿಯೂ ಕೂಡ ವೃದ್ಧಿಯ ಸಂಕೇತಗಳಿವೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬಯಸುವ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯುತ್ತಮವಾಗಿದೆ. ಮನೆ ಅಥವಾ ಕುಟುಂಬದಲ್ಲಿ ಮಂಗಳಕರ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.  

4 /5

ಕುಂಭ ರಾಶಿ: ನಿಮ್ಮ ಗೋಚರ ಜಾತಕದ ಷಷ್ಟಮ ಭಾವದಲ್ಲಿ ಸೂರ್ಯ ಹಾಗೂ ಬುಧ ವಿರಾಜಮಾನರಾಗಿದ್ದಾರೆ. ಇದರಿಂದ ನಿರ್ಮಾಣಗೊಳ್ಳುತ್ತಿರುವ 4 ರಾಜಯೋಗಗಳಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ಷಷ್ಟಮ ಭಾವದಲ್ಲಿ ಸೂರ್ಯ ಹಾಗೂ ಬುಧರು ತುಂಬಾ ಬಲಿಷ್ಠರಾಗಿದ್ದಾರೆ. ಹೀಗಾಗಿ ಹಿತಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ನೀವು ಯಶಸ್ಸನ್ನು ಪಡೆಯುವಿರಿ. ಕೋರ್ಟ್-ಕಚೇರಿ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಿಂದ ನಿಮಗೆ ಲಾಭ ಸಿಗಲಿದೆ. ಜೊತೆಗೆ ಶಶ ರಾಜಯೋಗ, ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಸಮಸಪ್ತಕ ರಾಜಯೋಗಗಳಿಂದ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಅತ್ಯುತ್ತಮ ಅವಕಾಶಗಳು ಒದಗಿ ಬರಲಿವೆ, ಇದರಿಂದ ನೀವು ಆತ್ಮ ಸಂತುಷ್ಟಿಯನ್ನು ಅನುಭವಿಸುವಿರಿ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)