ರತ್ನದ ಉಂಗುರ ತೊಟ್ಟರೂ ಸಮಸ್ಯೆ ಮುಂದುವರೆಯುತ್ತಿದ್ದರೆ, ಈ ಕೆಲಸ ಮಾಡಿ ನೋಡಿ

ರತ್ನ ಶಾಸ್ತ್ರದ ಪ್ರಕಾರ, ರತ್ನಗಳನ್ನು ಧರಿಸುವಾಗ ಸಂಪೂರ್ಣ ಕಾಳಜಿ ವಹಿಸಬೇಕು. ಆಗ ಮಾತ್ರ ಅದರ ಉತ್ತಮ ಫಲಿತಾಂಶ ಸಿಗುತ್ತದೆ.

ನವದೆಹಲಿ : ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ಯಶಸ್ಸು ಮರೀಚಿಕೆಯಾಗಿದ್ದರೆ,  ಅದೃಷ್ಟವನ್ನು ಬಲಪಡಿಸುವ ಉದ್ದೇಶದಿಂದ ರತ್ನದ ಉಂಗುರಗಳನ್ನು  ಧರಿಸಲಾಗುತ್ತದೆ. ರತ್ನ ಶಾಸ್ತ್ರದ ಪ್ರಕಾರ, ರತ್ನಗಳನ್ನು ಧರಿಸುವಾಗ ಸಂಪೂರ್ಣ ಕಾಳಜಿ ವಹಿಸಬೇಕು. ಆಗ ಮಾತ್ರ ಅದರ ಉತ್ತಮ ಫಲಿತಾಂಶ ಸಿಗುತ್ತದೆ. ಯಾರೋ ಹೇಳಿದರೂ ಎನ್ನುವ ಮಾತ್ರಕ್ಕೆ ನಮಗೆ ಬೇಕಾದ ರತ್ನವನ್ನು ಧರಿಸಬಾರದು. ಹಾಗೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಸಂಭವಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾವುದೇ ರತ್ನವನ್ನು ಧರಿಸುವ ಮೊದಲು, ಅದನ್ನು ತನ್ನ  ಇಷ್ಟ ದೇವರ ಪಾದಗಳನ್ನು ಸ್ಪರ್ಶಿಸಿ ಧ್ಯಾನಿಸಬೇಕು. 

2 /5

ರತ್ನವನ್ನು ಧರಿಸುವ ಮೊದಲು, ಉತ್ತಮ ಜ್ಯೋತಿಷಿಯನ್ನು ಸಂಪರ್ಕಿಸಬೇಕು. ಇದರ ನಂತರವೇ, ಜ್ಯೋತಿಷ್ಯದ ಅನುಸಾರ ರತ್ನವನ್ನು ಧರಿಸಬೇಕು. 

3 /5

ರತ್ನಶಾಸ್ತ್ರದ ತಜ್ಞರ ಪ್ರಕಾರ, ಯಾವುದೇ ರತ್ನವನ್ನು ಧರಿಸಿದ ನಂತರ ಅದನ್ನು ಮತ್ತೆ ಮತ್ತೆ ಬದಲಾಯಿಸಬಾರದು. ಒಂದು ರತ್ನವನ್ನು ಕನಿಷ್ಠ 6 ತಿಂಗಳ ಕಾಲ ಧರಿಸಬೇಕು. ಆಗ ರತ್ನದ ಪರಿಣಾಮ ತಿಳಿಯುತ್ತದೆ. 

4 /5

ಮುರಿದ ರತ್ನವನ್ನು ಎಂದಿಗೂ ಧರಿಸಬಾರದು ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಮತ್ತೊಂದೆಡೆ, ಧರಿಸಿರುವ ರತ್ನದಲ್ಲಿ ಬಿರುಕು ಇದ್ದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು. 

5 /5

ಜ್ಯೋತಿಷ್ಯ ಶಾಸ್ತ್ರದ ತಜ್ಞರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಮತ್ತು ಅಭಿವೃದ್ಧಿಗಾಗಿ ರಾಶಿ , ಭಾಗ್ಯ ಸ್ಥಾನ ಸ್ಥಳ ಅಂದರೆ ಒಂಬತ್ತನೇ ಮನೆ ಮತ್ತು ಐದನೇ ಮನೆಯ ರತ್ನವನ್ನು ಧರಿಸಬೇಕು.