Love Marriage ಗೆ ಪೋಷಕರು ವಿರೋಧ ಯಾಕಿರುತ್ತದೆ? ಇಲ್ಲಿವೆ 5 ಕಾರಣಗಳು

Arranged Marriage Vs Love Marriage: ಯುವಕ ಮತ್ತು ಯುವತಿ ಪರಸ್ಪರ ಇಷ್ಟಪಡಲು ಪ್ರಾರಂಭಿಸಿದಾಗ, ಅವರ ಮುಂದೆ ಎದುರಾಗುವ ದೊಡ್ಡ ಸವಾಲು ಎಂದರೆ ಅದು ಕುಟುಂಬ ಸದಸ್ಯರ ಮನವೊಲಿಕೆ

Arranged Marriage Vs Love Marriage: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ (Marriages Are Made In Haven) ಎಂಬ ನಾಣ್ನುಡಿ ನೀವೆಲ್ಲರೂ ಕೇಳಿರಬಹುದು. ಆದರೂ, ಭೂಮಿಯ ಮೇಲಿನ ಜನರು ಈ ನಾಣ್ನುಡಿಯನ್ನು ಹೆಚ್ಚಿಗೆ ನಂಬುವಂತೆ ಕಾಣುವುದಿಲ್ಲ. ಮದುವೆಯ ವಿಷಯಕ್ಕೆ ಬಂದಾಗಲಂತೂ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಬಂಧ ಜೋಡಿಸುವಲ್ಲಿ ತೊಡಗುತ್ತಾರೆ. ಇಂತಹುದರಲ್ಲಿ ಒಂದು ವೇಳೆ ಲವ್ ಮ್ಯಾರೇಜ್ (Love Marriage) ವಿಷಯಕ್ಕೆ ಬಂದರೆ, ಭಾರತೀಯರ ಮನೆಯಲ್ಲಿ ಇದೊಂದು ದೊಡ್ಡ ವಿವಾದಾತ್ಮಕ ವಿಷಯವಾಗಿ ಮಾರ್ಪಡುತ್ತದೆ. ಹೀಗಿರುವಾಗ ತಮ್ಮ ಮನೆಯವರು ಅಥವಾ ಪೋಷಕರು (Parents) ತಮ್ಮ ಮದುವೆಗೆ ಇಷ್ಟೊಂದು ವಿರುದ್ಧವಾಗಿ ಏಕೆ ನಿಲ್ಲುತ್ತಿದ್ದಾರೆ ಎಂಬುದುದು ಯುವ ಪೀಳಿಗೆಗೆ ಅರ್ಥವೇ ಆಗುವುದಿಲ್ಲ. ಹಾಗಾದರೆ ಬನ್ನಿ ಇದರ ಹಿಂದಿನ ಕೆಲ ವಿಶೇಷ ಕಾರಣಗಳನ್ನು ಅರಿತುಕೊಳ್ಳೋಣ.

 

ಇದನ್ನೂ ಓದಿ-The Kapil Sharma Show: ಕಪಿಲ್ ಶರ್ಮಾ ಹಿಡಿದು ಭಾರತಿವರೆಗೆ ಪ್ರತಿಯೊಬ್ಬರೂ ಒಂದು ಎಪಿಸೋಡ್ ಗಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಅರೆಂಜ್ ಮ್ಯಾರೇಜ್ (Arranged Marriage) ದೀರ್ಘಕಾಲದ ಬಾಳಿಕೆ ಹೊಂದಿದೆ - ಭಾರತದಲ್ಲಿ ಇಂದಿಗೂ ಕೂಡ ಅರೇಂಜ್ಡ್ ಮ್ಯಾರೇಜ್ ಅನ್ನು ಉತ್ತಮ, ಸರಿಯಾದ ಮತ್ತು ಸಮರ್ಥನೀಯವೆಂದು ಪರಿಗಣಿಸಲಾಗಿದೆ. ಯುವ ಪೀಳಿಗೆಯವರು (Young Generation) ಏನೇ ಹೇಳಲಿ, ಆದರೆ ಹಳೆಯ ತಲೆಮಾರಿನವರು ಅರೇಂಜ್ಡ್ ಮ್ಯಾರೇಜ್‌ನಲ್ಲಿ ಸಂಬಂಧ ಮುರಿಯುವ ಸಾಧ್ಯತೆಯು ಪ್ರೇಮ ವಿವಾಹಕ್ಕಿಂತ ಕಡಿಮೆ ಎಂದು ನಂಬುತ್ತಾರೆ. ಮದುವೆಗಳು ಹೆಚ್ಚು ಸ್ಥಿರವಾಗಿರುತ್ತವೆ ಮತ್ತು ಹೆಚ್ಚು ಕಾಲ ಉಳಿಯುತ್ತವೆ ಎಂಬುದು ಅವರ ವಾದ.

2 /5

2. ಮಕ್ಕಳ ಆಯ್ಕೆಯ ಮೇಲೆ ಅವರ ಭರವಸೆ ಇರುವುದಿಲ್ಲ - ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿಲ್ಲ ಎಂಬುದನ್ನು ನಿಮ್ಮ ಪೋಷಕರು ಗಮನಿಸಿರಬಹುದು. ನೀವು ಸೂಚಿಸಿರುವ ಸಂಗಾತಿ ಅಥವಾ ಗೆಳತಿ-ಗೆಳೆಯರನ್ನು ಅವರು ಭೇಟಿಯಾಗಿರಬಹುದು ಮತ್ತು ಅವರಿಗೆ ಅವಳು/ಅವನು ಇಷ್ಟವಾಗಿಲ್ಲದಿರಬಹುದು. ನಿಮ್ಮ ನಿರ್ಧಾರ ಸರಿಯಾದುದಲ್ಲಿಯ ಎಂದು ಭಾವಿಸಲು ಅವರ ಬಳಿ ಗಟ್ಟಿಯಾದ ಕಾರಣ ಇರಬಹುದು ನಿಮ್ಮ ಆಯ್ಕೆಯ ಸಂಗಾತಿ ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುವುದಿಲ್ಲ ಅಥವಾ ನೋಡಿಕೊಳ್ಳುವುದಿಲ್ಲ ಎಂಬ ಭಯವೂ ಅವರಿಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ಅವರು ಯಾವಾಗಲೂ ನಿಮ್ಮ ಪ್ರೇಮ ವಿವಾಹಕ್ಕೆ ವಿರುದ್ಧವಾಗಿರುತ್ತಾರೆ.

3 /5

3. ಅಪರಿಚಿತನಾಗಿರುವ ಭಯ - ನಿಯೋಜಿತ ಮದುವೆಯಲ್ಲಿ, ಸಂಬಂಧವು ಕೆಲವು ಪರಿಚಯಸ್ಥರು ಅಥವಾ ಕುಟುಂಬಸ್ತರ ಮೂಲಕ ರೂಪುಗೊಳ್ಳುತ್ತದೆ. ನೀವು ಒಪ್ಪಿಕೊಳ್ಳುತ್ತಿರುವ ಸಂಬಂಧ  ನಮ್ಮವರೇ ಆಗಿದ್ದಾರೆಎಂಬ ನಂಬಿಕೆ ಅವರಿಗೆ ಅಂಟಿಕೊಂಡಿರುತ್ತದೆ. ಆದರೆ ಪ್ರೇಮವಿವಾಹದ ವಿಷಯ ಬಂದಾಗ ಅಪರಿಚಿತರ ಜೊತೆ ಸಂಬಂಧವೇನೋ ಎಂಬಂತೆ ಮನೆಯವರಿಗೆ ಅನಿಸುತ್ತದೆ. ತಮಗೆಯೇ ಸರಿಯಾದ ಮಾಹಿತಿ ಇಲ್ಲದ ವ್ಯಕ್ತಿಯ ಕೈಯಲ್ಲಿ ತಮ್ಮ ಮಗಳು ಅಥವಾ ಮಗನ ಜೀವನ ವಹಿಸಲು ಅವರು ಹಿಂದೇಟು ಹಾಕುತ್ತಾರೆ.

4 /5

4. ಕುಟುಂಬದಲ್ಲಿ ಈ ಹಿಂದೆ ಎಂದಿಗೂ ಪ್ರೇಮವಿವಾಹವೇ ಜರುಗಿಲ್ಲದಿರುವುದರ ಭಯ - ಪ್ರೇಮವಿವಾಹವೇ ನೆರವೇರದ ಎಷ್ಟೋ ಕುಟುಂಬಗಳಲ್ಲಿ ಇಂದಿಗೂ ಇವೆ. ಎಲ್ಲ ಮದುವೆಗಳು ನಿಶ್ಚಯವಾಗಿರುವ ಮನೆಯಲ್ಲಿ ಪ್ರೇಮವಿವಾಹ ಮಾಡುವುದು ಪಾಲಕರಿಗೆ ಬಹಳ ತೊಂದರೆದಾಯಕವಾಗಿರುತ್ತದೆ. ಪ್ರೇಮವಿವಾಹ ಮಾಡುವ ಮೂಲಕ ತಮ್ಮ ಮಗು ಕುಟುಂಬದ ಈ ಸಂಪ್ರದಾಯವನ್ನು ಮುರಿಯಬಾರದು ಎಂಬುದು ಅವರ ಭಾವನೆ.

5 /5

5. ಜನ ಏನಂತಾರೆ ಎಂಬ ಭಯ - ಜನರು ಏನು ಹೇಳುತ್ತಾರೋ ಎಂಬ ಭಯದಲ್ಲಿ ಪೋಷಕರು ಮತ್ತು ಕುಟುಂಬದವರೂ ಇರುತ್ತಾರೆ. ತಮ್ಮ ಮಗುವಿನ ಪ್ರೇಮವಿವಾಹವನ್ನು ಮಾಡಿಸಿದರೆ ಸಂಗಾತಿ ಸರಿಯಾಗದೇ ಹೋದರೆ ಎಷ್ಟು ಜನ ಅವರನ್ನು ತೆಗಳುತ್ತಾರೆ ಎಂಬ ಭಯ ಅವರಿಗೆ ಕಾಡುತ್ತದೆ, ಎಷ್ಟೋ ಸಲ ಈ ಭಯದಿಂದಲೂ ಪೋಷಕರು ಪ್ರೇಮವಿವಾಹಕ್ಕೆ ಹೌದು ಎನ್ನುವುದಿಲ್ಲ. ಅವರು ಸಂಬಂಧಿಕರು, ನೆರೆಹೊರೆಯವರು ಮತ್ತು ಸಮಾಜದ ಭಯವನ್ನು ಅನುಭವಿಸುತ್ತಾರೆ.