Fast Charging Mobile Phones In India: Redmi Note 13 Pro+ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಹೊಂದಿದ್ದು, 120w ಹೈಪರ್‌ಚಾರ್ಜ್‌ನಿಂದ ಬೆಂಬಲಿತವಾಗಿದೆ. ಈ Redmi ಸ್ಮಾರ್ಟ್‌ಫೋನ್ ಕೇವಲ 19 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
Fast Charging Smartphones: ಇಂದು ಅನೇಕರು ಸ್ಮಾರ್ಟ್‌ಫೋನ್ ಖರೀದಿಸಬೇಕಾದರೆ ಅವುಗಳ ವೈಶಿಷ್ಟ್ಯಗಳನ್ನು ಮೊದಲು ಗಮನಿಸುತ್ತಾರೆ. ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಲವಾರು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿವೆ. ಗುಣಮಟ್ಟದ ಕ್ಯಾಮೆರಾ, ದೀರ್ಘಕಾಲಿಕ ಬ್ಯಾಟರಿ, ಶಕ್ತಿಶಾಲಿಯುತ OS ಮುಂತಾದ ವೈಶಿಷ್ಟ್ಯಗಳನ್ನು ಗ್ರಾಹಕರು ಗಮನಿಸುತ್ತಾರೆ. ಇಂದು ಅನೇಕರು ತಮ್ಮ ಸ್ಮಾರ್ಟ್‌ಫೋನ್ ಬಹುಬೇಗನೆ ಚಾರ್ಜ್ ಆಗಲಿ ಎಂದು ಬಯಸುತ್ತಾರೆ. ಇದಕ್ಕಾಗಿಯೇ ಅವರು ಹೆಚ್ಚಿನ ಬೆಲೆ ತೆತ್ತು ಅತ್ಯಂತ ಕಡಿಮೆ ಸಮಯದಲ್ಲಿ ಚಾರ್ಜ್ ಆಗುವ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ವೇಗವಾಗಿ ಚಾರ್ಜ್ ಆಗುವ ಟಾಪ್ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿವೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
Redmi Note 13 Pro+ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಹೊಂದಿದ್ದು, 120w ಹೈಪರ್‌ಚಾರ್ಜ್‌ನಿಂದ ಬೆಂಬಲಿತವಾಗಿದೆ. ಈ Redmi ಸ್ಮಾರ್ಟ್‌ಫೋನ್ ಕೇವಲ 19 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಫೋನ್ 8GB RAM ಬೆಂಬಲದೊಂದಿಗೆ ಬರುತ್ತದೆ. ಇದರ 256GB ಸ್ಟೋರೇಜ್ ರೂಪಾಂತರದ ಬೆಲೆ 30,999 ರೂ. ಇದೆ. ಅಮೇಜಾನ್‌ನಲ್ಲಿ ಈ ಫೋನ್ ಮೇಲೆ 3,000 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇದು 200-ಮೆಗಾಪಿಕ್ಸೆಲ್ ಕ್ಯಾಮೆರಾ, ಜಲನಿರೋಧಕ ವೈಶಿಷ್ಟ್ಯ ಮತ್ತು 120 Hz ರಿಫ್ರೆಶ್ ರೇಟ್‌ನೊಂದಿಗೆ 3D ಕರ್ವ್ AMOLED ಡಿಸ್ಪ್ಲೇಯನ್ನು ಹೊಂದಿದೆ.
12GB RAM, 256GB ಸ್ಟೋರೇಜ್ ರೂಪಾಂತರದ Motorola Edge 50 Pro ಸ್ಮಾರ್ಟ್‌ಫೋನ್ 125W ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. Flipkartನಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 35,999 ರೂ. ಇದೆ. ಈ ಫೋನ್ ಖರೀದಿಯ ಮೇಲೆ ನೀವು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಈ ಫೋನ್ 144 Hz ರೇಟಿಂಗ್‌ನೊಂದಿಗೆ 6.7-ಇಂಚಿನ 1.5 POLED ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಗುಣಮಟ್ಟದ ಕ್ಯಾಮೆರಾ ಸೆಟಪ್ ಸಹ ಹೊಂದಿದ್ದು, AIನಲ್ಲಿಯೂ ಕಾರ್ಯನಿರ್ವಹಿಸುತ್ತದೆ.
IQOO Neo 9 Pro ಸ್ಮಾರ್ಟ್‌ಫೋನ್ 129W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿದೆ. ಇದು 5160mAh ಬ್ಯಾಟರಿ ಹೊಂದಿದೆ. ಅಮೆಜಾನ್‌ನಲ್ಲಿ 8GB ಸ್ಟೋರೇಜ್ ರೂಪಾಂತದ ಈ ಫೋನ್ ಬೆಲೆ 34,999 ರೂ. ಇದೆ. ಇದು 6.78-ಇಂಚಿನ LTPO AMOLED ಡಿಸ್ಪ್ಲೇ ಜೊತೆಗೆ 144 Hz ರಿಫ್ರೆಶ್ ರೇಟ್ ಹೊಂದಿದೆ. ಈ ಫೋನ್ ಶಕ್ತಿಯುತ ಪ್ರೊಸೆಸರ್, ಗುಣಮಟ್ಟದ ಕ್ಯಾಮೆರಾ ಸೆಟಪ್ ಮತ್ತು ಶಕ್ತಿಯುತ ಪ್ರೊಸೆಸರ್ ಹೊಂದಿದೆ.
IQOO 12 ಸ್ಮಾರ್ಟ್‌ಫೋನ್ 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, 5000mAh ಬ್ಯಾಟರಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನ 12GB RAM, 256GB ಸ್ಟೋರೇಜ್‌ನ ರೂಪಾಂತರವು Amazonನಲ್ಲಿ 52,999 ರೂ.ಗೆ ಲಭ್ಯವಿದೆ. ನೀವು ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ಕೊಡುಗೆಯನ್ನು ಸಹ ಪಡೆಯಬಹುದು. ಇದು 6.78 ಇಂಚಿನ LTPO AMOLED ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ಹೊಂದಿದೆ. ಇದು ಗುಣಮಟ್ಟದ ಕ್ಯಾಮೆರಾ ಸೆಟಪ್ ಮತ್ತು ಶಕ್ತಿಶಾಲಿ ಪ್ರೊಸೆಸರ್ ಅನ್ನು ಹೊಂದಿದೆ.
iQOO Neo 7 Pro 5G ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ಗಾಗಿ 120W ಫ್ಲಾಶ್ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಈ ಫೋನ್ಸ ಸಂಪೂರ್ಣವಾಗಿ ಚಾರ್ಜ್ ಆಗಲು ಕೇವಲ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದರ 8Gb Ram, 128Gb ರೂಪಾಂತರದ ಬೆಲೆ ಅಮೆಜಾನ್‌ನಲ್ಲಿ 29,999 ರೂ. ಇದೆ.