ಇನ್ಮುಂದೆ ರೈತರಿಗೆ ಸುಲಭವಾಗಿ ಸಿಗಲಿದೆ ಅಗ್ಗದ ಸಾಲ, 1.5 ಕೋಟಿ ರೈತರಿಗೆ ಲಾಭ

               

  • Oct 20, 2020, 15:56 PM IST

ರೈತರಿಗೆ ಅಗ್ಗದ ಸಾಲ ನೀಡಲು ಸರ್ಕಾರ ಬ್ಯಾಂಕುಗಳ ಸಹಾಯದಿಂದ 1.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದೆ. ಈ ಕೆಸಿಸಿ ಕಾರ್ಡ್ ಸಹಾಯದಿಂದ, ಮೀನುಗಾರರು, ಜಾನುವಾರು ಸಾಕಣೆದಾರರು ಸೇರಿದಂತೆ 1.5 ಕೋಟಿ ರೈತರು ಕೃಷಿ ಸಂಬಂಧಿತ ಕೆಲಸಗಳಿಗೆ ಅಗ್ಗದ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ತೆಗೆದುಕೊಳ್ಳುವ ಸೌಲಭ್ಯವನ್ನು ಪಡೆದಿದ್ದಾರೆ. ಸರ್ಕಾರ ನೀಡುವ ಕ್ರೆಡಿಟ್ ಕಾರ್ಡ್‌ಗಳ ಒಟ್ಟು ಖರ್ಚು ಮಿತಿ 1.35 ಲಕ್ಷ ಕೋಟಿ ರೂ.

1 /5

2 /5

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 1998ರಲ್ಲಿ ಪರಿಚಯಿಸಲಾಯಿತು. ಕೃಷಿ ಕೆಲಸದ ಯಾವುದೇ ಕಷ್ಟದ ಸಮಯದಲ್ಲಿ ರೈತರಿಗೆ ಸಾಲ ನೀಡುವುದು ಇದರ ಉದ್ದೇಶವಾಗಿತ್ತು. ಸ್ವಾವಲಂಬಿ ಭಾರತ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರ್ಕಾರವು 2.5 ಲಕ್ಷ ಕೋಟಿ ರೂ.ಗಳ ಖರ್ಚು ಮಿತಿಯೊಂದಿಗೆ 2.5 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದಾಗಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿತ್ತು. ಈ ಪ್ಯಾಕೇಜ್ ಅಡಿಯಲ್ಲಿ ಈ 1.5 ಕೋಟಿ ರೈತರಿಗೆ ಈ ಕೆಸಿಸಿ ಕಾರ್ಡ್‌ಗಳನ್ನು ವಿತರಿಸಲಾಗಿದೆ.

3 /5

ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ರೈತರಿಗೆ ಸಾಲದ ಬಡ್ಡಿಗೆ ಶೇ 2 ರಷ್ಟು ಸಹಾಯಧನವನ್ನು ಭಾರತ ಸರ್ಕಾರ ನೀಡುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇಕಡಾ 3 ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ರೀತಿಯಾಗಿ ಕೆಸಿಸಿಯ ವಾರ್ಷಿಕ ಬಡ್ಡಿದರವು ಶೇಕಡಾ 4 ಕ್ಕೆ ಬರುತ್ತದೆ.

4 /5

ರೈತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು 2019ರಲ್ಲಿ ಕೆಸಿಸಿಯಲ್ಲಿ ಬಡ್ಡಿದರದಲ್ಲಿ ಡೈರಿ ಉದ್ಯಮಕ್ಕೆ ಮಾತ್ರವಲ್ಲದೆ ಜಾನುವಾರು ಸಾಕಣೆ ಮತ್ತು ಮೀನುಗಾರರಿಗೂ ಸಹಾಯಧನ ನೀಡುವುದಾಗಿ ಘೋಷಿಸಿದೆ. ಅಲ್ಲದೆ ಯಾವುದೇ ಗ್ಯಾರಂಟಿ ಇಲ್ಲದೆ ನೀಡುವ ಕೆಸಿಸಿ ಸಾಲದ ಮಿತಿಯನ್ನು 1 ಲಕ್ಷದಿಂದ 1.60 ಲಕ್ಷಕ್ಕೆ ಹೆಚ್ಚಿಸಲಾಗಿದೆ.

5 /5

ಕೈಗೆಟುಕುವ ಬಡ್ಡಿದರದಲ್ಲಿ ಸಾಲ ನೀಡುವ ಈ ಅಭಿಯಾನವು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಅಭಿಯಾನವು ನಮ್ಮ ದೇಶಕ್ಕೆ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.