Anchor Aparna: ನಿರೂಪಕಿ ಅಪರ್ಣಾ ಅವರ ತಂದೆ ಯಾರು ಗೊತ್ತಾ? ಇವರೂ ತುಂಬಾ ಫೇಮಸ್!

Anchor Aparna Father: ಬಣ್ಣದ ಲೋಕದಲ್ಲಿ ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡ ಪ್ರತಿಭೆ ಎಂದರೇ ಅದು ಅಪರ್ಣಾ ವಸ್ತಾರೆ.. ಅಚ್ಚ ಕನ್ನಡದಲ್ಲಿ ಮಾತನಾಡುತ್ತಾ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಈ ಚೆಲುವೆ ನಿರೂಪಣಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. 

1 /6

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ.. ಅಲ್ಲದೇ ತಮಗೆ ಈ ಕಾಯಿಲೆ ಇದೆ ಎಂದು ಹೇಳಿಕೊಂಡಿರಲಿಲ್ಲ.. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರೂಪಕಿ ಜುಲೈ 11ರ ರಾತ್ರಿ 9;30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ..  

2 /6

ಮೂಲಕತಃ ಚಿಕ್ಕಮಂಗಳೂರಿನ ಪಂಚನ ಹಳ್ಳಿಯವರಾದ ಅಪರ್ಣಾ ಅವರ ತಂದೆ ಕೆ. ಎಸ್.‌ ನಾರಾಯಣಸ್ವಾಮಿ.. ಇವರು ಸಿನಿಮಾ ಪತ್ರಕರ್ತರಾಗಿದ್ದರು..   

3 /6

ಇನ್ನು ಶಾಲಾ ದಿನಗಳಲ್ಲಿಯೇ ನಿರೂಪಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಪರ್ಣಾ ಇಂದು ಸ್ಯಾಂಡಲ್‌ವುಡ್‌ ಲೋಕದಲ್ಲಿ ಮೈಲಿಗಲ್ಲಾಗಿದ್ದಾರೆ..  

4 /6

ಇವರ ಪತಿ ನಾಗರಾಜ್‌ ವಸ್ತಾರೆ ಅವರೂ ಸಹ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ.. ಆದರೆ ಈ ದಂಪತಿಗೆ ಮಕ್ಕಳಾಗಿಲ್ಲ ಅನ್ನೋ ಕೊರಗಿತ್ತು..  

5 /6

ನಿರೂಪಣಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಅಪರ್ಣಾ ವರಿಗೆ ನಿರೂಪಣೆ ಕುರಿತು ಶಾಲೆ ಆರಂಭಿಸುವ ಆಸೆ ಇತ್ತು.. ಆದರೆ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ..   

6 /6

ಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ ಕಲಾವಿದೆ ಅಪರ್ಣಾ ಅವರು ಕಿರುತೆರೆ, ಹಾಗೂ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ.