ಡಬಲ್ ಚಿನ್ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತೆ ಫೇಶಿಯಲ್ ಯೋಗ

ಫೇಶಿಯಲ್ ಯೋಗದಿಂದ ಡಬಲ್ ಚಿನ್ ಸಮಸ್ಯೆಗೆ ಹೇಳಿ ಗುಡ್ ಬೈ 

ಡಬಲ್ ಚಿನ್ ಸಮಸ್ಯೆಯು ಮುಖದ ಸೌಂದರ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ಫೇಶಿಯಲ್ ಯೋಗ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮುಖಕ್ಕೆ ಸಂಬಂಧಿಸಿದ ಕೆಲವು ಯೋಗಗಳ ಸಹಾಯದಿಂದ ಮುಖದಲ್ಲಿ ಶೇಖರವಾಗಿರುವ ಕೊಬ್ಬನ್ನು ಕಡಿಮೆ ಮಾಡಬಹುದು.

2 /5

ಫೇಶಿಯಲ್ ಯೋಗ ಮಾಡಲು ಹಲವು ವಿಧಾನಗಳಿವೆ. ಆದರೆ, ಇವೆಲ್ಲದರ ಉದ್ದೇಶ ಒಂದೇ, ಮುಖದ ಚಲನೆಯನ್ನು ಹೆಚ್ಚಿಸುವುದು. ಈ ಕಾರಣದಿಂದಾಗಿ ಮುಖದ ಚಟುವಟಿಕೆಗಳು ಹೆಚ್ಚಾಗುತ್ತವೆ. ಇದರಿಂದ ಮುಖದಲ್ಲಿ ಕೊಬ್ಬು ಶೇಖರಣೆಯನ್ನು ತಡೆಯಬಹುದು.

3 /5

ಬಲೂನ್ ಭಂಗಿ: ಸಾಮಾನ್ಯವಾಗಿ ನಾವು ಬಾಯಿ ಮುಕ್ಕಳಿಸುವಾಗ ಈ ಭಂಗಿಯನ್ನು ಬಳಸುತ್ತೇವೆ. ಬಾಯಿಯಲ್ಲಿ ಸಾಧ್ಯವಾದಷ್ಟು ಗಾಳಿಯನ್ನು ತುಂಬಿಸಿ.  ನಂತರ ಇದೆ ಭಂಗಿಯಲ್ಲಿ ಬಾಯಿ ಮುಕ್ಕಳಿಸುವಂತೆ ಮಾಡಿ. ದಿನಕ್ಕೆ 5 ರಿಂದ 7 ಬಾರಿ ಹೀಗೆ ಮಾಡಿದರೆ ಡಬಲ್ ಚಿನ್ ಹೋಗುವುದು ಮಾತ್ರವಲ್ಲದೆ ದವಡೆಯ ಮೂಳೆಗಳು ಗಟ್ಟಿಯಾಗುತ್ತವೆ.

4 /5

ಮೀನಿನ ಭಂಗಿ:  ಕೆನ್ನೆಗಳನ್ನು ಎರಡೂ ಬದಿಯಿಂದ ಒಳಕ್ಕೆ ಎಳೆದು ತುಟಿಯನ್ನು ಮೀನಿನ ಆಕಾರಕ್ಕೆ ತರುವ ಆಟವನ್ನು ಸಣ್ಣ ವಯಸ್ಸಿನಲ್ಲಿ ನಾವು ಆಡಿಯೇ ಇರುತ್ತೇವೆ. ಇದೂ ಕೂಡ ಡಬಲ್ ಚಿನ್ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.

5 /5

ಸಿಂಹದ ಭಂಗಿ: ಈ ಭಂಗಿಯಲ್ಲಿ, ನಿಮ್ಮ ನಾಲಿಗೆಯನ್ನು ಪೂರ್ಣ ಬಲದಿಂದ ಹೊರತೆಗೆಯಿರಿ ಮತ್ತು ಬಾಯಿಯಲ್ಲಿ ಗಾಳಿಯನ್ನು ತುಂಬುವ ಮೂಲಕ ನಾಲಿಗೆಯನ್ನು ಬಲ ಮತ್ತು ಎಡಕ್ಕೆ ಸರಿಸಿ, ಹೀಗೆ ಮಾಡುವುದರಿಂದ ನಿಮ್ಮ ಮುಖದ ಚರ್ಮವು ಬಿಗಿಯಾಗುತ್ತದೆ ಮತ್ತು ಮುಖದಲ್ಲಿ ಶೇಕಹರವಾಗಿರುವ ಹೆಚ್ಚುವರಿ ಕೊಬ್ಬು ಕೂಡ ಕರಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.