Evening Vastu Tips: ಮುಸ್ಸಂಜೆಯಲ್ಲಿ ಮಾಡುವ ಈ ತಪ್ಪುಗಳಿಂದ ನಾಶವಾಗುತ್ತೆ ಮನೆಯ ಸಂಪತ್ತು

Evening Vastu Tips: ವಾಸ್ತು ಪ್ರಕಾರ, ಸಂಜೆ ವೇಳೆ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...

Evening Vastu Tips: ಧಾರ್ಮಿಕ ಗ್ರಂಥಗಳಲ್ಲಿ ಸೂರ್ಯಾಸ್ತದ ಸಮಯಕ್ಕೆ ಕೆಲವು ನಿಯಮಗಳನ್ನು ನೀಡಲಾಗಿದೆ. ಮುಸ್ಸಂಜೆ ವೇಳೆಯಲ್ಲಿ ಈ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಅದೃಷ್ಟ ಬರುತ್ತದೆ, ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂಬುದು ನಂಬಿಕೆಯಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ಈ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದು ಮನೆಯಲ್ಲಿ ಸಮಸ್ಯೆಗಳನ್ನು, ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ವಾಸ್ತು ಪ್ರಕಾರ, ಸಂಜೆ ವೇಳೆ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮುಸ್ಸಂಜೆಯಲ್ಲಿ ಕಸ ಗುಡಿಸುವುದು: ಸೂರ್ಯಾಸ್ತದ ಸಮಯದಲ್ಲಿ ಮತ್ತು ಅದರ ನಂತರ ಕಸ ಗುಡಿಸುವುದನ್ನು ತಪ್ಪಿಸಬೇಕು.  ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಬಡತನವು ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ.

2 /5

ಸಂಜೆ ನಿದ್ರಿಸುವುದು: ಮನೆಯಲ್ಲಿ ಹಿರಿಯರು ಮುಸ್ಸಂಜೆ ಹೊತ್ತಲ್ಲಿ ಮಲಗದಂತೆ ಸಲಹೆ ನೀಡುತ್ತಾರೆ. ಆದಾಗ್ಯೂ, ಕೆಲವರಿಗೆ ಸಂಜೆ ವೇಳೆ ನಿದ್ರಿಸುವ ಅಭ್ಯಾಸ ಇರುತ್ತದೆ. ಆದರೆ, ಸಂಜೆ ಮಲಗುವುದನ್ನು ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ.  ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಅನೇಕ ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ಈ ಸಮಯವು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿ ಮನೆ ಪ್ರವೇಶಿಸುವ ಸಮಯವಾದ್ದರಿಂದ ಸಂಜೆ ಹೊತ್ತಲ್ಲಿ ಮಾಡುವ ಈ ತಪ್ಪಿನಿಂದ ತಾಯಿ ಕೋಪಗೊಳ್ಳುತ್ತಾರೆ. ಈ ಸಮಯದಲ್ಲಿ ಮಲಗುವುದರಿಂದ ಹಣದ ನಷ್ಟ, ಆದಾಯದಲ್ಲಿ ಅಡಚಣೆ ಉಂಟಾಗುತ್ತದೆ ಮತ್ತು ಆಯುಷ್ಯವೂ ಕಡಿಮೆಯಾಗುತ್ತದೆ ಎನ್ನಲಾಗುವುದು.

3 /5

ತುಳಸಿಯನ್ನು ಸ್ಪರ್ಶಿಸುವುದು:  ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದು ತುಂಬಾ ಅಶುಭ. ಹಾಗೆಯೇ, ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.   

4 /5

ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು: ಸಂಜೆಯ ವೇಳೆಯಲ್ಲಿ ಯಾರೂ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಹಾಗೆ ಮಾಡುವುದು ತುಂಬಾ ಅಶುಭ. ಸಂಜೆಯ ವೇಳೆ ಹೊಸ್ತಿಲಲ್ಲಿ ಜನರು ಕುಳಿತಿರುವ ಮನೆಗೆ ತಾಯಿ ಲಕ್ಷ್ಮಿ ಪ್ರವೇಶಿಸುವುದಿಲ್ಲ ಎನ್ನಲಾಗುವುದು.

5 /5

ಸಂಜೆ ಬಿಳಿ ವಸ್ತುಗಳ ದಾನ: ಸೂರ್ಯಾಸ್ತದ ಸಮಯದಲ್ಲಿ ಮತ್ತು ನಂತರ ಮೊಸರು, ಹಾಲು, ಉಪ್ಪು ದಾನ ಮಾಡಬಾರದು. ಈ ವಸ್ತುಗಳು ತಾಯಿ ಲಕ್ಷ್ಮಿಗೆ ಸಂಬಂಧಿಸಿವೆ ಮತ್ತು ಸಂಜೆ ಈ ವಸ್ತುಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಇದರಿಂದ ಅಂತಹ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗಿ ಹಣದ ಕೊರತೆ ಕಾಡುತ್ತದೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.