Egg Side Effects: ಈ ಸಮಸ್ಯೆ ಇರುವವರು ಮರೆತೂ ಸಹ ಮೊಟ್ಟೆ ತಿನ್ನಬಾರದು

Egg Side Effects: ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಕೆಲವು ಅರೋಗ್ಯ ಸಮಸ್ಯೆ ಹೊಂದಿರುವವರು ಮಿಸ್ ಆಗಿಯೂ ಮೊಟ್ಟೆ ತಿನ್ನಲೇಬಾರದು.

Egg Side Effects: ಮೊಟ್ಟೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಮಿಸ್ ಆಗಿಯೂ ಸಹ ಮೊಟ್ಟೆಯನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಯಾವ ಆರೋಗ್ಯ ಸಮಸ್ಯೆ ಇರುವವರು ಮೊಟ್ಟೆ ತಿನ್ನಬಾರದು ಎಂದು ತಿಳಿಯೋಣ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೊಟ್ಟೆಯ ದುಷ್ಪರಿಣಾಮಗಳು : ಮೊಟ್ಟೆಯು ಪೋಷಕಾಂಶಗಳಿಂದ ತುಂಬಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಏಕೆಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್, ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಮತ್ತು ರಂಜಕವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಮೊಟ್ಟೆಗಳನ್ನು ತಿನ್ನುವುದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಂದಹಾಗೆ, ಹೆಚ್ಚಿನ ಜನರು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಮಿಸ್ ಆಗಿಯೂ ಸಹ ಮೊಟ್ಟೆಯನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಯಾವ ಆರೋಗ್ಯ ಸಮಸ್ಯೆ ಇರುವವರು ಮೊಟ್ಟೆ ತಿನ್ನಬಾರದು ಎಂದು ತಿಳಿಯೋಣ....

2 /5

ಮೂತ್ರಪಿಂಡ ಸಮಸ್ಯೆ ಇರುವವರು:  ಕಿಡ್ನಿ ಸಮಸ್ಯೆ ಇರುವವರು ಮೊಟ್ಟೆ ಸೇವನೆ ಮಾಡಬಾರದು. ಏಕೆಂದರೆ ಮೊಟ್ಟೆ ಸೇವನೆಯಿಂದ ಕಿಡ್ನಿ ಸಮಸ್ಯೆ ಹೆಚ್ಚುತ್ತದೆ. ಆದ್ದರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಮೊಟ್ಟೆಯನ್ನು ಸೇವಿಸಬಾರದು.

3 /5

ತೂಕ ಹೆಚ್ಚಳ:  ಈಗಾಗಲೇ ಅಧಿಕ ತೂಕ ಹೊಂದಿರುವವರು ಮೊಟ್ಟೆಯನ್ನು ಸೇವಿಸಬಾರದು. ಏಕೆಂದರೆ ಮೊಟ್ಟೆ ತಿನ್ನುವುದರಿಂದ ತೂಕ ವೇಗವಾಗಿ ಹೆಚ್ಚುತ್ತದೆ.ಇನ್ನೊಂದೆಡೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ ಮೊಟ್ಟೆಯನ್ನು ಸೇವಿಸಬೇಡಿ. ಏಕೆಂದರೆ ಮೊಟ್ಟೆಗಳು ನಿಮ್ಮ ತೂಕವನ್ನು ಹೆಚ್ಚಿಸಬಹುದು.

4 /5

ಮಧುಮೇಹ:  ಮಧುಮೇಹ ಇರುವವರು ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು. ಮಧುಮೇಹ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ನಂತರವಷ್ಟೇ ಮೊಟ್ಟೆ ಸೇವಿಸಬೇಕು. ಏಕೆಂದರೆ ಮೊಟ್ಟೆ ತಿಂದರೆ ಮಧುಮೇಹಿಗಳಿಗೆ ಸಮಸ್ಯೆ ಉಂಟಾಗುತ್ತದೆ.

5 /5

ಕೊಲೆಸ್ಟ್ರಾಲ್:  ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರೂ ಸಹ ಮೊಟ್ಟೆಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚುತ್ತದೆ ಅದೇ ಸಮಯದಲ್ಲಿ ಹೃದ್ರೋಗ ಸಮಸ್ಯೆ ಇರುವವರು ಕೂಡ ಮೊಟ್ಟೆ ಸೇವಿಸಬಾರದು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ತಜ್ಞರನ್ನು ಸಂಪರ್ಕಿಸಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.