ಬೇಸಿಗೆಯಲ್ಲಿ ಮಾವಿನ ಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಅದ್ಭುತ ಪ್ರಯೋಜನ

                                        

Raw Mangoes Health Benefits: ಕೆಲವರಿಗೆ ಮಾವಿನಕಾಯಿಯ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಮಾವಿನ ಕಾಯಿಯನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಭಾರತೀಯ ಖಾದ್ಯಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿಯನ್ನು ಸವಿಯದವರು ತೀರಾ ವಿರಳ ಎಂತಲೇ ಹೇಳಬಹುದು. ಆದರೆ, ಬೇಸಿಗೆ ಕಾಲದಲ್ಲಿ ಮಾವಿನಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೇ? 

2 /6

ಬೇಸಿಗೆಯಲ್ಲಿ ಮಾವಿನಕಾಯಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

3 /6

ಮಾವಿನಕಾಯಿಯಲ್ಲಿ ಕಂಡು ಬರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್, ರಕ್ತದ ಹರಿವು ಮತ್ತು ಆರೋಗ್ಯಕರ ಹೃದಯವನ್ನು ಬೆಂಬಲಿಸುತ್ತದೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪ್ರಬಲವಾದ ಉತ್ಕರ್ಷಣ ನಿರೋಧಕವಾದ ಮ್ಯಾಂಗಿಫೆರಿನ್ ಕೂಡ ಇದರಲ್ಲಿ ಕಂಡು ಬರುತ್ತದೆ. 

4 /6

ಮಾವಿನ ಕಾಯಿ ಅಮೈಲೇಸ್‌ಗಳೆಂಬ ಜೀರ್ಣಕಾರಿ ಕಿಣ್ವಗಳನ್ನು ಒಳಗೊಂಡಿರುತ್ತವೆ, ಇದು ದೊಡ್ಡ ಆಹಾರದ ಅಣುಗಳನ್ನು ಒಡೆಯುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯು ಸುಲಭವಾಗುತ್ತದೆ. 

5 /6

ಮಾವಿನ ಕಾಯಿಯಲ್ಲಿರುವ ಪೋಷಕಾಂಶಗಳು ದೇಹದ ನಿರ್ವಿಶೀಕರಣ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಹೆಚ್ಚುವರಿಯಾಗಿ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

6 /6

ಮಾವಿನ ಕಾಯಿಯಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಅಂಶ ಕಡಿಮೆ ಇರಲಿದೆ. ಮಾವಿನಕಾಯಿ ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.