ಕೇವಲ ಸ್ಮಾರ್ಟ್ಫೋನ್ ಮೂಲಕವೇ ಮನೆಯಲ್ಲಿಯೇ ಕುಳಿತು ನೀವು ಕೂಡ ಕೈತುಂಬಾ ಹಣ ಗಳಿಸಬಹುದು.
ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ಫೋನ್ ಇರುತ್ತದೆ. ಫೋನಿನಲ್ಲಿಯೇ ನಮಗೆ ಎಲ್ಲವೂ ಸಿಗುತ್ತದೆ. ಪ್ರತಿಯೊಬ್ಬರಿಗೂ ಇಂದು ಫೋನ್ ತುಂಬಾ ಉಪಯುಕ್ತವಾಗಿದೆ. ಅದರ ಮೂಲಕ ನೀವು ಹಣವನ್ನು ಕೂಡ ಗಳಿಸಬಹುದು. ಹೌದು ಇಂತಹ ಅನೇಕ ಆ್ಯಪ್ ಗಳಿವೆ, ಇವು ಜನರಿಗೆ ಕೈತುಂಬಾ ಹಣ ಗಳಿಸುವ ಅವಕಾಶವನ್ನು ನೀಡುತ್ತವೆ. ನೀವು ಕೂಡ ಮನೆಯಲ್ಲಿಯೇ ಕುಳಿತುಕೊಂಡು ಸುಮ್ಮನೇ ಕಾಲ ಕಳೆಯುವ ಬದಲು ಬಿಡುವಿನ ಸಮಯದಲ್ಲಿ ಮೊಬೈಲ್ ಮೂಲಕವೇ ಹಣ ಗಳಿಸಬಹುದು. ಇದಕ್ಕೆ ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಹಾಗೂ ಯಾವುದೇ ರೀತಿಯ ಬಂಡವಾಳ ಹೂಡುವ ಅಗತ್ಯವಿಲ್ಲ. ಮೊಬೈಲ್ ಮೂಲಕ ಮನೆಯಲ್ಲಿಯೇ ಕುಳಿತು ಹಣ ಗಳಿಸುವುದು ಹೇಗೆಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇದು ಭಾರತೀಯ ಆ್ಯಪ್ ಆಗಿದ್ದು, ಕ್ಯಾಶ್ ಬ್ಯಾಕ್ ನೀಡುತ್ತದೆ. ಈ ಆ್ಯಪ್ ಮೂಲಕ ಹಣ ಗಳಿಸುವುದು ತುಂಬಾ ಸುಲಭ. ಇಲ್ಲಿ ನೀವು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಅನುಯಾಯಿಗಳಿಗೆ ಡೀಲ್ಗಳನ್ನು ಹಂಚಿಕೊಳ್ಳಬೇಕು. ಇದಕ್ಕೆ ಮೊದಲು ನೀವು ಇ-ಕಾಮರ್ಸ್ ವೆಬ್ಸೈಟ್ ಜೊತೆಗೆ ಒಪ್ಪಂದ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಆ ವೆಬ್ಸೈಟ್ ನೀಡುವ ಲಿಂಕ್ ಅನ್ನು EarnKaro ಲಿಂಕ್ನಲ್ಲಿ ಹಂಚಿಕೊಳ್ಳಬೇಕು. ಇದನ್ನು ನೀವು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿಯೂ ಹಂಚಿಕೊಳ್ಳಬಹುದು. EarnKaro ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಪ್ರಚಾರ ಮಾಡಿದರೆ ನಿಮಗೆ ಹಣ ಸಿಗುತ್ತದೆ.
ನೀವು ಹಂಚಿಕೊಂಡ ಲಿಂಕ್ ತೆರೆಯುವ ಮೂಲಕ ಯಾರಾದರೂ ಶಾಪಿಂಗ್ ಮಾಡಿದರೆ ನೀವು ಆತನ ನಗದು ಕಮಿಷನ್ ಪಡೆಯುತ್ತೀರಿ. ನೀವು ಈ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸಹ ಸಾಧ್ಯವಾಗುತ್ತದೆ. ಈ ಅಪ್ಲಿಕೇಶನ್ ಗೂಗಲ್ನಲ್ಲಿ ಅಗ್ರ ಪಟ್ಟಿ ಮಾಡಲಾಗಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ವೈಸೆನ್ಸ್ ಆ್ಯಪ್ ಮೂಲಕ ಅನೇಕ ದೊಡ್ಡ ಕಂಪನಿಗಳು ಜನರಿಂದ ಅಭಿಪ್ರಾಯ ಕೇಳುತ್ತವೆ. ಇದರ ಮೇಲೆ ಅನೇಕ ಸಮೀಕ್ಷೆಗಳಿವೆ, ಅದನ್ನು ಪೂರ್ಣಗೊಳಿಸಿದ ನಂತರ ಡಾಲರ್ಗಳ ಲೆಕ್ಕದಲ್ಲಿ ಹಣ ಗಳಿಸಬಹುದು. ನೀವು ಕೂಡ ಇಂತಹ ಸಮೀಕ್ಷೆಗಳಲ್ಲಿ ಭಾಗವಹಿಸಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೆಕು. ಹಣ ಮಾತ್ರವಲ್ಲದೆ ನಿಮಗೆ ಗಿಫ್ಟ್ ವೋಚರ್ಗಳನ್ನು ಸಹ ನೀಡಲಾಗುತ್ತದೆ. ನೀವು ಗಳಿಸಿದ ಹಣವನ್ನು ಸಹ ಪಡೆದುಕೊಳ್ಳಬಹುದು. ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಟಾಸ್ಕ್ ಮೇಟ್ ಒಂದು ಗೂಗಲ್ ಆ್ಯಪ್ ಆಗಿದ್ದು, ಇದು ಪ್ರಸ್ತುತ ಬೀಟಾ ಆವೃತ್ತಿಯಲ್ಲಿದೆ. ಅಂದರೆ ಕೆಲವೇ ಜನರು ಇದನ್ನು ಬಳಸಬಹುದು. ಪ್ರಪಂಚದಾದ್ಯಂತದ ವ್ಯವಹಾರಗಳು ಈ ಆ್ಯಪ್ ನಲ್ಲಿ ಸಣ್ಣ ಕಾರ್ಯಗಳನ್ನು ನೀಡುತ್ತವೆ. ಉದಾಹರಣೆಗೆ ಇಂಗ್ಲಿಷ್ನ ಸಾಲನ್ನು ನಿಮ್ಮ ಭಾಷೆಗೆ ಭಾಷಾಂತರಿಸಲು, ರೆಸ್ಟೋರೆಂಟ್ನ ಚಿತ್ರವನ್ನು ತೆಗೆದುಕೊಳ್ಳಲು, ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ನೀಡುವುದು. ಹೀಗೆ ನಿಮ್ಮ ಆಯ್ಕೆಯ ಕೆಲಸವನ್ನು ಇಲ್ಲಿ ಮಾಡಬಹುದು. ಈ ಕೆಲಸವನ್ನು ಪೂರ್ಣಗೊಳಿಸಿದರೆ ನೀವು ಹಣ ಪಡೆಯುತ್ತೀರಿ. ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ 1 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ.