Instant Relief From Heat:ಭಾರತದಲ್ಲಿ ಬಿಸಿಲಿನ ಶಾಖಕ್ಕೆ ಎಲ್ಲರು ತತ್ತರಿಸಿ ಹೋಗಿದ್ದಾರೆ, ಶಾಖದ ಈ ತೀವ್ರ ಪ್ರಭಾವದಿಂದ ಪಾರಾಗಲು ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.
Instant Relief From Heat: ಭಾರತದಲ್ಲಿ ಬಿಸಿಲಿನ ಶಾಖಕ್ಕೆ ಎಲ್ಲರು ತತ್ತರಿಸಿ ಹೋಗಿದ್ದಾರೆ, ಶಾಖದ ಈ ತೀವ್ರ ಪ್ರಭಾವದಿಂದ ಪಾರಾಗಲು ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ತಂಪು ಪಾನೀಯಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಶಾಮೀಲುಗೊಳಿಸಿದರೆ ಉತ್ತಮ.
ಇದನ್ನೂ ಓದಿ-Chyawanprash In Summer: ಬೇಸಿಗೆಯಲ್ಲಿ ಚವನ್ ಪ್ರಾಶ್ ಎಷ್ಟು ಹಿತಕಾರಿ? ಆರೋಗ್ಯದ ವಿಷಯದಲ್ಲಿ ರಿಸ್ಕ್ ಬೇಡ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಹಣ್ಣುಗಳ ನೀರು - ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕುವುದರಿಂದ ಅದರಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ ಹಾಗೂ ಅದು ನಮ್ಮ ದೇಹದ ಹೈಡ್ರೇಶನ್ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹಣ್ಣುಗಳ ನೀರು ನಮ್ಮ ದೇಹಕ್ಕೆ ಒಂದು ಉತ್ತಮ ಆರೋಗ್ಯಕರ ಆಯ್ಕೆ ಸಾಬೀತಾಗುವ ಸಾಧ್ಯತೆ ಇದೆ.
2. ನಿಂಬೆ ನೀರು - ನಿಂಬೆ ನೀರನ್ನು ಅತಿ ಹೆಚ್ಚು ಹೈಡ್ರೇಟೆಡ್ ಪಾನೀಯ ಎಂದು ಪರಿಗಣಿಸಲಾಗುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ಎರಡು ನಿಂಬೆ ಹಾಗೂ ಚಿಟಿಕೆ ಉಪ್ಪು ಹಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ ಹಾಗೂ ಶರೀರದ ನೀರಿನ ಕೊರತೆ ನೀಗುತ್ತದೆ.
3. ಆಲೋವೆರಾ ನೀರು - ಅಲೋವೆರಾ ನೀರು ಬೇಸಿಗೆಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದಲ್ಲದೇ ಇದನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ.
4. ಕ್ಯಾಫಿನ್ ರಹಿತ ಚಹಾ - ಕ್ಯಾಫಿನ್ ರಹಿತ ಚಹಾ ಕೂಡ ಹೈಡ್ರೇಟೆಡ್ ಆಗಿರಲು ಒಂದು ಉತ್ತಮ ಆಯ್ಕೆಯಾಗಿದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ಕಪ್ಪು, ಹಸಿರು ಅಥವಾ ಗಿಡಮೂಲಿಕೆ ಚಹಾವನ್ನು ಶಾಮೀಲುಗೊಳಿಸಬಹುದು. ಇದರ ಆಂಟಿಆಕ್ಸಿಡೆಂಟ್ ಗುಣಗಳು ನಮ್ಮ ಆರೋಗ್ಯಕ್ಕೆತುಂಬಾ ಪ್ರಯೋಜನಕಾರಿಯಾಗಿವೆ
5. ಎಳನೀರು - ಎಳನೀರು ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಬೇಸಿಗೆಯಲ್ಲಿ, ನಮಗೆ ದಣಿದ ಅನುಭವವಾದಾಗ, ಎಳನೀರು ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ.