ತುಳಸಿ ಕಟ್ಟೆಯ ಬಳಿ ಅಪ್ಪಿತಪ್ಪಿಯೂ ʼಈʼ ಗಿಡವನ್ನ ನೆಡಬೇಡಿ; ಹಣದ ಸಮಸ್ಯೆಯ ಜೊತೆಗೆ ಬಡತನ ಬರುತ್ತೆ!!

Tulsi plant puja Rules: ತುಳಸಿ ಗಿಡದ ಬಳಿ ಶಮಿ ಗಿಡ ಮಾತ್ರವಲ್ಲ, ಮುಳ್ಳು ಹೊಂದಿರುವ ಗಿಡಗಳನ್ನು ಸಹ ಬೆಳೆಸಬಾರದು. ಮುಳ್ಳುಗಳಿರುವ ಗಿಡಗಳನ್ನು ಬೆಳೆಸಿ ಪೂಜಿಸುವುದರಿಂದ ತುಳಸಿ ಗಿಡದಲ್ಲಿನ ಶಕ್ತಿ ಕಡಿಮೆಯಾಗಬಹುದು. ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಅಂತಾ ಹೇಳಲಾಗಿದೆ.

Tulasi in Hinduism: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂದು ನಂಬಲಾಗಿದೆ. ತುಳಸಿ ಗಿಡದ ಪೂಜೆಯನ್ನು ನಿಯಮಗಳ ಪ್ರಕಾರವೇ ಮಾಡಬೇಕು. ಅದನ್ನು ಮನೆಯ ಉತ್ತಮ ದಿಕ್ಕಿನಲ್ಲಿ ಇಟ್ಟು ಪೂಜಸಬೇಕು ಹಾಗೂ ಅದು ಒಣಗದಂತೆ ನೋಡಿಕೊಳ್ಳಬೇಕು. ಪವಿತ್ರ ತುಳಸಿ ಗಿಡದ ಬಳಿ ಕೆಲವು ಗಿಡಗಳನ್ನು ನೆಡಬಾರದು. ಅದನ್ನು ನೆಟ್ಟರೆ ಹಣದ ಸಮಸ್ಯೆಯ ಜೊತೆಗೆ ಬಡತನ ಬರುತ್ತದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಹಿಂದೂ ಧರ್ಮದಲ್ಲಿ ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇದೆ. ಅದರಂತೆ ಹಿಂದೂ ಪುರಾಣಗಳಲ್ಲಿ ತುಳಸಿ ಗಿಡಕ್ಕೆ ತುಂಬಾ ಮಹತ್ವದ ಸ್ಥಾನವಿದೆ. ಬಹುತೇಕರು ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಾರೆ. ಈ ತುಳಿಸಿ ಗಿಡವನ್ನು ಪ್ರತಿನಿತ್ಯ ಪೂಜಿಸುವುದರಿಂದ ಸುಖ-ಶಾಂತಿ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

2 /7

ನಿಯಮಗಳ ಪ್ರಕಾರವೇ ತುಳಸಿ ಗಿಡದ ಪೂಜೆಯನ್ನು ಮಾಡಬೇಕು. ಇದನ್ನು ಪ್ರತಿಯೊಬ್ಬರೂ ತಿಳಿಯುವುದು ಮುಖ್ಯ. ತುಳಸಿ ಗಿಡವನ್ನು ಮನೆಯ ಸರಿಯಾದ ದಿಕ್ಕಿನಲ್ಲಿಟ್ಟು ಪೂಜಸಬೇಕು ಹಾಗೂ ಅದು ಒಣಗದಂತೆ ನೋಡಿಕೊಳ್ಳಬೇಕು. ಆದರೆ ತುಳಸಿ ಗಿಡದ ಜೊತೆಗೆ ಒಂದು ಗಿಡವನ್ನು ಪೂಜಿಸಿದರೆ ಕೆಡುಕು ಉಂಟಾಗುತ್ತದೆ ಅಂತಾ ಹೇಳಲಾಗಿದೆ. ಹಾಗಾದರೆ ತುಳಸಿ ಗಿಡದ ಜೊತೆಗೆ ಯಾವ ಗಿಡವನ್ನು ಪೂಜಿಸಬಾರದು ಎಂಬುದರ ಬಗ್ಗೆ ತಿಳಿಯಿರಿ.  

3 /7

ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವು ವಿಷ್ಣುದೇವನಿಗೆ ಹೆಚ್ಚು ಪ್ರಿಯವಾದ ಸಸ್ಯವಾಗಿದೆ. ಹೀಗಾಗಿ ನೀವು ಈ ಗಿಡವನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿದೇವಿಯ ಅನುಗ್ರಹ ಪಡೆದುಕೊಳ್ಳುತ್ತೀರಿ. ಈ ಗಿಡವು ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಲು ಸಹಕಾರಿಯಾಗಿದೆ.

4 /7

ಅನೇಕ ಸಂದರ್ಭದಲ್ಲಿ ತುಳಸಿ ಗಿಡದ ಜೊತೆಗೆ ನಾವು ಶಮಿ ಗಿಡವನ್ನು ಸಹ ಇರಿಸಿ ಪೂಜಿಸುತ್ತೇವೆ. ಇದರಿಂದ ಶುಭಫಲ ಸಿಗುವ ಬದಲು ಅನಾನುಕೂಲವೇ ಹೆಚ್ಚು ಎನ್ನಲಾಗಿದೆ. ನಿಮ್ಮ ಮನೆಯ ಆರ್ಥಿಕ ಸ್ಥಿತಿಯ ಮೇಲೂ ಇದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗಿದೆ.

5 /7

ಮನೆಯಲ್ಲಿ ಶಮಿ ಗಿಡವನ್ನು ಬೆಳೆಸುವುದು ಸಹ ತುಳಸಿ ಗಿಡದಷ್ಟೇ ಶ್ರೇಷ್ಠವೆಂದು ನಂಬಲಾಗಿದೆ. ಆದರೆ ಈ ಗಿಡವನ್ನು ಪ್ರತ್ಯೇಕವಾಗಿ ಇರಿಸಿ ಪೂಜಿಸುವುದರಿಂದ ಅನೂಕೂಲಗಳು ಪ್ರಾಪ್ತಿಯಾಗುತ್ತವೆ ಅಂತಾ ಹೇಳಲಾಗುತ್ತದೆ. ಈ ಗಿಡವನ್ನು ತುಳಸಿ ಗಿಡದ ಜೊತೆ ಇರಿಸಿ ಪೂಜಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದಂತೆ.

6 /7

ಧಾರ್ಮಿಕ ನಂಬಿಕೆಗಳ ಹಾಗೂ ಪುರಾಣಗಳ ಪ್ರಕಾರ, ತುಳಸಿ ಗಿಡವನ್ನು ತಾಯಿ ಲಕ್ಷ್ಮಿದೇವಿಯ ರೂಪವೆಂದು ಪರಿಗಣಿಸಲಾಗಿದೆ. ಇದು ಭಗವಾನ್ ವಿಷ್ಣುವಿಗೆ ಪ್ರಿಯವಾದಂತಹ ಸಸ್ಯವಾಗಿದೆ. ಶಮಿ ಸಸ್ಯವು ಶಿವ ಮತ್ತು ಶನಿದೇವನಿಗೆ ಸಂಬಂಧಿಸಿದ ಪವಿತ್ರ ಗಿಡವಾಗಿದೆ. ಈ ಎರಡೂ ದೇವರುಗಳ ಪೂಜೆಯ ಕ್ರಮ ಬೇರೆ ಬೇರೆಯಾಗಿದೆ. ಹೀಗಾಗಿ ತುಳಸಿ ಗಿಡದ ಜೊತೆಗೆ ಶಮಿ ಗಿಡವನ್ನು ನೆಟ್ಟು ಪೂಜಿಸಬಾರದಂತೆ.

7 /7

ತುಳಸಿ ಗಿಡದ ಬಳಿ ಶಮಿ ಗಿಡ ಮಾತ್ರವಲ್ಲ, ಮುಳ್ಳು ಹೊಂದಿರುವ ಗಿಡಗಳನ್ನು ಸಹ ಬೆಳೆಸಬಾರದು. ಮುಳ್ಳುಗಳಿರುವ ಗಿಡಗಳನ್ನು ಬೆಳೆಸಿ ಪೂಜಿಸುವುದರಿಂದ ತುಳಸಿ ಗಿಡದಲ್ಲಿನ ಶಕ್ತಿ ಕಡಿಮೆಯಾಗಬಹುದು. ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಅಂತಾ ಹೇಳಲಾಗಿದೆ.