Photo Gallery: ಕೆ.ಎಲ್.ರಾಹುಲ್ ನಿರ್ಮಿಸಿದ ಟಾಪ್ ದಾಖಲೆಗಳು ಯಾವವು ಗೊತ್ತೇ?

ಟೀಂ ಇಂಡಿಯಾ ಆರಂಭಿಕ ಆಟಗಾರ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ಕೆಎಲ್ ರಾಹುಲ್ ಮಂಗಳವಾರ ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಹುಲ್ ಕಳೆದ ವಾರ ಐಪಿಎಲ್‌ನಲ್ಲಿ ವೇಗವಾಗಿ 4,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು.ಈಗ ಅವರ ಕೆಲವು ಕ್ರಿಕೆಟ್ ದಾಖಲೆಗಳನ್ನು ನೋಡೋಣ ಬನ್ನಿ 

1 /5

ಈ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

2 /5

ಮಾರ್ಚ್ 2017 ರಿಂದ ಆಗಸ್ಟ್ 2017 ರವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 7 ಅರ್ಧಶತಕಗಳನ್ನು ಗಳಿಸಿದ ದಾಖಲೆಯನ್ನು ಕೆಎಲ್ ರಾಹುಲ್ ಹೊಂದಿದ್ದಾರೆ. 

3 /5

ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಭಾರತೀಯ ಆಟಗಾರ ಕೆಎಲ್ ರಾಹುಲ್. 2016ರ ಜೂನ್‌ನಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು.

4 /5

ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವೇಗವಾಗಿ 4000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

5 /5

ಟೀಂ ಇಂಡಿಯಾದ ಆರಂಭಿಕ ಆಟಗಾರ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮಂಗಳವಾರ (ಏಪ್ರಿಲ್ 18) ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲು ರಾಹುಲ್ ತಯಾರಾಗುತ್ತಿದ್ದಾರೆ. (ಫೋಟೋ: ಬಿಸಿಸಿಐ/ಐಪಿಎಲ್)