Google Search Restriction: ಯಾವುದೇ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದರೂ ಮೊದಲು ನೆನಪಾಗೋದು ಗೂಗಲ್. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಹುಡುಕುವುದರಿಂದ ಜೈಲು ಸೇರಬಹುದು ಎಂದು ನಿಮಗೆ ತಿಳಿದಿದೆಯೇ?
Google Search Restriction: ಯಾವುದೇ ರೀತಿಯ ಮಾಹಿತಿಯನ್ನು ಬೆರಳ ತುದಿಯಲ್ಲಿ ನೀಡುವ ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಏನೇ ಡೌಟ್ ಇದ್ರೂ ಎಲ್ಲಾದಕ್ಕೂ ಗೂಗಲ್ನಲ್ಲಿ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು. ಇದಕ್ಕಾಗಿಯೇ ಗೂಗಲ್ ಅನ್ನು ಶಕ್ತಿಶಾಲಿ ಸರ್ಚ್ ಎಂಜಿನ್ ಎಂತಲೇ ಕರೆಯಲಾಗುತ್ತದೆ. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡುವುದರಿಂದ ಜೈಲು ಪಾಲಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದೊಮ್ಮೆ ಅಪ್ಪಿತಪ್ಪಿ ಇಂತಹ ಸಾಹಸಕ್ಕೆ ಕೈ ಹಾಕಿದರೆ ಅಂತಹವಾರು ಜೈಲು ಸೇರೋದು ಗ್ಯಾರಂಟಿ. ಅಂತಹ ಐದು ವಿಷಯಗಳು ಯಾವುವೆಂದರೆ...
ಡ್ರಗ್ ಉತ್ಪಾದನೆ ಅಥವಾ ಯಾವುದೇ ಇತರ ಕ್ರಿಮಿನಲ್ ಕೃತ್ಯಗಳಂತಹ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಮಾಹಿತಿಗಾಗಿ ಗೂಗಲ್ನಲ್ಲಿ ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಚೈಲ್ಡ್ ಪ್ರೋನೋಗ್ರಫಿ ಒಂದು ತುಂಬಾ ಗಂಭೀರ ವಿಚಾರವಾಗಿದೆ. ಐಟಿ ಕಾಯಿದೆಯ ಪ್ರಕಾರ, ಗೂಗಲ್ನಲ್ಲಿ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಮಾಹಿತಿ ಸರ್ಚ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗಾಗಿ, ಇಂತಹ ವಿಷಯಗಳನ್ನು ಸರ್ಚ್ ಮಾಡುವುದರಿಂದ ಜೈಲು ಕಂಬಿ ಎಣಿಸಬೇಕಾಗಬಹುದು.
ಕೆಲವರು ಬಾಂಬ್ ತಯಾರಿಕೆಯಂತಹ ಸೂಕ್ಷ್ಮ ವಿಚಾರದ ಬಗ್ಗೆಯೂ ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ, ದೇಶದ ಭದ್ರತೆಗೆ ಆತಂಕ ತಂದೊಡ್ಡುವ ಇಂತಹ ವಿಚಾರಗಳನ್ನು ಗೂಗಲ್ನಲ್ಲಿ ಹುಡುಕುವುದು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು.
ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿದರೆ ಇದೂ ಸಹ ನಿಮಗೆ ಜೈಲಿನ ಹಾದಿ ತೋರಿಸಬಹುದು. ಏಕೆಂದರೆ, ಸರ್ಕಾರ ದೇಶದ ಭದ್ರತೆ ದೃಷ್ಟಿಯಿಂದ ಇಂತಹ ವಿಚಾರಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುತ್ತದೆ.
ಗೂಗಲ್ನಲ್ಲಿ ಹ್ಯಾಕಿಂಕ್ ತಂತ್ರಗಳ ಕುರಿತು ಹುಡುಕಾಟ ನಡೆಸುವುದು ಕೂಡ ಗಂಭೀರವಾದ ಅಪರಾದವಾಗಿದೆ. ಒಂದೊಮ್ಮೆ ಇಂತಹ ವಿಚಾರಗಳನ್ನು ಸರ್ಚ್ ಮಾಡಿದ್ದೇ ಆದಲ್ಲಿ ಜೈಲು ಸೇರುವುದು ಗ್ಯಾರಂಟಿ.
ವಾಸ್ತವವಾಗಿ, ಗೂಗಲ್ ಉತ್ತಮ ಜ್ಞಾನ ಭಂಡಾರವಾಗಿದ್ದು, ನಮ್ಮ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸಿದೆ. ಹಾಗಾಗಿ ಕೆಟ್ಟ ಕೆಲಸಗಳಿಗೆ ಗೂಗಲ್ ಬಳಸುವ ಬದಲಿಗೆ, ಸಾಧ್ಯವಾದಷ್ಟು ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಬಹುದು.