Astrology: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರಿಗೂ ದಾನ ಮಾಡಬೇಡಿ

              

Astrology: ಸನಾತನ ಧರ್ಮದಲ್ಲಿ ದಾನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವರ್ಷದಲ್ಲಿ ಅನೇಕ ವ್ರತಗಳಿವೆ, ಈ ವ್ರತಾಚರಣೆ ಸಂದರ್ಭದಲ್ಲಿ  ನಿರ್ಗತಿಕರಿಗೆ ಮತ್ತು ಬಡವರಿಗೆ ದಾನವನ್ನು ನೀಡಿದಾಗ ಮಾತ್ರ ಅದರ ಸಂಪೂರ್ಣ ಫಲ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಯಾವುದನ್ನು ದಾನ ಮಾಡಬೇಕು ಮತ್ತು ಯಾವುದನ್ನು ದಾನ ಮಾಡಬಾರದು ಎಂದು ಧರ್ಮ ಪುರಾಣಗಳು ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ದಾನ ಮಾಡಬಾರದಂತಹ ವಸ್ತುಗಳ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ ವಸ್ತುಗಳನ್ನು ದಾನ ಮಾಡುವುದು ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳನ್ನು ತರುತ್ತದೆ ಎಂದು ಹೇಳಲಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸ್ಟೀಲ್ ಪಾತ್ರೆಗಳು: ಸ್ಟೀಲ್ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು, ವಿಶೇಷವಾಗಿ ಈಗಾಗಲೇ ಬಳಸಿದ ಪಾತ್ರೆಗಳನ್ನು ಬೇರೆಯವರಿಗೆ ನೀಡಬಾರದು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗುತ್ತದೆ. ಹಾಗಾಗಿ ಯಾರಿಗಾದರೂ ಪಾತ್ರೆಗಳನ್ನು ಕೊಟ್ಟರೂ ಹೊಸ ಪಾತ್ರೆಗಳನ್ನೇ ಕೊಡಿ. 

2 /5

ಪ್ಲಾಸ್ಟಿಕ್ ವಸ್ತುಗಳು: ಪ್ಲಾಸ್ಟಿಕ್ ವಸ್ತುಗಳನ್ನು ನೀಡುವುದರಿಂದ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬೇಡಿ.  

3 /5

ಚೂಪಾದ ವಸ್ತುಗಳು: ದಾನಕ್ಕೆ ಎಂದಿಗೂ ತೀಕ್ಷ್ಣವಾದ ವಸ್ತುಗಳನ್ನು ನೀಡಬೇಡಿ. ಉದಾಹರಣೆಗೆ- ಚಾಕು, ಕತ್ತರಿ ಇತ್ಯಾದಿ. ಇಂತಹ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ- Astrology: ಪತಿಯನ್ನು ಕಣ್ಸನ್ನೆಯಲ್ಲಿಯೇ ಕುಣಿಸುತ್ತಾರಂತೆ ಈ 4 ರಾಶಿಯ ಹುಡುಗಿಯರು

4 /5

ಪೊರಕೆ: ಪೊರಕೆಯನ್ನು ದಾನ ಮಾಡುವುದು ಬಡತನವನ್ನು ಆಹ್ವಾನಿಸಿದಂತೆ. ಆದ್ದರಿಂದ ದಾನದಲ್ಲಿ ಯಾರಿಗೂ ಪೊರಕೆ ನೀಡಬೇಡಿ. ನಿಮ್ಮ ಹಳೆಯ ಪೊರಕೆಯನ್ನು ದಾನ ಮಾಡಬೇಡಿ.  ಇದನ್ನೂ ಓದಿ- Diwali 2021: ದೀಪಾವಳಿಯಂದು ಲಕ್ಷ್ಮಿಯೊಂದಿಗೆ ಈ ದೇವರನ್ನು ಪೂಜಿಸಬೇಡಿ

5 /5

ಹಳಸಿದ ಆಹಾರ : ನಿಮಗೆ ತಿನ್ನಲು ಯೋಗ್ಯವಲ್ಲದ, ಕೊಳೆತ, ಹಳಸಿದ ಆಹಾರವನ್ನು ಎಂದಿಗೂ ಕೂಡ ಬೇರೆಯವರಿಗೆ ನೀಡಬೇಡಿ. ಹಾಗೆ ಮಾಡುವುದು ಅಶುಭ. ಯಾವಾಗಲೂ ತಾಜಾ ಮತ್ತು ಒಳ್ಳೆಯ ವಸ್ತುಗಳನ್ನು ಮಾತ್ರ ದಾನ ಮಾಡಿ. ಹಾಗೆಯೇ ಬಳಸಿದ ಎಣ್ಣೆಯನ್ನು ಕೂಡ ದಾನ ಮಾಡಬೇಡಿ.  ದಾನ ಎಂದರೆ ನಿಮಗೆ ಬೇಡದ ವಸ್ತುವನ್ನು ಅಥವಾ ನೀವು ಉಪಯೋಗಿಸಲು ಸಾಧ್ಯವಾಗದ ವಸ್ತುವನ್ನು ಬೇರೆಯವರಿಗೆ ನೀಡುವುದಲ್ಲ. ಬದಲಿಗೆ ಅಗತ್ಯ ಇರುವವರಿಗೆ ನಿಮ್ಮ ಕೈಲಾದ ವಸ್ತುಗಳನ್ನು, ಪದಾರ್ಥಗಳನ್ನು ಖರೀದಿಸಿ ಕೊಡುವುದು. ಇಲ್ಲವೇ ನಿಮ್ಮ ಕೈಲಾದಷ್ಟು ಹಣವನ್ನು ನೀಡುವುದು. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.