ಆಪಲ್ ಸೇವನೆ ಆರೋಗ್ಯಕ್ಕೆ ಉತ್ತಮ. ಆದರೆ ಆಪಲ್ ಸೇವಿಸಿದ ಬಳಿಕ ಕೆಲವೊಂದು ಆಹಾರಗಳನ್ನು ತಿಂದರೆ ಅದು ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ಕೆಲವೊಂದು ಆಹಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವುಗಳನ್ನು ಆಪಲ್ ತಿಂದ ಬಳಿಕ ಸೇವಿಸಬೇಡಿ.
ಆಪಲ್ ಹಣ್ಣುಗಳು ಎಲ್ಲಾ ಸೀಸನ್ ನಲ್ಲಿ ಲಭಿಸುತ್ತದೆ. ಇನ್ನು ಸೇಬು ತಿಂದರೆ ದೇಹಕ್ಕೆ ಅನೇಕ ಪ್ರಯೋಜನಗಳು ಇವೆ. ಅಷ್ಟೇ ಅಲ್ಲದೆ, ದೇಹದಿಂದ ರಕ್ತಹೀನತೆಯನ್ನು ತೆಗೆದುಹಾಕುತ್ತದೆ. ಪ್ರತೀ ದಿನ 1 ಅಥವಾ 2 ಸೇಬುಗಳನ್ನು ತಿಂದರೆ ನಿಮ್ಮ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ.
ಆಪಲ್ ನಲ್ಲಿ ವಿಟಮಿನ್ ಸಿ, ಬಿ6, ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್ ಮತ್ತು ಇತರ ಪೋಷಕಾಂಶಗಳು ಇವೆ. ಆದರೆ ಸೇಬನ್ನು ತಿಂದ ಬಳಿಕ ಈ 4 ಪದಾರ್ಥಗಳನ್ನು ಸೇವಿಸಬಾರದು. ಇದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗುತ್ತದೆ.
ಸೇಬು ತಿಂದ ತಕ್ಷಣ ಅಥವಾ 2 ಗಂಟೆಗಳ ಒಳಗೆ ಮೊಸರನ್ನು ತಿನ್ನಬಾರದು. ಸೇಬು ಮತ್ತು ಮೊಸರು ಎರಡರ ಪರಿಣಾಮವು ತಂಪು. ಹೀಗಾಗಿ ಒಟ್ಟು ಸೇವಿಸಿದರೆ ಕಫದ ಸಮಸ್ಯೆ ಉಂಟಾಗುತ್ತದೆ.
ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿ ವಾಯು, ಅಜೀರ್ಣ, ಮಲಬದ್ಧತೆ, ಬ್ಯಾಕ್ಟೀರಿಯಾ, ಗ್ಯಾಸ್ ಸಮಸ್ಯೆಯಾಗುವ ಸಾಧ್ಯತೆ ಇದೆ. .
ಸೇಬು ತಿಂದ ಬಳಿಕ ಉಪ್ಪಿನಕಾಯಿ ಅಥವಾ ನಿಂಬೆಹಣ್ಣಿನ ಸೇವನೆ ಮಾಡಿದರೆ ಗ್ಯಾಸ್, ಅಸಿಡಿಟಿ ಅಥವಾ ಮಲಬದ್ಧತೆ ಉಂಟಾಗಬಹುದು. ಸೇಬುಗಳನ್ನು ತಿಂದ 2 ಗಂಟೆಗಳ ಕಾಲ ಹುಳಿ ಪದಾರ್ಥಗಳನ್ನು ತಿನ್ನಬೇಡಿ.
ಇನ್ನು ಮೂಲಂಗಿಯನ್ನೂ ಸಹ ಸೇಬು ತಿಂದ ಸೇವಿಸಬಾರದು. ಚರ್ಮದ ಸಮಸ್ಯೆಗಳು, ಚರ್ಮದ ದದ್ದುಗಳು ಅಥವಾ ಅಲರ್ಜಿಗಳು ಉಂಟಾಗಬಹುದು.