Diwali Laxmi Prapti Upay: ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಪ್ರಗತಿಯ ಹಾದಿ ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಉಪಾಯಗಳ ಬಗ್ಗೆ ತಿಳಿಯೋಣ...
Diwali Laxmi Prapti Upay: ದೀಪಗಳ ಹಬ್ಬ ದೀಪಾವಳಿ ಹಬ್ಬವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೃಪೆ ಪಡೆಯಲು ವಿಶೇಷ ದಿನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಪ್ರತಿಯೊಬ್ಬರೂ ಪ್ರತಿ ವರ್ಷ ದೀಪಾವಳಿಗಾಗಿ ಕಾತರದಿಂದ ಕಾಯುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ದಿನವನ್ನು ತುಂಬಾ ಆನಂದಿಸುತ್ತಾರೆ. ಈ ದಿನ, ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಪ್ರಗತಿಯ ಹಾದಿ ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಉಪಾಯಗಳ ಬಗ್ಗೆ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದೀಪಗಳ ಹಬ್ಬ ದೀಪಾವಳಿ ಹಬ್ಬವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೃಪೆ ಪಡೆಯಲು ವಿಶೇಷ ದಿನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಪ್ರತಿಯೊಬ್ಬರೂ ಪ್ರತಿ ವರ್ಷ ದೀಪಾವಳಿಗಾಗಿ ಕಾತರದಿಂದ ಕಾಯುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ದಿನವನ್ನು ತುಂಬಾ ಆನಂದಿಸುತ್ತಾರೆ. ಈ ದಿನ, ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಪ್ರಗತಿಯ ಹಾದಿ ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಉಪಾಯಗಳ ಬಗ್ಗೆ ತಿಳಿಯೋಣ...
ದೀಪಾವಳಿಯಲ್ಲಿ ಅರಿಶಿನದ ಉಪಾಯ: ಅರಿಶಿನ ಯಾವಾಗಲೂ ಉಪಯುಕ್ತ ವಸ್ತುವಾಗಿದೆ. ಇದನ್ನು ಯಾವಾಗಲೂ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಅದೇ ಸಮಯದಲ್ಲಿ, ಅರಿಶಿನದಿಂದ ಅನೇಕ ರೀತಿಯ ಜ್ಯೋತಿಷ್ಯ ಪರಿಹಾರಗಳನ್ನು ಸಹ ಮಾಡಲಾಗಿದೆ. ತಿಜೋರಿಯಲ್ಲಿ ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಕಟ್ಟಿ ಇಡಿ. ಮತ್ತು ಅದನ್ನು ಪ್ರತಿದಿನ ಪೂಜಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ದೀಪಾವಳಿಯಲ್ಲಿ ಕರ್ಪೂರದ ಪರಿಹಾರ : ಮನೆಯಲ್ಲಿ ಯಾರದ್ದಾದರೂ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ, ಕರ್ಪೂರದ ತುಂಡುಗಳೊಂದಿಗೆ ಗುಲಾಬಿ ಹೂವನ್ನು ಕಮಾನಿನಲ್ಲಿ ಇರಿಸಿ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಆರ್ಥಿಕ ಸಂಕಷ್ಟಗಳು ಪರಿಹಾರಗೊಂಡು ಬೇರೆಡೆ ಸಿಲುಕಿರುವ ಹಣವೂ ಕೈ ಸೇರುತ್ತದೆ ಎಂದು ಹೇಳಲಾಗುತ್ತದೆ.
ಉಪ್ಪಿನ ಪರಿಹಾರ: ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಕೆಲವು ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಉಪ್ಪು ಮತ್ತು ಲವಂಗವನ್ನು ಒಂದು ಸಣ್ಣ ಗಾಜಿನ ಬಾಟಲಿಯಲ್ಲಿ ಹಾಕಿ ಇಡಿ. ಈ ಪರಿಹಾರ ಮಾಡುವುದರಿಂದ, ಹಣಕಾಸಿನ ತೊಂದರೆಗಳು ನಿವಾರಣೆ ಆಗುವುದರ ಜೊತೆಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗುತ್ತದೆ.
ಪರ್ಸ್‌ನಲ್ಲಿ ಬೆಳ್ಳಿಯ ನಾಣ್ಯ: ಬೆಳ್ಳಿಯ ನಾಣ್ಯವನ್ನು ಪರ್ಸ್‌ನಲ್ಲಿ ಇಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಪರ್ಸ್‌ನಲ್ಲಿ ಬೆಳ್ಳಿ ನಾಣ್ಯ ಇಡುವುದರಿಂದ ಅದೃಷ್ಟ ಖುಲಾಯಿಸುತ್ತದೆ. ಮತ್ತು ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ದೀಪಾವಳಿಯ ದಿನ ಈ ಪರಿಹಾರ ಮಾಡುವುದರಿಂದ ಆರ್ಥಿಕ ಪ್ರಗತಿಗೆ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದೂ ಸಹ ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.