Dhanteras 2021: ಎಲ್ಲೆಡೆ ದಸರಾ ಮುಗಿದು ದೀಪಾವಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಮನೆಯನ್ನು ಶುಚಿಗೊಳಿಸುವುದರ ಜೊತೆಗೆ ಶಾಪಿಂಗ್ ಕೂಡ ಆರಂಭವಾಗಿದೆ. ಧಂತೇರಾಸ್ 2021 ರಲ್ಲಿ ಮಾಡಬೇಕಾದ ಮುಖ್ಯ ಖರೀದಿಗಳಿಗಾಗಿ ಜನರು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಧಂತೇರಾಸ್‌ನಲ್ಲಿ ಏನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು. ಯಾವುದನ್ನು ಖರೀದಿಸುವುದು ಶುಭ ಮತ್ತು ಯಾವುದು ವಸ್ತುಗಳನ್ನು ಖರೀದಿಸುವುದರಿಂದ ಹಣ ನಷ್ಟವಾಗುತ್ತದೆ ಎಂದು ತಿಳಿಯಬೇಕು. ಈ ವರ್ಷ ನವೆಂಬರ್ 2ರಂದು ಧಂತೇರಾಸ್ ಆಚರಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಧಂತೇರಾಸ್‌ನಲ್ಲಿ ಈ ವಸ್ತುಗಳ ಖರೀದಿಯು ಆಶೀರ್ವಾದವನ್ನು ತರುತ್ತದೆ: ಧಂತೇರಾಸ್ ಸಂಪತ್ತು ಮತ್ತು ಸಮೃದ್ಧಿಯ ಮಳೆಯನ್ನು ನೀಡುವ ದಿನವಾಗಿದೆ. ಈ ದಿನದಂದು ಶಾಪಿಂಗ್ ಮಾಡುವುದು ತುಂಬಾ ಮಂಗಳಕರವಾಗಿದೆ ಮತ್ತು ಈ ದಿನ ಖರೀದಿಸಿದ ವಸ್ತುಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಧಂತೇರಾಸ್ ದಿನದಂದು ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವ ಸಂಪ್ರದಾಯವಿದೆ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ, ವರ್ಷವಿಡೀ ಹಣದ ಕೊರತೆಯಿರುವುದಿಲ್ಲ. ಇವುಗಳಲ್ಲಿ ಮುಖ್ಯವಾದುದು ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳು.
ಕುಬೇರ್ ಯಂತ್ರ ಮತ್ತು ಶ್ರೀ ಯಂತ್ರ: ಕುಬೇರ್ ಯಂತ್ರ ಮತ್ತು ಮಹಾಲಕ್ಷ್ಮಿ ಯಂತ್ರವನ್ನು ಧಂತೇರಾಸ್‌ನಲ್ಲಿ ಖರೀದಿಸುವುದು ಅತ್ಯಂತ ಶುಭಕರ. ಧಂತೇರಾಸ್ ದಿನದಂದು, ಶ್ರೀ ಯಂತ್ರವನ್ನು ಮನೆ ಅಥವಾ ಅಂಗಡಿಯ ಸುರಕ್ಷಿತ ಸ್ಥಳದಲ್ಲಿ ಇರಿಸುವುದರಿಂದ ವರ್ಷಪೂರ್ತಿ ಹಣವನ್ನು ತರುತ್ತದೆ ಎಂದು ನಂಬಲಾಗಿದೆ.
ಲಕ್ಷ್ಮಿ-ಗಣೇಶರ ಪ್ರತಿಮೆ: ಧಂತೇರಾಸ್‌ನಲ್ಲಿ ಲಕ್ಷ್ಮಿ-ಗಣೇಶರ ವಿಗ್ರಹವನ್ನು ಖರೀದಿಸುವುದೂ ಕೂಡ ಅತ್ಯಂತ ಶುಭಕರವಾಗಿದೆ. ಇದು ಸಾಧ್ಯವಾಗದಿದ್ದರೆ, ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ಲಕ್ಷ್ಮಿ-ಗಣೇಶ್ ಫೋಟೋದೊಂದಿಗೆ ಖರೀದಿಸಿ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಸಂತೋಷಪಡಿಸುತ್ತದೆ. ಇದನ್ನೂ ಓದಿ- ಧನತ್ರಯೋದಶಿಯಲ್ಲಿ ಈ ವಸ್ತುಗಳನ್ನು ಖರೀದಿಸಲೇಬಾರದು
ಕೊತ್ತಂಬರಿ ಬೀಜಗಳು: ಧಂತೇರಾಸ್‌ನಲ್ಲಿ ಕೊತ್ತಂಬರಿ ಬೀಜಗಳನ್ನು ಖರೀದಿಸುವುದು ಕೂಡ ತುಂಬಾ ಶುಭಕರವಾಗಿದೆ. ಇದರಿಂದ ವರ್ಷವಿಡೀ ಲಕ್ಷ್ಮೀ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಉಳಿಯುತ್ತದೆ. ಅಂದು ಖರೀದಿಸಿದ ಕೊತ್ತಂಬರಿ ಬೀಜವನ್ನು ಸುರಕ್ಷಿತವಾಗಿ ಇಡುವುದು ಕೂಡ ತುಂಬಾ ಮಂಗಳಕರ. ಇದನ್ನೂ ಓದಿ- Dhanteras 2021: ದೀಪಾವಳಿಯ ಹಿಂದಿನ ದಿನ ಈ ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಲಕ್ಷ್ಮೀಯ ಆಶೀರ್ವಾದ
ಪೊರಕೆ ಖರೀದಿಸಿ: ಧಂತೇರಾಸ್‌ನಲ್ಲಿ ಹೊಸ ಪೊರಕೆಯನ್ನು ಖರೀದಿಸುವುದು ಅತ್ಯಂತ ಶುಭಕರ. ಈ ದಿನ ಖರೀದಿಸಿದ ಪೊರಕೆ ಹಣದ ತೊಂದರೆ, ರೋಗಗಳನ್ನು ನಿವಾರಿಸುತ್ತದೆ ಮತ್ತು ಸಂಪತ್ತನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಧಂತೇರಾಸ್‌ನಲ್ಲಿ ಈ ವಸ್ತುಗಳನ್ನು ಖರೀದಿಸಬೇಡಿ : ಧಂತೇರಾಸ್‌ನಲ್ಲಿ ಈ ವಸ್ತುಗಳನ್ನು ಖರೀದಿಸಬೇಡಿ. ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ. ಹಾಗೆ ಮಾಡುವುದು ದುರಾದೃಷ್ಟವನ್ನು ಆಹ್ವಾನಿಸುವುದು ಎಂದು ಹೇಳಲಾಗುತ್ತದೆ. ಏಕೆಂದರೆ ಕಬ್ಬಿಣವು ಶನಿಗೆ ಸಂಬಂಧಿಸಿದೆ. ಇದರ ಹೊರತಾಗಿ, ಧಂತೇರಾಸ್ ದಿನದಂದು ಸೆರಾಮಿಕ್ನಿಂದ ಮಾಡಿದ ವಸ್ತುಗಳನ್ನು ಖರೀದಿಸಬೇಡಿ, ಅದು ಬಡತನವನ್ನು ತರುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)