Samantha Ruth Prabhu: ಮಾಜಿ ಮಾಡೆಲ್ ಮತ್ತು ಸದ್ಯದ ಬಹು ಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಮತ್ತು ತೆಲುಗು ನಟ ನಾಗಾ ಚೈತನ್ಯಾ ಪ್ರೀತಿಸಿ ಮದುವೆಯಾಗಿದ್ದು, ವಿಚ್ಛೇದನ ಪಡೆದದ್ದು ಇತಿಹಾಸ.
Samantha Ruth Prabhu: ಮಾಜಿ ಮಾಡೆಲ್ ಮತ್ತು ಸದ್ಯದ ಬಹು ಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಮತ್ತು ತೆಲುಗು ನಟ ನಾಗಾ ಚೈತನ್ಯಾ ಪ್ರೀತಿಸಿ ಮದುವೆಯಾಗಿದ್ದು, ವಿಚ್ಛೇದನ ಪಡೆದದ್ದು ಇತಿಹಾಸ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗಾ ಚೈತನ್ಯ ನಡುವೆ ಡಿವೋರ್ಸ್ ಆಗಿದ್ದರೂ ಪರಸ್ಪರ ಕಚ್ಚಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ಈಗ ಅದು ಲೀಗಲ್ ನೋಟಿಸ್ ನೀಡುವ ಹಂತವನ್ನೂ ತಲುಪಿದೆ.
ಸಮಂತಾ ರುತ್ ಪ್ರಭು ಮತ್ತು ನಾಗಾ ಚೈತನ್ಯಾ ನಡುವೆ 2021ರಲ್ಲಿ ವಿಚ್ಛೇದನವಾಗಿತ್ತು. ಈಗ ಸಮಂತಾ ರುತ್ ಪ್ರಭು ತನ್ನ ಮಾಜಿ ಗಂಡ ನಾಗಾ ಚೈತನ್ಯಾಗೆ ಲೀಗಲ್ ನೋಟಿಸ್ ಕೊಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಮಂತಾ ರುತ್ ಪ್ರಭು ‘ವಿನೈತಾಂಡಿ ವರುವಾಯ’ ಸಿನಿಮಾದಲ್ಲಿ ನಾಗಾ ಚೈತನ್ಯಾಗೆ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ಆಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ಸಮಂತಾ ರುತ್ ಪ್ರಭು 2017ರಲ್ಲಿ 7 ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗಾ ಚೈತನ್ಯಾ ಅವರನ್ನು ಮದುವೆಯಾದರು. 2017ರಲ್ಲಿ ಮದುವೆಯಾದ ಸಮಂತಾ ರುತ್ ಪ್ರಭು ಮತ್ತು ನಾಗಾ ಚೈತನ್ಯಾ ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆದುಕೊಂಡರು.
ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಚಿತ್ರಗಳಲ್ಲೂ ಸಮಂತಾ ರುತ್ ಪ್ರಭು ಹೆಸರು ಮಾಡಿದ್ದಾರೆ. ಸ್ವಲ್ಪ ಸಮಯ ಆರೋಗ್ಯದ ಸಮಸ್ಯೆಯಿಂದ ನಟನೆಗೆ ಬ್ರೇಕ್ ಹಾಕಿದ್ದ ಸಮಂತಾ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಮಾಡೆಲಿಂಗ್, ಸಿನಿಮಾ, ತೆಲುಗು, ತಮಿಳು, ಹಿಂದಿ ಅಂತಾ ಪ್ರಯೋಗ ಮಾಡಿದ ಸಮಂತಾ ರುತ್ ಪ್ರಭು ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿದ್ದಾರೆ.
ಇದೀಗ ಮದುವೆಗೆ ಮುಂಚೆ ಖರೀದಿಸಿದ್ದ ಫ್ಲ್ಯಾಟ್ ವಿಷಯಕ್ಕೆ ಸಂಬಂಧಿಸಿದಂತೆ ಸಮಂತಾ ತನ್ನ ಮಾಜಿ ಗಂಡನಿಗೆ ಲೀಗಲ್ ನೋಟಿಸ್ ಕೊಡಲು ಮುಂದಾಗಿದ್ದಾರಂತೆ.
ಫ್ಲ್ಯಾಟ್ ಖರೀದಿ ವೇಳೆ ಸಮಂತಾ ಹೆಚ್ಚು ಹಣ ಹಾಕಿದ್ದರಂತೆ. ಹಣ ಹೂಡಿಕೆಯ ದಾಖಲೆಗಳನ್ನು ಕೋರ್ಟಿಗೆ ನೀಡಿ ನಾಗಾ ಚೈತನ್ಯಾಗೆ ಲೀಗಲ್ ನೋಟಿಸ್ ನೀಡಲಿದ್ದಾರೆ ಎಂದು ವರದಿಯಾಗಿದೆ.
ಸಮಂತಾ ರುತ್ ಪ್ರಭು ಫ್ಲ್ಯಾಟ್ ವಿಷಯದಲ್ಲಿ ಪೊಸೆಸೀವ್ ಆಗಲು ಕೂಡ ನಾಗಾ ಚೈತನ್ಯಾ ಕಾರಣ. ಶೋಭಿತಾ ಜೊತೆ ಮದುವೆಯಾದ ನಂತರ ಇದೇ ಫ್ಲ್ಯಾಟ್ ನಲ್ಲಿ ಇರುವೆ, ಶೋಭಿತಾಗೆ ಈ ಫ್ಲ್ಯಾಟ್ ಅನ್ನು ಉಡುಗೊರೆ ನೀಡುವೆ ಎಂದು ನಾಗಾ ಚೈತನ್ಯಾ ಹೇಳಿದ್ದರು. ಇದಕ್ಕೆ ಶೋಭಿತಾ ಒಪ್ಪಿಲ್ಲ ಎನ್ನಲಾಗಿದೆ. ಸದ್ಯ ಫ್ಲ್ಯಾಟ್ ಖಾಲಿ ಇದೆ. ನಾಗಾ ಚೈತನ್ಯಾಗೆ ನೋಟಿಸ್ ಹೋಗುವ ಸಾಧ್ಯತೆ ಇದೆ.