ಕಾಮನ್‌ ಸೆನ್ಸ್‌ ಇಲ್ಲದಿರೋ ದರ್ಶನ್‌ಗೆ ದುಡ್ಡಿನ ಧಿಮಾಕಿನಿಂದ ಈ ಸ್ಥಿತಿ ಬಂದಿದೆ: ಮುಖ್ಯಮಂತ್ರಿ ಚಂದ್ರು

Mukhyamantri Chandru on Darshan Case: ಹಣ ಸಿಗ್ತಿದ್ದಂತೆ ಮೂಲ ದರ್ಶನ್‌ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್‌ ಜಾಸ್ತಿಯಾಗಿದ್ದಂತೆ ಮೊದಲಿನ ದರ್ಶನ್‌ ವರ್ತನೆಯಲ್ಲಿ ಬದಲಾವಣೆಯಾಯಿತು. ಸಹವಾಸ ದೋಷವೂ ಇದಕ್ಕೆ ಮುಖ್ಯ ಕಾರಣ. ಆತ ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿದ್ದಿದ್ದರೆ ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೆಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

Mukhyamantri Chandru on Darshan Case: ಸ್ಯಾಂಡಲ್‌ವುಡ್‌ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ನಟ ಚಾಲೆಂಜಿಂಗ್‌ ಸ್ಟಾರ್‌ ಬಗ್ಗೆ ಕಿಡಿಕಾರಿದ್ದಾರೆ. ನಟ ದರ್ಶನ್‌ ಮಾಡಿದ್ದು ತಪ್ಪು ಎಂದು ನೇರವಾಗಿ ಹೇಳಿರುವ ಅವರು, ದರ್ಶನ್‌ಗೆ ಈ ಪರಿಸ್ಥಿತಿ ಏಕೆ ಬಂತು? ಇಂತಹ ಕೃತ್ಯ ಎಸಗಲು ಕಾವಣವೇನು? ಅನ್ನೋದರ ಬಗ್ಗೆಯೂ ತಿಳಿಸಿದ್ದಾರೆ. ನಟ ದರ್ಶನ್‌ ಪ್ರಕರಣದ ಬಗ್ಗೆ ಅವರು ಏನೇನು ಮಾತನಾಡಿದ್ದಾರೆ ಅನ್ನೋದ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಗೆಳತಿ ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂಬ ಕಾರಣಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದೆ. ಸದ್ಯ ಇದೇ ಪ್ರಕರಣ ಸಂಬಂಧ ಪವಿತ್ರಾಗೌಡ, ದರ್ಶನ್‌ ಸೇರಿದಂತೆ ಒಟ್ಟು ೧೮ ಆರೋಪಿಗಳು ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸುವಂತಾಗಿದೆ. ಇದರ ಬಗ್ಗೆ ಮಾತನಾಡಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ʼದರ್ಶನ್‌ಗೆ ಕಾಮನ್‌ಸೆನ್ಸ್‌ ಇದಿದ್ರೆ ಹೀಗಾಗುತಿತ್ತಾ? ಆತನ ಹತ್ತಿರ ದುಡ್ಡಿದೆ ಅಷ್ಟೇ, ಬೌದ್ಧಿಕ ಪ್ರಜ್ಞೆಯೇ ಇಲ್ಲ, ಆತನಿಗೆ ಕಾಮನ್‌ ಸೆನ್ಸ್‌ ಇಲ್ಲ. ಆತ ಕೊಲೆಪಾತಕಿಯಾ? ಅಥವಾ ಪ್ರೊಫೆಷನಲ್‌ ಮರ್ಡರರ್‌? ಆದರೆ ಆತ ಕೊಲೆ ಮಾಡಿದ್ದಾನೆಂದರೆ ಕ್ರೌರತ್ವ ಹೇಗೆ ಬಂತು? ಧೀಮಾಕು, ದುರಹಂಕಾರ ಹಾಗೂ ಅನುಭವದ ಕೊರತೆಯಿಂದ ಇಷ್ಟೆಲ್ಲಾ ಆಗಿದೆ ಅಂತಾ ಹೇಳಿದ್ದಾರೆ.

2 /5

ದರ್ಶನ್‌ ಅನ್ನೋದಕ್ಕಿಂತ ಈ ರೀತಿಯ ಘಟನೆಗಳು ನಡೆಯಲೇಬಾರದು. ಇದು ಬರೀ ಕೊಲೆ ಅಲ್ಲ, ಇವರೂ ಮೂಲತಃ ಕೊಲೆಗಾರರಲ್ಲ ಹಾಗೂ ಸೈಕಿಕ್‌ ಅಲ್ಲ. ಆ ಟೀಮ್‌ನಲ್ಲಿ ಇರುವವರು ಯಾರೂ ಕೊಲೆಗಾರರಲ್ಲ. ಆ ಕೊಲೆ ಆಗಿಹೋಗಿದೆ. ಅದೇ ರೀತಿ ಕೊಲೆಯಾದ ವ್ಯಕ್ತಿ ಮಾಡಿದ್ದೂ ಮಹಾ ಅಪರಾಧವೇ. ಅದೇ ರೀತಿ ಇಲ್ಲಿ ಪವಿತ್ರಾಗೌಡ ಬಗ್ಗೆ ಹೇಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ ಇಲ್ಲಿ ಅವಳದ್ದೂ ತಪ್ಪಿದೆ. ಮದುವೆಯಾದ ವ್ಯಕ್ತಿ ಹಾಗೂ ಡಿವೋರ್ಸ್‌ ಆಗದ ವ್ಯಕ್ತಿಯನ್ನು ಲವ್‌ ಮಾಡುವುದು ಇನ್ನೊಂದು ಅಪರಾಧ. ಇದೆಲ್ಲಾ ನೋಡಿದ್ರೆ ಸಾಮಾಜಿಕ ದೃಷ್ಟಿಯನ್ನಿಟ್ಟುಕೊಂಡು ಕಾನೂನು ಒಂದು ನಿರ್ಧಾರಕ್ಕೆ ಬರಬೇಕು ಅಂತಾ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.   

3 /5

ವರನಟ ಡಾ.ರಾಜ್‌ಕುಮಾರ್‌ಗೂ ಕೋಪ ಬಂದಿಲ್ವಾ? ಅಮರಶಿಲ್ಪಿ ಜಕಣಾಚಾರಿ ಸಿನಿಮಾ ಶೂಟಿಂಗ್‌ ವೇಳೆ ಮೇಕಪ್‌ ಮಾಡಿಕೊಂಡು ರೆಡಿಯಾಗಿದ್ದ ರಾಜ್‌ಕುಮಾರ್‌ಗೆ ಅವಮಾನ ಮಾಡಲಾಗಿತ್ತು. ಮೇಕಪ್‌ ಅಳಿಸಿಬಿಟ್ಟು ಕಲ್ಯಾಣ್‌ ಕುಮಾರ್‌ಗೆ ಆ ಪಾತ್ರ ಕೊಟ್ಟಾಗ ರಾಜ್‌ಕುಮಾರ್‌ಗೆ ಹೇಗಾಗಿರಬೇಡ? ಇನ್ನೇನು ಪಾತ್ರ ಮಾಡಬೇಕು ಅನ್ನೋ ಸಮಯದಲ್ಲಿ ಬೇಡ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಡ? ಅದನ್ನೇ ಅವರು ತಾಳ್ಮೆಯಿಂದ ಪರಿಹರಿಸಿಕೊಂಡರು. ಮುಂದೆ ಒಳ್ಳೆಯ ನಟನಾಗಿ, ಒಳ್ಳೆಯ ನಡವಳಿಕೆಯಿಂದ ಕಲ್ಯಾಣಕುಮಾರ್‌ರನ್ನು ಮೀರಿಸಿ ದೊಡ್ಡ ನಟನಾದರು. ನಮ್ಮ ಎದುರಿನ ಪ್ರತ್ಯಕ್ಷ ಉದಾಹರಣೆ ಇದು ಅಂತಾ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.  

4 /5

ನಟ ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್‌ ಅವರು ಕೌಟುಂಬಿಕ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಿದ್ದರು. ಅವರು ಹೊರಗೆ ಏನೇ ಮಾಡ್ತಿದ್ದರೂ ತಮ್ಮತನವನ್ನು ಉಳಿಸಿಕೊಂಡಿದ್ದರು. ಒಂದು ವೇಳೆ ಇದೀಗ ಅವರು ಬದುಕಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಇಲ್ಲ ಮಗ ಅನ್ನೋ ಮಮಕಾರಕ್ಕೆ ಯಾರನ್ನಾದರೂ ಹಿಡ್ಕೊಂಡು ಆತನನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು. ನಾನು ತೂಗುದೀಪ ಶ್ರೀನಿವಾಸರ ಜೊತೆ 25ಕ್ಕೂ ಅಧಿಕ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅವರು ನನಗಿಂತ 10 ವರ್ಷ ದೊಡ್ಡವರಾದರೂ ನೋಡುಗರಿಗೆ ಸಮಕಾಲೀನರು ಅಂತಾ ಅನಿಸುತ್ತಿತ್ತು. ಶೂಟಿಂಗ್‌ ವೇಳೆ ಶ್ರೀನಿವಾಸ್ ಅವರಿಗೆ ಸಿಟ್ಟು ಬರ್ತಿತ್ತು. ದರ್ಶನ್‌ಗೆ ಯಾವ ರೀತಿ ಇದೆಯೋ ಆ ರೀತಿಯೇ ಇತ್ತು. ಆದರೆ ಅದು ನೆಗಟಿವ್‌ ಆಗಿರಲಿಲ್ಲ. ಊಟ ಸರಿಯಾಗಿ ಕೊಡದಿದ್ದರೆ, ಶೂಟಿಂಗ್‌ ಸಮಯ ಹಾಳು ಮಾಡಿದ್ರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಅದನ್ನು ಬಿಟ್ಟು ಅವರಲ್ಲಿ ಬೇರೆ ಸಿಟ್ಟು ಕಾಣಿಸುತ್ತಿರಲಿಲ್ಲ ಅಂತಾ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ. 

5 /5

ಹಣ ಸಿಗ್ತಿದ್ದಂತೆ ಮೂಲ ದರ್ಶನ್‌ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್‌ ಜಾಸ್ತಿಯಾಗಿದ್ದಂತೆ ಮೊದಲಿನ ದರ್ಶನ್‌ ವರ್ತನೆಯಲ್ಲಿ ಬದಲಾವಣೆಯಾಯಿತು. ಸಹವಾಸ ದೋಷವೂ ಇದಕ್ಕೆ ಮುಖ್ಯ ಕಾರಣ. ಆತ ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿದ್ದಿದ್ದರೆ ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಕಾನೂನಿನ ಮೊರೆ ಹೋಗಿ ಪೊಲೀಸರ ಮುಂದಿಟ್ಟಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ. ಸಿಟ್ಟಿನಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೊಲೆ ನಡೆದಿಲ್ಲ. ಆದರೆ ಕೊಲೆ ಕೊಲೆಯೇ ಅಂತಾ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.