EV Fire Safety Tips: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆ ಹೆಚ್ಚಾಗಿದೆ. ಆದರೆ, ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿಯ ಘಟನೆಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಕ್ಕೆ ನಾನಾ ಕಾರಣಗಳಿರಬಹುದು. ಆದರೆ, ಐದು ಸಾಮಾನ್ಯ ತಪ್ಪುಗಳು ಇದಕ್ಕೆ ಪ್ರಮುಖ ಕಾರಣಗಳು ಎಂದು ಬಣ್ಣಿಸಲಾಗುತ್ತದೆ. ನೀವು ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಾಗಿದ್ದರೆ ಅಗ್ನಿ ಅವಘಡವನ್ನು ತಪ್ಪಿಸಲು ಯಾವ ವಿಚಾರಗಳ ಬಗ್ಗೆ ಗಮನವಹಿಸಬೇಕು ಎಂದು ತಿಳಿಯಿರಿ.
ಅಪಘಾತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹಾನಿಯಾದಾಗ ಬ್ಯಾಟರಿ ಅಥವಾ ಇಂಧನ ಟ್ಯಾಂಕ್ ಹಾನಿಗೊಳಗಾದರೆ ಬೆಂಕಿ ಹೊತ್ತಿಕೊಳ್ಳಬಹುದು.
ಎಲೆಕ್ಟ್ರಿಕ್ ಸ್ಕೂಟರ್‌ನ ದುರ್ಬಳಕೆಯೂ ಸಹ ಸ್ಕೂಟರ್ ಹೊತ್ತಿ ಉರಿಯಲು ಕಾರಣವಾಗಬಹುದು. ಇದರಲ್ಲಿ ಭಾರವಾದ ವಸ್ತುಗಳನ್ನು ಸಾಗಿಸುವುದು, ಒರಟಾದ ರಸ್ತೆಗಳಲ್ಲಿಬಳಸುವುದು, ಬ್ಯಾಟರಿ ಮತ್ತು ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಓವರ್ ಹೀಟ್ ಆಗಿ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿಯಬಹುದು.
ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುವಾಗ ಕಳಪೆ ಸಂಪರ್ಕಗಳು, ಕಳಪೆ ವೈರಿಂಗ್ ಅಥವಾ ದೋಷಪೂರಿತ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸಿದ್ದರೆ ಇದೂ ಕೂಡ ಸ್ಕೂಟರ್ ಬೆಂಕಿ ಅನಾಹುತಕ್ಕಿಡಾಗಲು ಕಾರಣವಾಗಬಹುದು.
ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುವಾಗ ಮಾಡುವ ಕೆಲವು ತಪ್ಪುಗಳು ಕೂಡ ಸ್ಕೂಟರ್ ಹೊತ್ತಿ ಉರಿಯಲು ಕಾರಣವಾಗಬಹುದು. ಇದರಲ್ಲಿ ದೀರ್ಘಕಾಲದವರೆಗೆ ಚಾರ್ಜ್ ಮಾಡುವುದು, ತಪ್ಪಾದ ಚಾರ್ಜರ್ ಅನ್ನು ಬಳಸುವುದು ಅಥವಾ ದೋಷಪೂರಿತ ಚಾರ್ಜಿಂಗ್ ಪೋರ್ಟ್ ಬಳಕೆ ಬೆಂಕಿಗೆ ಕಾರಣವಾಗಬಹುದು.
ಕೆಟ್ಟ ಬ್ಯಾಟರಿ ಬಳಕೆ ಕೂಡ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಗ್ನಿ ಅನಾಹುತಕ್ಕೆ ಸಾಮಾನ್ಯ ಕಾರಣವಾಗಿದೆ. ಕೆಟ್ಟ ಬ್ಯಾಟರಿಗಳು ಚಾರ್ಜ್ ಆದಾಗ ಬ್ಯಾಟರಿ ಉಬ್ಬಿಕೊಳ್ಳುವುದು, ಸೋರಿಕೆಯಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಮತ್ತು ಬೆಂಕಿಗೆ ಕಾರಣವಾಗುತ್ತದೆ.