Mars In Gemini: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಭಾವಿಸಲಾಗುವ ಮಂಗಳ ಮಿಥುನ ರಾಶಿಗೆ ಪ್ರವೇಶಿಸಿದ್ದು, ಆತ ಪ್ರಸ್ತುತ ಅಲ್ಲಿಯೇ ವಿರಾಜಮಾನನಾಗಿದ್ದಾನೆ. ಆದರೆ, ಈ ಕಾಲಾವಧಿ ಮೂರು ರಾಶಿಗಳ ಜನರಿಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಅವಧಿಯಲ್ಲಿ ಮೂರು ರಾಶಿಗಳ ಜನರು ಭಾರಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
Mangal In Mithun: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ಶತ್ರು ಹಾಗೂ ಮಿತ್ರ ಗ್ರಹಗಳ ರಾಶಿಯನ್ನು ಪ್ರವೇಶಿಸುತ್ತವೆ. ಇದು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತದೆ. ಮತ್ತೊಂದೆಡೆ ಗ್ರಹಗಳ ಈ ರಾಶಿಗಳ ಜನರ ಪಾಲಿಗೆ ಶುಭ ಫಲಿತಾಂಶಗಳನ್ನು ನೀಡಿದರೆ, ಕೆಲ ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತವೆ. ಕಳೆದ ಏಪ್ರಿಲ್ 13ರಂದು ಗ್ರಹಗಳ ಸೇನಾಪತಿಯಾಗಿರುವ ಮಂಗಳ, ಬುಧನ ಅಧಿಪತ್ಯದ ಮಿಥುನ ರಾಶಿಗೆ ಪ್ರವೇಶಿಸಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಹಾಗೂ ಮಂಗಳನ ಮಧ್ಯೆ ಶತ್ರುಭಾವದ ಸಂಬಂಧವಿದೆ. ಹೀಗಾಗಿ ಮಂಗಳನ ಈ ಗೋಚರ ಕೆಲ ರಾಶಿಗಳ ಜಾತಕದವರ ಪಾಲಿಗೆ ಕಷ್ಟ ಕಾಲ ತರಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-ತನ್ನ ನೀಚ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಭ್ರಮಣೆ ಆರಂಭ, 5 ರಾಶಿಗಳ ಜನರಿಗೆ ಅಪಾರ ಯಶಸ್ಸು-ಧನ ಪ್ರಾಪ್ತಿಯ ಯೋಗ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಿಥುನ ರಾಶಿ- ಮಂಗಳನ ಮಿಥುನ ಗೋಚರ ಮಿಥುನ ರಾಶಿಯ ಜನರ ಪಾಲಿಗೆ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ಮಂಗಳನು ನಿಮ್ಮ ರಾಶಿಯ ಲಗ್ನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲೀ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಎದ್ದು ಕಾಣಲಿದೆ. ಆದಷ್ಟು, ಜಗಳಗಳು ಅಥವಾ ವಾದಗಳಿಂದ ನಿಮ್ಮನ್ನು ನೀವು ದೂರವಿಡಿ. ವ್ಯಾಪಾರದಲ್ಲಿ ಪಾರ್ಟ್ನರ್ಶಿಪ್ ಸಹ ತಪ್ಪಿಸಿ. ಅರ್ಥಾತ್ ಈಗಲೇ ಹೊಸ ಕೆಲಸ ಶುರು ಮಾಡಬೇಡಿ. ಅಲ್ಲದೆ, ಆಸ್ತಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವಾಗಬಹುದು. ಈ ಅವಧಿಯಲ್ಲಿ ಸಂಗಾತಿಯೊಂದಿಗೆ ವಿವಾದ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿರಂತರ ವಾದಗಳನ್ನು ತಪ್ಪಿಸಿ.
ಕರ್ಕ ರಾಶಿ- ಮಂಗಳನ ಮಿಥುನ ಗೋಚರ ನಿಮ್ಮ ಪಾಲಿಗೂ ಕೂಡ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ಮಂಗಳನು ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದು ನಷ್ಟ ಮತ್ತು ವೆಚ್ಚದ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ಅನಗತ್ಯವಾಗಿ ಖರ್ಚು ಮಾಡಬಹುದು. ಇದರಿಂದಾಗಿ ನಿಮ್ಮ ಬಜೆಟ್ ಹಾಳಾಗಬಹುದು. ಅಲ್ಲದೆ, ನೀವು ಅನಗತ್ಯ ದಣಿವು ಮತ್ತು ಓಡಾಟವನ್ನು ಎದುರಿಸಬೇಕಾಗಬಹುದು. ರೋಗಗಳಿಂದ ದೂರವಿರಿ. ವಹಿವಾಟು ಮಾಡುವಾಗ ಜಾಗರೂಕರಾಗಿರಿ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು. ಇನ್ನೊಂದೆಡೆ ಕೆಲಸದ ಸ್ಥಳದಲ್ಲಿ ಚರ್ಚೆಯನ್ನು ತಪ್ಪಿಸಿ. ಇಲ್ಲದಿದ್ದರೆ ಜೂನಿಯರ್ ಮತ್ತು ಸೀನಿಯರ್ ಜೊತೆ ವೈಮನಸ್ಯ ಉಂಟಾಗಬಹುದು.
ವೃಶ್ಚಿಕ ರಾಶಿ- ಮಿಥುನ ರಾಶಿಯಲ್ಲಿನ ಮಂಗಳ ನಿಮ್ಮ ಮೇಲೆ ಪ್ರತಿಕೂಲ ಪ್ರಭಾವ ಬೀರುವ ಸಾಧ್ಯತೆ ಇದೆ. ಏಕೆಂದರೆ ಮಂಗಳನು ನಿಮ್ಮ ರಾಶಿಯ ಅಷ್ಟಮ ಭಾವದಲ್ಲಿದ್ದಾನೆ. ಇದನ್ನು ವಯಸ್ಸು ಮತ್ತು ರಹಸ್ಯ ಕಾಯಿಲೆಯ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ದೂರ ಪ್ರಯಾಣ ಮಾಡುವುದನ್ನು ತಪ್ಪಿಸಿ. ಅಲ್ಲದೆ, ಗಾಯಗಳ ಬಗ್ಗೆ ಜಾಗರೂಕರಾಗಿರಿ. ಮತ್ತೊಂದೆಡೆ, ಕುಟುಂಬದ ಹಿರಿಯ ವ್ಯಕ್ತಿಯ ಆರೋಗ್ಯವು ಹದಗೆಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಕಡಿಮೆ ಅದೃಷ್ಟವನ್ನು ಹೊಂದಿರುತ್ತೀರಿ. ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆ ಮನೆಯವರ ಜೊತೆಗೆ ಕಿರಿಕ್ ಉಂಟಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ