ಇಂದು, ಅವರ ಜನ್ಮದಿನದಂದು, ನಾವು ಅವರ ಬಾಲ್ಯದ ಕೆಲವು ವಿಶೇಷ ಮಾಹಿತಿಯನ್ನ ನಿಮಗಾಗಿ ತಂದಿದ್ದೇವೆ ಇಲ್ಲಿವೆ ನೋಡಿ..
ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗುವ ಮುನ್ನ ಗೋರಖ್ಪುರದ ಗೋರಕ್ಷಾಪೀಠದಿಂದ ದೀಕ್ಷೆ ಪಡೆದ ಯೋಗಿ ಆದಿತ್ಯನಾಥ್ ರಾಜಕೀಯದಲ್ಲಿ ಕಾಲಕಾಲಕ್ಕೆ ತಮ್ಮ ಚಾರಿತ್ರ್ಯ ಬದಲಿಸಿಕೊಳ್ಳುತ್ತಾ ಬಂದರು. ಬಾಲ್ಯದಲ್ಲಿ ಸನ್ಯಾಸಿಯಾಗಿ ನಂತರ ರಾಜಕಾರಣಿಯಾಗಿ ಬಂದ ಯೋಗಿ ಜೀವನದ ಪ್ರತಿಯೊಂದು ಪಾತ್ರದಲ್ಲೂ ಯಶಸ್ಸು ಪಡೆದಿದ್ದರೆ. ಇಂದು, ಅವರ ಜನ್ಮದಿನದಂದು, ನಾವು ಅವರ ಬಾಲ್ಯದ ಕೆಲವು ವಿಶೇಷ ಮಾಹಿತಿಯನ್ನ ನಿಮಗಾಗಿ ತಂದಿದ್ದೇವೆ ಇಲ್ಲಿವೆ ನೋಡಿ..
ಸಿಎಂ ಯೋಗಿ ಅವರ ಈ ಫೋಟೋ ಸಾಕಷ್ಟು ವೈರಲ್ ಆಗಿವೆ. ಇದರಲ್ಲಿ ಮಂಗವೊಂದು ಅವರ ಮಡಿಲಲ್ಲಿ ಕುಳಿತಿದೆ. ಎರಡನೇ ಫೋಟೋದಲ್ಲಿ, ಅವರು ತಮ್ಮ ಸಾಕು ನಾಯಿ ಗುಲ್ಲು ಜೊತೆ ಸಮಯ ಕಳೆಯುತ್ತಿದ್ದಾರೆ.
ಸಿಎಂ ಯೋಗಿಯ ಗೋರಖಪುರ ಮಠದಲ್ಲಿ ಹಲವು ಗೋವುಗಳಿವೆ.ಆಗಾಗ ಅವುಗಳೊಂದಿಗೆ ಸಮಯ ಕಳೆಯುತ್ತಾರೆ.
ಈ ಫೋಟೋದಲ್ಲಿ ಗೋರಖ್ಪುರದಲ್ಲಿ ಯೋಗಿ ಆದಿತ್ಯನಾಥ್ ಅವರು ದಸರಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ.
1991 ರಲ್ಲಿ ರಿಷಿಕೇಶದಲ್ಲಿ ಸಿಎಂ ಯೋಗಿ ತಮ್ಮ ಸ್ನೇಹಿತ ಸಂದೀಪ್ ಬಿಶ್ತ್ ಜೊತೆ.
1998ರಲ್ಲಿ ಸಿಎಂ ಯೋಗಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಈ ಫೋಟೋದಲ್ಲಿ ಸಿಎಂ ಯೋಗಿ ವಿಜಯೋತ್ಸವ ಆಚರಿಸುತ್ತಿದ್ದಾರೆ.
ನಾಥ್ ಪಂತ್ ಅವರ ದೀಕ್ಷಾ ಪ್ರಕ್ರಿಯೆಯ ನಂತರ, ಅಜಯ್ ಕುಮಾರ್ ಬಿಷ್ತ್ ಅವರು ಯೋಗಿ ಆದಿತ್ಯನಾಥ್ ಎಂದು ಹೊಸ ಹೆಸರಿನ ಮೂಲಕ ಚಿರಪರಿಚಿತರಾಗಿದ್ದಾರೆ.
ಸಿಎಂ ಯೋಗಿಯ ಈ ಫೋಟೋ 2010ರದ್ದು. ಬ್ಯಾಂಕಾಕ್ ಮೃಗಾಲಯದಲ್ಲಿರುವ ಹುಲಿ ಮರಿಗೆ ಹಾಲು ಕುಡಿಸುತ್ತಿರುವ ಫೋಟೋ ಇದಾಗಿದೆ. ಯೋಗಿಯವರು ಪ್ರಾಣಿ ಪ್ರೀತಿಯನ್ನು ತೋರಿಸುವ ಈ ಸಾಕಷ್ಟು ಫೋಟೋಗಳು ವೈರಲ್ ಆಗಿದೆ.
ಶಾಲಾ ದಿನಗಳಲ್ಲಿ ಸ್ನೇಹಿತರೊಂದಿಗೆ ಸಿಎಂ ಯೋಗಿ.
ಸಿಎಂ ಯೋಗಿ ಶಾಲಾ ದಿನಗಳಲ್ಲಿ ಹೀಗೇ ಕಾಣುತ್ತಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಾಲ್ಯದ ಹೆಸರು ಅಜಯ್ ಕುಮಾರ್ ಬಿಷ್ತ್. ಈ ಫೋಟೋ ಅವರ ಬಾಲ್ಯದ್ದು. ಈ ಈ ಫೋಟೋ ಪೌರಿ ಜಿಲ್ಲೆಯ ಪಂಚೂರ್ ಗ್ರಾಮದ ಅವರ ಮನೆಯ ಮುಂದೆ ತೆಗೆದಿದ್ದು.