Chia Seeds For Health: ಚಿಯಾ ಸೀಡ್ಸ್ ಸೇವನೆಯ ಈ ಆರೋಗ್ಯಕರ ಲಾಭ ನಿಮಗೆ ತಿಳಿದಿವೆಯೇ?

Chia Seeds Benefits - ಬೇಸಿಗೆ ಕಾಲದಲ್ಲಿ ಚಿಯಾ ಬೀಜಗಳು ದೇಹವನ್ನು ತಂಪಾಗಿರಿಸಲು ತುಂಬಾ ಸಹಕಾರಿಯಾಗಿವೆ. ಇದರ ಜೊತೆಗೆ ಚಿಯಾ ಬೀಜಗಳ (Chia Seeds) ಸೇವನೆ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿವೆ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಚಿಯಾ ಬೀಜಗಳ (Health Benefits Of Chia Seeds) ಸೇವನೆ ತುಂಬಾ ಹಿತಕಾರಿಯಾಗಿದೆ. ಹಾಗಾದರೆ ಬನ್ನಿ ಚಿಯಾ ಬೀಜಗಳ ಸೇವನೆ ಇತರ ಯಾವ ಆರೋಗ್ಯಕರ ಪ್ರಯೋಜನಗಳನ್ನು (How To Use Chia Seeds) ಹೊಂದಿವೆ ತಿಳಿದುಕೊಳ್ಳೋಣ.
 

Chia Seeds Health Benefits - ಚಿಯಾ ಬೀಜಗಳು ಬೇಸಿಗೆಯಲ್ಲಿ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿವೆ. ಪ್ರತಿನಿತ್ಯ ಇವುಗಳನ್ನು ಸೇವಿಸುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಇದರ ಆರೋಗ್ಯ ಪ್ರಯೋಜನಗಳಿಂದಾಗಿ ಇದನ್ನು ಸೂಪರ್‌ಫುಡ್ (Chia Seeds Benefits For Skin) ಎಂದೂ ಸಹ ಕರೆಯುತ್ತಾರೆ. ಆರೋಗ್ಯ ಪ್ರಯೋಜನಗಳ (Health Tips) ಜೊತೆಗೆ, ಇದು ತೂಕ ಇಳಿಕೆಗೂ ಕೂಡ ತುಂಬಾ ಸಹಕಾರಿಯಾಗಿದೆ. ಚಿಯಾ ಬೀಜಗಳು ಮತ್ತು ಆರೋಗ್ಯಕ್ಕೆ ಅದರಿಂದಾಗುವ ಲಾಭಗಳ ಕುರಿತು ತಿಲಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Neem Flower Tea: ತೂಕ ಇಳಿಕೆಗೆ ಬೇವಿನ ಹೂವಿನ ಟೀ ತುಂಬಾ ಸಹಕಾರಿ, ಈ ರೀತಿ ಬಳಸಿ

 

ಚಿಯಾ ಸೀಡ್ ಅಂದರೇನು? (How To Eat Chia Seeds)
ಚಿಯಾ ಬೀಜಗಳು ಮಿಂಟ್ ಪ್ರಜಾತಿಗೆ ಸೇರಿವೆ. ಮೆಕ್ಸಿಕೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದನ್ನೂ ಸಂಪೂರ್ಣ ಸಿರಿಧಾನ್ಯದ ರೂಪದಲ್ಲಿ ಸೇವಿಸಲಾಗುತ್ತದೆ. ಅಂದರೆ, ಇದು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ನೀರಿನಲ್ಲಿ ಇವುಗಳನ್ನು ನೆನೆಸಿದಾಗೆ ಇವು ದಪ್ಪ ಜೆಲ್ಲಿ ಬೀಜಗಳಾಗಿ ಪರಿವರ್ತನೆಯಾಗುತ್ತವೆ.

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 


 

1 /4

1. ಕರುಳಿನ ಆರೋಗ್ಯಕ್ಕೆ ಲಾಭಕಾರಿ - ಇದು ನೀರಿನಲ್ಲಿ ನೆನೆಯುವ ಫೈಬರ್ ಯುಕ್ತ ಪದಾರ್ಥವಾಗಿದೆ. ಇದು ಒಂದಲ್ಲ ಹಲವು ರೀತಿಯಲ್ಲಿ ಕರುಳಿನ ಆರೋಗ್ಯಕ್ಕೆ ಲಾಭಕಾರಿಯಾಗಿವೆ. ಕರುಳಿಗೆ ಒಳ್ಳೆಯ ಬ್ಯಾಕ್ಟೀರಿಯಾ ಪೂರೈಕೆಯನ್ನು ಇವು ಸುನೀಸ್ಚಿತಗೊಳಿಸುತ್ತವೆ ಹಾಗೂ ದೇಹದಿಂದ ವ್ಯಾಜ್ಯ ಪದಾರ್ಥಗಳ ಹೊರಹಾಕುವಿಕೆಯನ್ನು ನಿಯಂತ್ರಿಸುತ್ತದೆ. 

2 /4

2. ಇವುಗಳಲ್ಲಿ ಕ್ಯಾಲ್ಸಿಯಂ ಹೇರಳ ಪ್ರಮಾಣದಲ್ಲಿರುತ್ತದೆ -  ಒಂದು ವೇಳೆ ನಿಮಗೆ ಡೇರಿ ಉತ್ಪನ್ನಗಳು ಇಷ್ಟವಿಲ್ಲ ಎಂದಾದರೆ, ಚಿಯಾ ಬೀಜಗಳ ಸೇವನೆ ನಿಮ್ಮ ದೇಹದ ಮೂಳೆಗಳ (Chia Seeds For Bone Strength) ಆರೋಗ್ಯ ಬಲವರ್ಧನೆಗೆ ಉತ್ತಮ ಆಯ್ಕೆಯಾಗಿದೆ.

3 /4

3. ಒತ್ತಡ ಕಡಿಮೆ ಮಾಡಲು ಸಹಕಾರಿ (Chia Seeds For Stress) - ಚಿಯಾ ಬೀಜಗಳು ಟ್ರಿಪ್ಟೋಫ್ಯಾನ್ ಹಾಗೂ ಮೇಗ್ನಿಸಿಯಂನ ಆಗರವಾಗಿದೆ. ಇದು ಒತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ ಮತ್ತು ನಿದ್ರೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

4 /4

4. ಚಿಯಾ ಬೀಜಗಳ ಸೇವನೆಯಿಂದ ತೂಕ ಇಳಿಕೆಯಾಗುತ್ತದೆಯೇ? (Chia Seeds For Weight Loss) - ವಾಟರ್ ರೆಟೈನ್ಶನ್ ನಲ್ಲಿ ಸಹಕಾರಿಯಾಗಿದೆ. ಇದೆ ಕಾರಣದಿಂದ ಇದನ್ನು ಉತ್ತಮ ಪ್ರೋಟೀನ್ ಹೊಂದಿರುವ ಒಂದು ಉಪಹಾರ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದ ಭಾಸವಾಗುತ್ತದೆ. ಅನಾರೋಗ್ಯಕರ ಸ್ನ್ಯಾಕಿಂಗ್ ಸೇವನೆಯನ್ನು ಇದು ಕಡಿಮೆ ಮಾಡುತ್ತದೆ.   ನೆನಪಿರಲಿ: ಹಾಗೆ ನೋಡಿದರೆ ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಆದರೆ, ಕೆಲವರಿಗೆ ಇವುಗಳ ಸೇವನೆ ಕಿರಿಕಿರಿಯುಂಟು ಮಾಡಬಹುದು. ಹೀಗಿರುವಾಗ ಇವುಗಳನ್ನು ಸೇವಿಸುವ ಮುನ್ನ ನಿಮ್ಮ ಡೈಟೀಶಿಯನ್ ಅಥವಾ ವೈದ್ಯರ ಸಲಹೆಯನ್ನು ಪಡೆದುಕೊಳ್ಳಲು ಮರೆಯಬೇಡಿ.