CHAITRA NAVRATRI 2022: 51 ಶಕ್ತಿಪೀಠಗಳಲ್ಲಿ ವಿಶೇಷವಾಗಿವೆ ದೇವಿ ದುರ್ಗೆಯ ಈ 5 ದೇಗುಲಗಳು, ದರ್ಶನ ಮಾತ್ರದಿಂದ ಕಷ್ಟಗಳ ಪರಿಹಾರ

GODDESS DURGA 5 FAMOUS TEMPLES - ಚೈತ್ರ ನವರಾತ್ರಿ ಆರಂಭವಾಗಿದೆ. ಈ ವರ್ಷ ಚೈತ್ರ ನವರಾತ್ರಿಯು ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ನಡೆಯಲಿದೆ. ನವರಾತ್ರಿಯ 9 ದಿನಗಳಲ್ಲಿ, ಭಕ್ತರು ದೇವಿ ದುರ್ಗೆಯ (GODDESS DURGA TEMPLE) ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ. 

GODDESS DURGA 5 FAMOUS TEMPLES - ಚೈತ್ರ ನವರಾತ್ರಿ ಆರಂಭವಾಗಿದೆ. ಈ ವರ್ಷ ಚೈತ್ರ ನವರಾತ್ರಿಯು (Chaitra Navratri 2022) ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ನಡೆಯಲಿದೆ. ನವರಾತ್ರಿಯ 9 ದಿನಗಳಲ್ಲಿ, ಭಕ್ತರು ದೇವಿ ದುರ್ಗೆಯ (GODDESS DURGA TEMPLE) ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿಯಲ್ಲಿ ದೇವಿ ದುರ್ಗೆಯನ್ನು ಭಕ್ತಿ-ಭಾವದಿಂದ ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ದೇವಿ ದುರ್ಗೆಯ 51 ಶಕ್ತಿಪೀಠಗಳಿವೆ (51 SHAKTI PEETH). ಅವುಗಳಲ್ಲಿ 5 ಶಕ್ತಿಪೀಠಗಳನ್ನು (SHAKTI PEETH IN INDIA) ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಿದರೆ ಸಾಕು, ಜೀವನದಲ್ಲಿನ ಸಂಕಷ್ಟಗಳು ತೊಲಗಿ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. 

 

ಇದನ್ನೂ ಓದಿ-ಕುಬೇರ ಯೋಗದಿಂದ ಭಾರೀ ಅದೃಷ್ಟ ಪಡೆಯಲಿವೆ ಈ ಮೂರು ರಾಶಿಗಳು.! ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ದಕ್ಷಿಣೇಶ್ವರ್ ಕಾಳಿ ದೇವಸ್ಥಾನ - ದಕ್ಷಿಣೇಶ್ವರ್ ಕಾಳಿ ದೇವಸ್ಥಾನ ಪಶ್ಚಿಮ ಬಂಗಾಳದ ಹೋಗ್ಲಿ ನದಿಯ ದಡದಲ್ಲಿದೆ. ಈ ದೇವಸ್ಥಾನದಲ್ಲಿ ಕಾಳಿಕಾ ಮಾತೆಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ದೇವಿಯ ದರ್ಶನಕ್ಕಾಗಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರ. 

2 /5

2. ಜ್ವಾಲಾ ದೇವಿಯ ದೇವಸ್ಥಾನ, ಕಾಂಗಡಾ - ಜ್ವಾಲಾ ದೇವಿಯ ದೇವಸ್ಥಾನವು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ಯಾವಾಗಲೂ ಬೆಂಕಿಯ ಜ್ವಾಲೆಗಳು ಹೊರಬರುತ್ತವೆ. ಅದಕ್ಕಾಗಿಯೇ ಇದನ್ನು ಜ್ವಾಲಾ ಮಾತಾ ದೇವಾಲಯ ಎಂದು ಕರೆಯಲಾಗುತ್ತದೆ. ಇದು 51 ಶಕ್ತಿಪೀಠಗಳಲ್ಲಿ ಒಂದಾಗಿದೆ.

3 /5

3. ಕಾಮಾಖ್ಯಾ ದೇವಿ ದೇವಸ್ಥಾನ - ಕಾಮಾಖ್ಯ ದೇವಾಲಯವು ಗುವಾಹಟಿ (ಅಸ್ಸಾಂ) ನಗರದ ನೀಲಾಂಚಲ್ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಕೂಡ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಕಾಮಾಖ್ಯ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇದೊಂದು ಸಿದ್ಧ ಶಕ್ತಿಪೀಠ

4 /5

4. ಕರಣಿ ಮಾತಾ ಮಂದಿರ - ಕರ್ಣಿ ಮಾತೆಯ ದೇವಸ್ಥಾನವು ರಾಜಸ್ಥಾನದ ದೇಶ್ನೋಕ್ ಎಂಬ ಸ್ಥಳದಲ್ಲಿದೆ. ದೇವಿಯ ಈ ದೇವಾಲಯವನ್ನು ಇಲಿಗಳ ದೇವಾಲಯ ಎಂದೂ ಕರೆಯುತ್ತಾರೆ. ವಾಸ್ತವದಲ್ಲಿ. ಈ ದೇವಾಲಯದಲ್ಲಿ ಸಾವಿರಾರು ಇಲಿಗಳು ಸೇರುತ್ತವೆ. ಕರ್ಣಿ ಮಾತೆಯನ್ನು ದೇವಿ ದುರ್ಗೆಯ ರೂಪವೆಂದೆ ಪರಿಗಣಿಸಲಾಗುತ್ತದೆ. 

5 /5

5. ನೈನಾ ದೇವಿ - ನೈನಾ ದೇವಿ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ಇದು 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ನೈನಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಸತಿ ದೇವಿಯ ಕಣ್ಣು ಈ ಸ್ಥಳದಲ್ಲಿ ಬಿದ್ದಿದೆ ಎಂಬುದು ಐತಿಹ್ಯ.