ಅಖಿಲ ಭಾರತೀಯ ಹಿಂದೂ ಮಹಾಸಭಾ ಟೀನಾ ಮತ್ತು ಅಥರ್ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಟೀನಾ ಡಾಬಿ 2015ರಲ್ಲಿ ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಸಖತ್ ಸೌಂಡ್ ಮಾಡಿದ್ದರು. ಬಳಿಕ ಐಎಎಸ್ ರೇಸ್‌ನಲ್ಲಿ 2ನೇ ಸ್ಥಾನ ಪೆಡದಿದ್ದ ಅಥರ್ ಅಮೀರ್ ಖಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಟೀನಾ ದೇಶಾದ್ಯಂತ ಸುದ್ದಿಯಾಗಿದ್ದರು. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಯೇ ಇವರಿಬ್ಬರು ಪ್ರೀತಿಸಲು ಶುರು ಮಾಡಿದ್ದರು. ಇಬ್ಬರೂ ಮದುವೆಯಾಗುವುದಾಗಿ ಘೋಷಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಇವರಿಬ್ಬರ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಜೋಡಿಯ ವಿವಾಹ ‘ಲವ್ ಜಿಹಾದ್’ ಪ್ರೇರಿತವಾಗಿದೆ ಅಂತಾ ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರ ಬರೆದಿತ್ತು. ಅನೇಕ ಹಿಂದೂ ಸಂಘಟನೆಗಳ ವಿರೋಧದ ಮಧ್ಯೆಯೇ ಟೀನಾ ಮತ್ತು ಅಥರ್ ಖಾನ್ ಜೋಡಿ ಸತಿ-ಪತಿಗಳಾಗಿ ಸಪ್ತಪದಿ ತುಳಿದಿತ್ತು. ಆರಂಭದಲ್ಲಿ ತುಂಬಾ ಅನೋನ್ಯತೆಯಿಂದ ಇದ್ದ ಈ ಜೋಡಿಯ ಬಾಳಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಲು ನಿರ್ಧರಿಸಿದ್ದರು. ಅದರಂತೆ ಕಳೆದ ವರ್ಷದ ನವೆಂಬರ್ ನಲ್ಲಿ ವಿಚ್ಛೇದನಕ್ಕಾಗಿ ಟೀನಾ ಮತ್ತು ಅಥರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ಆಗಸ್ಟ್ 10ರಂದು ಜೈಪುರದ ಕೌಟುಂಬಿಕ ನ್ಯಾಯಾಲಯವು ಐಎಎಸ್ ಟಾಪರ್ ಗಳಿಗೆ ವಿಚ್ಛೇದನ ನೀಡಿದೆ. ಈ ಹಿಂದೆ ಈ ಜೋಡಿ ಲವ್ ಬರ್ಡ್ಸ್ ಆಗಿ ಸಂತೋಷದಿಂದ ಕಾಲಕಳೆದ ಕ್ಷಣಗಳ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಐಎಎಸ್ ಟಾಪರ್ ಗಳಾದ ಟೀನಾ ಡಾಬಿ ಮತ್ತು ಅಥರ್ ಖಾನ್ ಇಬ್ಬರು ಮೊದಲ ಭೇಟಿಯಲ್ಲಿಯೇ ಪ್ರೀತಿಸಲು ಶುರುಮಾಡಿದ್ದರು. ನಾರ್ತ್ ಬ್ಲಾಕ್‌ನ ಡಿಒಪಿಟಿ ಕಚೇರಿಯಲ್ಲಿ ಆಯೋಜಿಸಿದ್ದ 2016ರ ಅಭಿನಂದನಾ ಸಮಾರಂಭದಲ್ಲಿ ಇಬ್ಬರೂ ಭೇಟಿಯಾದರು. ಸಂಜೆಯ ಹೊತ್ತಿಗೆ ಟೀನಾಗೆ ಅಥರ್ ಲವ್ ಪ್ರಪೋಸ್ ಮಾಡಿದ್ದನು. ‘ಅಮೀರ್ ಪರಿಶ್ರಮಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆತ ಅದ್ಭುತ ವ್ಯಕ್ತಿ. ನಾವಿಬ್ಬರೂ ಶೀಘ್ರದಲ್ಲಿಯೇ ಮದುವೆಯಾಗುತ್ತೇವೆ’ ಅಂತಾ ಟೀನಾ ಹೇಳಿದ್ದರು.
ಯುಪಿಎಸ್‌ಸಿ ರೇಸ್‌ನಲ್ಲಿ ಟೀನಾ ಡಾಬಿ ಎದುರು ಅಥರ್ ಸೋತರೂ, ಕೊನೆಯಲ್ಲಿ ಆತ ಅವಳ ಹೃದಯವನ್ನೇ ಗೆದ್ದ ಅಂತಾ ಅನೇಕರು ಹೇಳಿದ್ದರು.
ಟೀನಾ ಮತ್ತು ಅಥರ್ ತಮ್ಮ ತರಬೇತಿ ಅವಧಿಯಲ್ಲಿಯೇ ಪರಸ್ಪರ ಹತ್ತಿರವಾಗಿದ್ದರು. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಯೇ ಪ್ರೀತಿಸಲು ಶುರುಮಾಡಿದ್ದರು. ಇಬರಿಬ್ಬರೂ ರಾಜಸ್ಥಾನ ಕೇಡರ್‌ನ ಅಧಿಕಾರಿಗಳಾಗಿದ್ದು, ಪ್ರಸ್ತುತ ಅದೇ ರಾಜ್ಯದಲ್ಲಿ ಸೇವೆಗೆ ನೇಮಕಗೊಂಡಿದ್ದಾರೆ.
ಟೀನಾ ಡಾಬಿ ಮತ್ತು ಅಥರ್ ಖಾನ್ ಇಬ್ಬರು ಸೇರಿ ಪ್ರಪಂಚವನ್ನು ಸುತ್ತಿದ್ದರು. ಪ್ರೀತಿಯ ಸಂಕೇತವಾಗಿರುವ ಪ್ಯಾರಿಸ್ ನಗರದ ಜಗತ್‍ಪ್ರಸಿದ್ಧ ಐಫಲ್ ಟವರ್ ಬಳಿ ನಿಂತು ಈ ಕ್ಯೂಟ್ ಜೋಡಿ ಸದಾಕಾಲ ಒಂದಾಗಿರೋಣ ಎಂದಿತ್ತು. ಟೀನಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಪಂಚ ಸುತ್ತಿರುವ ಜೋಡಿಯ ಚಿತ್ರಗಳೇ ತುಂಬಿವೆ.
ಆರಂಭದಲ್ಲಿ ತುಂಬಾ ಅನೋನ್ಯತೆಯಿಂದ ಇದ್ದ ಈ ಯುವ ಐಎಎಸ್ ದಂಪತಿ ಜೋಡಿ ದೇಶ-ವಿದೇಶಗಳಲ್ಲಿ ಪ್ರವಾಸ ಮಾಡಿತ್ತು. ಆಗ್ರಾ ಪ್ರವಾಸದಲ್ಲಿ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಿ ಪ್ರೀತಿ-ಪ್ರೇಮ, ಪ್ರಣಯ ಪಕ್ಷಿಗಳಾಗಿ ಮೋಜು-ಮಸ್ತಿ ಮಾಡಿದ್ದರು.
ಕೆಲವು ದಿನಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಡಾಬಿ ತಮ್ಮ ಉಪನಾಮದಿಂದ ‘ಖಾನ್’ ಪದವನ್ನು ತೆಗೆದುಹಾಕಿದ್ದರು. ಬಳಿಕ ಅಥರ್ ಕೂಡ ಡಾಬಿ ಅವರನ್ನು ಅನ್ ಫಾಲೋ ಮಾಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಬಿರುಕು ಮೂಡಿದೆ ಅಂತಾ ಸುದ್ದಿಯಾಗಿತ್ತು. ಅಂತಿಮವಾಗಿ ಈ ಜೋಡಿಯ ಸಂಬಂಧ ವಿಚ್ಛೇದನದಲ್ಲಿ ಅಂತ್ಯವಾಗಿದೆ.