A New Scam In WhatsApp- ವಾಟ್ಸಾಪ್‌ನ ಈ ಹಗರಣಗಳ ಬಗ್ಗೆ ಎಚ್ಚರವಿರಲಿ

                  

ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಅತಿ ಹೆಚ್ಚು ಬಳಕೆದಾರರು ಬಳಸುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ ಕೂಡ ಒಂದು.  ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ವಂಚಕರು ವಾಟ್ಸಾಪ್‌ ಅನ್ನು ತಮ್ಮ ವಂಚನೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಳಕೆದಾರರು ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯವಾಗಿದ್ದು ವಾಟ್ಸಾಪ್‌ನಲ್ಲಿ ಬರುವ ಯಾವುದೇ ಸಂದೇಶವನ್ನು ಕೂಲಂಕಷವಾಗಿ ಪರೀಕ್ಷಿಸಿ ಪ್ರತಿಕ್ರಿಯಿಸುವ ಅಗತ್ಯವಿದೆ. ಪ್ರಸ್ತುತ, ವಾಟರ್ಸಾಪ್ನ ಹೊಸ ಹಗರಣದಲ್ಲಿ ಸೈಬರ್ ಅಪರಾಧಿಗಳು ಜನರಿಗೆ ಒಟಿಪಿಗಳನ್ನು ಕಳುಹಿಸುತ್ತಿದ್ದಾರೆ. ಇದರಲ್ಲಿ,  ಸಹಾಯದ ಹೆಸರಿನಲ್ಲಿ ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಈ ಹಗರಣದಿಂದ ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿರಿ. ವಾಟ್ಸಾಪ್‌ನಲ್ಲಿನ ಒಟಿಪಿ ಹಗರಣವು ಜನರನ್ನು ಹೇಗೆ ವಂಚಿಸುತ್ತಿದೆ ಎಂದು ತಿಳಿಯೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸೈಬರ್ ಅಪರಾಧಿಗಳು ವಾಟ್ಸಾಪ್ ಬಳಕೆದಾರರಿಗೆ ಪರಿಚಯಸ್ಥರ ಹೆಸರಿನಲ್ಲಿ ಸಂದೇಶವನ್ನು ಕಳುಹಿಸುತ್ತಾರೆ ಮತ್ತು ಸಹಾಯವನ್ನು ಕೇಳುತ್ತಾರೆ. ಅಂತಹ ಸಂದೇಶಗಳು ಎಷ್ಟರ ಮಟ್ಟಿಗೆ ನಿಜ ಎನಿಸುತ್ತದೆ ಎಂದರೆ ತಮಗೆ ಸಂದೇಶ ಕಳುಹಿಸಿರುವವರು ನಿಜವಾಗಿಯೂ ದೊಡ್ಡ ತೊಂದರೆಯಲ್ಲಿ ಸಿಲುಕಿದ್ದಾರೆನೋ ಎಂಬಂದಂತೆ ನಿಮಗೆ ಭಾಸವಾಗುವ ಮಟ್ಟಿಗೆ ಇರುತ್ತದೆ ಎನ್ನಲಾಗಿದೆ.

2 /4

ಸೈಬರ್ ಅಪರಾಧಿಯು  ವಾಟ್ಸಾಪ್ (Whatsapp) ಬಳಕೆದಾರರನ್ನು ಗೊಂದಲಗೊಳಿಸುತ್ತಾನೆ ಮತ್ತು ಅವನ ಮೊಬೈಲ್‌ನಲ್ಲಿ ನಿಮಗೆ ಒಟಿಪಿ ಕಳುಹಿಸುತ್ತಾನೆ. ತಪ್ಪಾಗಿ ಆ ಒಟಿಪಿ ನಿಮ್ಮ ಮೊಬೈಲ್‌ನಲ್ಲಿ ಬಂದಿದೆ. ಅದನ್ನು ತಿಳಿಸಿ ಎಂದು ಅವನು ನಿಮ್ಮನ್ನು ಕೇಳುತ್ತಾನೆ. ಅವನ ನಿಜವಾದ ಆಟ ಪ್ರಾರಂಭವಾಗುವುದು ಇಲ್ಲಿಯೇ. ಈ ರೀತಿಯೇ ಅವರು ವಾಟ್ಸಾಪ್ ಮೂಲಕ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಇದನ್ನೂ ಓದಿ - Whatsapp Voice Messageಗೆ ಸಂಬಂಧಿಸಿದಂತೆ ಬಂದಿದೆ ಹೊಸ ವೈಶಿಷ್ಟ್ಯ

3 /4

ಸೈಬರ್ ಅಪರಾಧಿಗಳಿಗೆ ನೀವು ಒಟಿಪಿಗೆ ಹೇಳಿದ ತಕ್ಷಣ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗುತ್ತದೆ. ಬಳಿಕ ಹ್ಯಾಕರ್ ತನ್ನಿಚ್ಚೆಯಂತೆ ಆ ಖಾತೆಯನ್ನು ಬಳಸಲು ಪ್ರಾರಂಭಿಸುತ್ತಾನೆ. ಹ್ಯಾಕರ್‌ಗಳು ನಿಮ್ಮ ವಾಟ್ಸಾಪ್ ಖಾತೆಯನ್ನು ಯಾವುದೇ ರೀತಿಯ ವದಂತಿ ಹರಡಲೆಂದೋ ಅಥವಾ ತಪ್ಪು ಕೆಲಸಗಳಿಗಾಗಿ ಬಳಸಬಹುದು ಮತ್ತು ನಿಮಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ - Alert! May 15ರ ಬಳಿಕ ನಿಮ್ಮ ಫೋನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ WhatsApp, ತಕ್ಷಣ ಈ ಕೆಲಸ ಮಾಡಿ

4 /4

-ನಿಮ್ಮ ಖಾತೆ ಹ್ಯಾಕ್ ಆಗಿದ್ದರೆ, ತಕ್ಷಣ ವಾಟ್ಸಾಪ್ ಅನ್ನು ಮರುಹೊಂದಿಸಿ. ಈ ಸಂದರ್ಭದಲ್ಲಿ, ನೀವು ಮೊದಲಿನಂತೆ ವಾಟ್ಸಾಪ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ. ಒಟಿಪಿ ಮತ್ತೆ ನಿಮ್ಮ ಸಂಖ್ಯೆಗೆ ಬರುತ್ತದೆ ಮತ್ತು ಅದನ್ನು ಸೈಬರ್ ಅಪರಾಧಿಗಳ ಖಾತೆಯಿಂದ ಲಾಗ್ ಔಟ್ ಮಾಡಲಾಗುತ್ತದೆ. ಆದರೆ ಈ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕಾಗಿದೆ. -ನಿಮ್ಮ ಅನುಮತಿಯಿಲ್ಲದೆ ವಾಟ್ಸಾಪ್ ಒಟಿಪಿ ಕಳುಹಿಸದಿರಲು ನೋಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಒಟಿಪಿ ಬಂದರೆ, ಜಾಗರೂಕರಾಗಿರಿ. -ಹ್ಯಾಕರ್‌ಗಳು ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರ ಹೆಸರಿನಲ್ಲಿ ನಿಮಗೆ ಮೋಸ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಹಾಯ ಕೋರಿದವರಿಗೆ ಒಮ್ಮೆ ಕರೆ ಮಾಡಿ ಅಥವಾ ಇನ್ನಾವುದಾದರೂ ರೀತಿಯಲ್ಲಿ ಅವರಿಗೆ ನಿಜವಾಗಿಯೂ ಸಹಾಯದ ಅಗತ್ಯವಿದೆಯೇ ಎಂದು ತಿಳಿದು ಮುಂದುವರೆಯುವುದು ಒಳ್ಳೆಯದು. - ಎಂತಹದ್ದೇ ಸಂದರ್ಭದಲ್ಲಿ ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬೇಡಿ. - ನಿಮ್ಮ ವಾಟ್ಸಾಪ್ನಲ್ಲಿ ಎರಡು ಫ್ಯಾಕ್ಟರ್ ದೃಢೀಕರಣ ಆಯ್ಕೆಯನ್ನು ಆನ್ ಮಾಡಿ. ಇದರ ನಂತರ, ವಾಟ್ಸ್‌ಆ್ಯಪ್ ಚಾಲನೆ ಮಾಡುವ ಮೊದಲು ಅಥವಾ ಬೇರೆ ಯಾವುದೇ ಸಾಧನದಲ್ಲಿ ಹ್ಯಾಕರ್‌ಗಳಿಗೆ ಒಟಿಪಿ ಹೊರತುಪಡಿಸಿ ಕೋಡ್ ಅಗತ್ಯವಿದೆ.