ನಿಮ್ಮ ಬಜೆಟ್ ಗೆ ಹೊಂದುವಂತಹ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಕೆಲ ಸ್ಮಾರ್ಟ್ಫೋನ್ಗಳ ಮಾಹಿತಿ ನಿಮಗಾಗಿ ಇಲ್ಲಿ ನೀಡಲಾಗಿದೆ.
ಇಂದು ನಾವು ಯಾವುದೇ ಸ್ಮಾರ್ಟ್ಫೋನ್ ಖರೀದಿಸುವಾಗ ಅವುಗಳಲ್ಲಿರುವ ವಿಶೇಷ ವೈಶಿಷ್ಟ್ಯಗಳ ಬಗ್ಗೆ ಗಮನವಹಿಸುತ್ತೇವೆ. ದುಬಾರಿ ಸ್ಮಾರ್ಟ್ಫೋನ್ ದುನಿಯಾ ಇರುವುದರಿಂದ ಬಜೆಟ್ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಫೋನ್ ಖರೀದಿಸಲು ನಾವು ಉತ್ಸುಕರಾಗಿರುತ್ತೇವೆ. ಬೆಲೆಗೆ ತಕ್ಕಂತೆ ಫೋನಿನ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆಯೂ ನಾವು ಖಾತ್ರಿಪಡಿಸಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಬಜೆಟ್ ಗೆ ಹೊಂದುವಂತಹ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಕೆಲ ಸ್ಮಾರ್ಟ್ಫೋನ್ಗಳ ಮಾಹಿತಿ ನಿಮಗಾಗಿ ಇಲ್ಲಿ ನೀಡಲಾಗಿದೆ. ವಿಶೇಷವೆಂದರೆ ಈ ಫೋನ್ಗಳು ಜಲನಿರೋಧಕವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Xiaomi redmi note 10: ನೀವು ಈ Xiaomi ಸ್ಮಾರ್ಟ್ಫೋನ್ ಅನ್ನು 15,745 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಫೋನ್ IP53 ರೇಟಿಂಗ್ನೊಂದಿಗೆ ಬರುತ್ತದೆ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ನೊಂದಿಗೆ ನೀವು ಇದರಲ್ಲಿ ಅನೇಕ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.
Samsung Galaxy A52: Android 11ರಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ಫೋನ್ 128GB ಆಂತರಿಕ ಸ್ಟೋರೇಜ್ ಮತ್ತು IP67 ರೇಟಿಂಗ್ನೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್ಕಾರ್ಟ್ನಲ್ಲಿ 26,875 ರೂ.ಗೆ ಖರೀದಿಸಬಹುದು.
Apple iPhone 11 Pro: iPhone 11 Pro ಸ್ಮಾರ್ಟ್ಫೋನ್ ಸಹ IP68 ರೇಟಿಂಗ್ನೊಂದಿಗೆ ಬರುತ್ತದೆ. ಇದರ ಬೆಲೆ 1,21,300 ರೂ. ಆಗಿದ್ದು, ಇದನ್ನು ನೀವು 99,900 ರೂ.ಗೆ ಖರೀದಿಸಬಹುದು. ಇದಲ್ಲದೆ ಎಕ್ಸ್ ಚೇಂಜ್ ಆಫರ್ನಲ್ಲಿ ನೀವು ಹೆಚ್ಚುವರಿಯಾಗಿ 14,250 ರೂ.ವರೆಗೂ ಉಳಿಸಬಹುದು.
Poko X3: ನೀವು ಈ Poco ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 16,999 ರೂ.ಗೆ ಖರೀದಿಸಬಹುದು ಮತ್ತು ಈ ಫೋನ್ ಸ್ಪ್ಲಾಶ್ ಪ್ರೂಫ್ ಆಗಿದೆ. ಆಫರ್ ನಲ್ಲಿ ಸಿಗುವ ಹೆಚ್ಚುವರಿ ರಿಯಾಯಿತಿ ನಂತರ 16,149 ರೂ.ಗೆ ನೀವು ಈ ಫೋನ್ ಖರೀದಿಸಬಹುದು.
Samsung Galaxy S20 FE: ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಅನ್ನು 39,490 ರೂ.ಗೆ ಖರೀದಿಸಬಹುದು. ಈ ಫೋನ್ನ IP68 ರೇಟಿಂಗ್ ಇದನ್ನು ನೀರು ಮತ್ತು ಧೂಳಿನಿಂದಲೂ ರಕ್ಷಿಸುತ್ತದೆ.