Business Idea: ಕೇವಲ 15 ಸಾವಿರದಲ್ಲಿ ವ್ಯಾಪಾರ ಶುರು ಮಾಡಿ, ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿ..!

ವಿಶ್ವಾದ್ಯಂತ ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಅದೇ ರೀತಿ ಭಾರತದಲ್ಲಿಯೂ 277 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ.

ನೀವು ಕೂಡ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಇಲ್ಲಿದೆ ಉತ್ತಮ ಸುವರ್ಣಾವಕಾಶ. ಇಂದು ನಾವು ನಿಮಗೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲದ ವ್ಯವಹಾರದ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ವ್ಯವಹಾರದಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡಿ ಮನೆಯಲ್ಲಿಯೇ ಕುಳಿತು ಉತ್ತಮ ಲಾಭ ಗಳಿಸಬಹುದು. ಈ ವ್ಯವಹಾರದ ವ್ಯಾಪ್ತಿ ದೊಡ್ಡದಾಗಿದೆ. ವಿಶ್ವಾದ್ಯಂತ ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಅದೇ ರೀತಿ ಭಾರತದಲ್ಲಿಯೂ 277 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ. ಇದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇದು ಮರುಬಳಕೆ ವಸ್ತುಗಳ ವ್ಯಾಪಾರ(Junk Removal Business). ನೀವು ಮನೆಯ ಸ್ಕ್ರ್ಯಾಪ್‌ಗಳಿಂದ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ವ್ಯವಹಾರವು ಅನೇಕರನ್ನು ಮಿಲಿಯನೇರ್‌ಗಳನ್ನಾಗಿ ಮಾಡಿದೆ. ಹಾಗಾದರೆ ಈ ವ್ಯಾಪಾರವನ್ನು ಯಾವಾಗ ಮತ್ತು ಎಲ್ಲಿ ಪ್ರಾರಂಭಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

2 /5

ಈ ವ್ಯವಹಾರದ ವ್ಯಾಪ್ತಿ ದೊಡ್ಡದಾಗಿದೆ. ವಿಶ್ವಾದ್ಯಂತ ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಅದೇ ರೀತಿ ಭಾರತದಲ್ಲಿ 277 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ. ಇಷ್ಟು ದೊಡ್ಡಮಟ್ಟದ ತ್ಯಾಜ್ಯ ನಿರ್ವಹಣೆ ಅತ್ಯಂತ ಕಷ್ಟಕರವಾದ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕರು ಮನೆಯ ಅಲಂಕಾರಿಕ ವಸ್ತುಗಳು, ಆಭರಣಗಳು, ತ್ಯಾಜ್ಯ ವಸ್ತುಗಳಿಂದ ಪೇಂಟಿಂಗ್‌ಗಳಂತಹ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಈ ದೊಡ್ಡ ಸಮಸ್ಯೆಯನ್ನು ವ್ಯಾಪಾರವಾಗಿ ಪರಿವರ್ತಿಸಿದ್ದಾರೆ. ಅನೇಕರು ತಮ್ಮ ಭವಿಷ್ಯವನ್ನು ಕಸದ ವ್ಯಾಪಾರದಿಂದ ರೂಪಿಸಿಕೊಂಡಿದ್ದಾರೆ ಮತ್ತು ಇಂದು ಅವರು ಲಕ್ಷಾಂತರ ಲಾಭವನ್ನು ಗಳಿಸುತ್ತಿದ್ದಾರೆ.

3 /5

ನೀವು ಜಂಕ್ ಅಂದರೆ ಗುಜರಿ ವಸ್ತುಗಳಿಂದ ಅನೇಕ ವಸ್ತುಗಳನ್ನು ತಯಾರಿಸಬಹುದು. ಆಸನ ಕುರ್ಚಿಗಳನ್ನು ಟೈರ್ ಗಳಿಂದ ತಯಾರಿಸಬಹುದು. Amazonನಲ್ಲಿ ಇದರ ಬೆಲೆ ಸುಮಾರು 700 ರೂ. ಇದೆ. ಇದಲ್ಲದೆ ಕಪ್ ಗಳು, ಮರದ ಕರಕುಶಲ ವಸ್ತುಗಳು, ಕೆಟಲ್ಸ್, ಕನ್ನಡಕಗಳು, ಬಾಚಣಿಗೆಗಳು ಮತ್ತು ಇತರ ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಅಂತಿಮವಾಗಿ ಮಾರ್ಕೆಟಿಂಗ್ ಕೆಲಸ ಪ್ರಾರಂಭವಾಗುತ್ತದೆ. ಇದನ್ನು ಇ-ಕಾಮರ್ಸ್ ಕಂಪನಿ Amazon ಮತ್ತು Flipkart ನಲ್ಲಿ ಮಾರಾಟ ಮಾಡಬಹುದು. ನೀವು ಇವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಬಹುದು. ಇದಲ್ಲದೆ ನೀವು ಚಿತ್ರಕಲೆಗಳಲ್ಲಿ ಆಸಕ್ತಿ ಹೊಂದಿದ್ದರೆ ವಿವಿಧ ಬಣ್ಣಗಳ ಪೇಟಿಂಗ್ ಕೂಡ ರಚಿಸಬಹುದು.

4 /5

ಈ ವ್ಯವಹಾರವನ್ನು ಪ್ರಾರಂಭಿಸಲು ಮೊದಲನೆಯದಾಗಿ ನೀವು ನಿಮ್ಮ ಮತ್ತು ನಿಮ್ಮ ಮನೆಯ ಸುತ್ತಲಿನ ತ್ಯಾಜ್ಯ ವಸ್ತುಗಳನ್ನು ಅಂದರೆ ಜಂಕ್ ಅನ್ನು ಸಂಗ್ರಹಿಸಬೇಕು. ಬೇಕಿದ್ದರೆ ಮುನ್ಸಿಪಲ್ ಕಾರ್ಪೊರೇಷನ್ ನ ತ್ಯಾಜ್ಯವನ್ನೂ ತೆಗೆದುಕೊಂಡು ಹೋಗಬಹುದು. ಅನೇಕ ಗ್ರಾಹಕರು ತ್ಯಾಜ್ಯ ವಸ್ತುಗಳನ್ನು ಸಹ ಒದಗಿಸುತ್ತಾರೆ, ನೀವು ಅವರಿಂದ ಖರೀದಿಸಬಹುದು. ಇದರ ನಂತರ ಆ ಜಂಕ್ ಅನ್ನು ಸ್ವಚ್ಛಗೊಳಿಸಿ, ನಂತರ ವಿವಿಧ ವಿನ್ಯಾಸಗಳ ವಸ್ತುಗಳನ್ನು ತಯಾರಿಸಬಹುದು.

5 /5

‘ದಿ ಕಬಾಡಿ ಡಾಟ್ ಕಾಮ್’ ಸ್ಟಾರ್ಟ್‌ಅಪ್‌ನ ಮಾಲೀಕ ಶುಭಂ, ಆರಂಭದಲ್ಲಿ ರಿಕ್ಷಾ, ಆಟೋ ಮತ್ತು 3 ಜನರೊಂದಿಗೆ ಮನೆಯಿಂದ ಮನೆಗೆ ಜಂಕ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಇಂದು ಅವರ 1 ತಿಂಗಳ ವಹಿವಾಟು 8-10 ಲಕ್ಷ ರೂ. ತಲುಪಿದೆ. ಈ ಕಂಪನಿ 1 ತಿಂಗಳಲ್ಲಿ 40 ರಿಂದ 50 ಟನ್ ಸ್ಕ್ರ್ಯಾಪ್ ಅನ್ನು ಸಂಗ್ರಹಿಸಿ ಮನೆಬಳಕೆ ವಸ್ತುಗಳನ್ನು ತಯಾರಿಸುವ ಕೆಲಸ ಮಾಡುತ್ತಿವೆ.