ಕಡಿಮೆ ಬಂಡವಾಳದಿಂದ ಈ ಬ್ಯುಸಿನೆಸ್ ಪ್ರಾರಂಭಿಸಿದರೆ ನೀವು ಲಕ್ಷ ಲಕ್ಷ ಹಣ ಗಳಿಸಬಹುದು.
ನೀವು ಪ್ರಾಣಿಗಳನ್ನು ಪ್ರೀತಿಸುತ್ತಿದ್ದರೆ ಇದಕ್ಕೆ ಸಂಬಂಧಿಸಿದ ವ್ಯವಹಾರ ಪ್ರಾರಂಭಿಸಬಹುದು. ಈ ವ್ಯವಹಾರದಿಂದ ನಿಮ್ಮ ಹವ್ಯಾಸವೂ ನೆರವೇರುತ್ತದೆ ಮತ್ತು ಲಕ್ಷಗಟ್ಟಲೆ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇಂದು ಈ ವಿಶೇಷ ವ್ಯಾಪಾರಕ್ಕೆ ಭಾರೀ ಬೇಡಿಕೆ ಇದೆ. ಕಡಿಮೆ ಬಂಡವಾಳದಿಂದ ಈ ಬ್ಯುಸಿನೆಸ್ ಪ್ರಾರಂಭಿಸಿದರೆ ನೀವು ಲಕ್ಷ ಲಕ್ಷ ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿಯೇ ಈ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ. ಇದು ಮೊಲ ಸಾಕಾಣಿಕೆ ವ್ಯಾಪಾರ. ನೀವು ಕೂಡ ಮೊಲ ಸಾಕಣೆ(Rabbit Farming)ಯ ಈ ವ್ಯವಹಾರಕ್ಕೆ ಕೈಹಾಕಬಹುದು. ನಿಮ್ಮ ಬಜೆಟ್ ಗೆ ಅನುಗುಣವಾಗಿ ಈ ವ್ಯವಹಾರ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಬಹುದು. ಇದರ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮಗೆ ಮೊಲ ಸಾಕಾಣಿಕೆ ವ್ಯವಹಾರ (Superhit Business Idea) ಪ್ರಾರಂಭಿಸುವ ಬಯಕೆ ಇದೆಯೇ?. ಕೇವಲ 4 ಲಕ್ಷದಿಂದ ಮೊಲ ಸಾಕಾಣಿಕೆ ಬ್ಯುಸಿನೆಸ್ ಆರಂಭಿಸಬಹುದು. ಮೊಲದ ಕೂದಲಿನಿಂದ ಮಾಡಿದ ಉಣ್ಣೆಗೆ ಕೈತುಂಬಾ ಹಣ ಸಿಗಲಿದೆ. ಮೊಲದ ಮಾಂಸಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಘಟಕದ ಪ್ರಕಾರ ಮೊಲಗಳನ್ನು ಸಾಕಲಾಗುತ್ತದೆ. ಒಂದು ಘಟಕದಲ್ಲಿ 3 ಗಂಡು(Male) ಮತ್ತು 7 ಹೆಣ್ಣು(Female) ಮೊಲಗಳಿರುತ್ತವೆ. ಮೊಲ ಸಾಕಾಣಿಕೆ ವ್ಯವಹಾರದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ. ಪಂಜರಗಳನ್ನು ಸ್ವಚ್ಛಗೊಳಿಸಲು ಮತ್ತು ಮೊಲಗಳ ಆಹಾರಕ್ಕಾಗಿ ನೀವು ಸಹಾಯಕರನ್ನು ನೇಮಿಸಿಕೊಳ್ಳಬಹುದು.
ಮೊಲ ಸಾಕಾಣಿಕೆ(Rabbit Farming)ಯಲ್ಲಿ 10 ಘಟಕಗಳಿಗೆ 2 ಲಕ್ಷ ರೂ. ಖರ್ಚಾಗುತ್ತದೆ. ಟಿನ್ ಶೆಡ್ ನಿರ್ಮಿಸಲು 1.5 ಲಕ್ಷ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಇದೇ ರೀತಿ ಪಂಜರಕ್ಕೆ 1-1.25 ಲಕ್ಷದವರೆಗೆ ಖರ್ಚಾಗುತ್ತದೆ. 30 ದಿನಗಳ ಗರ್ಭಾವಸ್ಥೆಯ ಅವಧಿಯ ನಂತರ ಹೆಣ್ಣು 6-7 ಮರಿಗಳಿಗೆ ಜನ್ಮ ನೀಡುತ್ತವೆ. ಜನನದ ನಂತರ ಸುಮಾರು 45 ದಿನಗಳಲ್ಲಿ ಮರಿ ಮೊಲವು 2 ಕೆಜಿ ತೂಗುತ್ತದೆ. ಅದನ್ನು ನೀವು ಮಾರಾಟ ಮಾಡಬಹುದು. ಈ ವ್ಯವಹಾರದಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಭರ್ಜರಿ ಲಾಭ ನಿಮ್ಮದಾಗುತ್ತದೆ. ಪ್ರಾರಂಭದಲ್ಲಿ ನೀವು ಕಡಿಮೆ ಹೂಡಿಕೆ ಮಾಡಿ ನಂತರ ವ್ಯಾಪಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಕೈತುಂಬಾ ಹಣ ಗಳಿಸಬಹುದು.
ಮೊಲ ಸಾಕಾಣಿಕೆಯಲ್ಲಿ ನೀವು ಉತ್ತಮ ಲಾಭ ಗಳಿಸಬಹುದು. ಹೆಣ್ಣು ಮೊಲವೊಂದು ಕೇವಲ ಒಂದೇ ವರ್ಷದಲ್ಲಿ ಸುಮಾರು 7 ಮರಿಗಳಿಗೆ ಜನ್ಮ ನೀಡುತ್ತದೆ. ಅವಗಳು ಕೂಡ ಸರಾಸರಿ 5 ಮರಿಗಳಿಗೆ ಜನ್ಮ ನೀಡಿದರೆ ವರ್ಷದಲ್ಲಿ ಮೊಲಗಳ ಸಂಖ್ಯೆ ಹೆಚ್ಚಾಗಿ ನಿಮ್ಮ ಬ್ಯುಸಿನೆಸ್ ಭರ್ಜರಿಯಾಗುತ್ತದೆ. ಒಂದು ಮಟ್ಟಕ್ಕೆ ನೀವು ವ್ಯವಹಾರವನ್ನು ಉತ್ತಮಪಡಿಸಿದರೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಲು ಸಾಧ್ಯವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭದ ಬೆಳೆಯನ್ನು ನೀವು ತೆಗೆಯಬಹುದು. ಇದಲ್ಲದೆ ಮೊಲಗಳನ್ನು ಕೃಷಿ ತಳಿ ಮತ್ತು ಉಣ್ಣೆ ವ್ಯಾಪಾರಕ್ಕಾಗಿ ಖರೀದಿಸಲಾಗುತ್ತದೆ. ಇದರಿಂದಲೂ ಕೂಡ ನೀವು ಉತ್ತಮ ಹಣ ಗಳಿಸಬಹುದು.
ಮೊಲದ ಮರಿಗಳನ್ನು ಮಾರಾಟ ಮಾಡುವ ಮೂಲಕ ಕೇವಲ ಒಂದೇ ವರ್ಷದಲ್ಲಿ ಕೇವಲ 10 ಲಕ್ಷ ರೂ.ಗಳಷ್ಟು ಗಳಿಸಬಹುದು. ಮೊಲಗಳಿಗೆ ಅಗತ್ಯವಿರುವ ಮೇವು ಮತ್ತು ನಿರ್ವಹಣೆಗೆ 2 ರಿಂದ 3 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಈ ರೀತಿ ಮೊಲಗಳ ಮಾರಾಟದಿಂದ ನೀವು ವಾರ್ಷಿಕವಾಗಿ 8 ಲಕ್ಷ ರೂ.ಗಳವರೆಗೆ ಸುಲಭವಾಗಿ ಲಾಭ ಗಳಿಸಬಹುದು.
ನೀವು ಈ ವ್ಯವಹಾರ ಪ್ರಾರಂಭಿಸುವ ಮುನ್ನ ಏನಾದರೂ ತರಬೇತಿ ಪಡೆಯಲು ಬಯಸಿದರೆ ಅದಕ್ಕೂ ಅವಕಾಶವಿದೆ. ಅಗತ್ಯ ತರಬೇತಿ ತೆಗೆದುಕೊಳ್ಳುವ ಮೂಲಕ ಕಡಿಮೆ ಬಂಡವಾಳ ಹೂಡಿ ಮೊಲ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಬಹುದು. ತರಬೇತಿಯಲ್ಲಿ ನಿಮಗೆ ಮೊಲ ಸಾಕಣೆಯಿಂದ ಹಿಡಿದು ಮಾರ್ಕೆಟಿಂಗ್ ವರೆಗೆ ತರಬೇತಿ ಸಿಗಲಿದೆ. ಅಗತ್ಯ ಜ್ಞಾನ ಪಡೆದುಕೊಳ್ಳುವ ಮೂಲಕ ವ್ಯವಹಾರಕ್ಕೆ ಕೈಹಾಕಿದರೆ ನಿಮಗೆ ಒಳ್ಳೆಯ ಹಣ ಸಂಪಾದಿಸುವ ಅವಕಾಶವಿರುತ್ತದೆ.