Business Idea: ಈ ವಿಶೇಷ ಬಿಸ್ನೆಸ್ ನಲ್ಲಿ ಹೂಡಿಕೆಯ 5 ಪಟ್ಟು ಹೆಚ್ಚು ಲಾಭ ಗಳಿಸಬಹುದು, ಇಂದೇ ಆರಂಭಿಸಿ

Aloe Vera Cultivation In India - ನೀವು ಸಹ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೊಂದು ಸೂಪರ್ ಹಿಟ್ ಬಿಸಿನೆಸ್ ಐಡಿಯಾ. ಈ ವ್ಯವಹಾರದಲ್ಲಿ ನೀವು 5 ಪಟ್ಟು ಹೆಚ್ಚು (Earn Money) ಲಾಭವನ್ನು ಪಡೆಯಬಹುದು. ಇದು ಅಲೋವೆರಾ ಕೃಷಿಯ (Aloe Vera Farming) ವ್ಯವಹಾರವಾಗಿದೆ.

Aloe Vera Cultivation In India - ನೀವು ಸಹ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೊಂದು ಸೂಪರ್ ಹಿಟ್ ಬಿಸಿನೆಸ್ ಐಡಿಯಾ. ಈ ವ್ಯವಹಾರದಲ್ಲಿ ನೀವು 5 ಪಟ್ಟು ಹೆಚ್ಚು (Earn Money) ಲಾಭವನ್ನು ಪಡೆಯಬಹುದು. ಇದು ಅಲೋವೆರಾ ಕೃಷಿಯ (Aloe Vera Farming) ವ್ಯವಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಅಲೋವೆರಾವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅದು ಸೌಂದರ್ಯವರ್ಧಕ ಉತ್ಪನ್ನವಾಗಲಿ ಅಥವಾ ಆಯುರ್ವೇದ ಔಷಧಿಯಾಗಲಿ, ಅಲೋವೆರಾವನ್ನು (Aloe Vera Cultivation) ಎಲ್ಲೆಡೆ ಬಳಸಲಾಗುತ್ತಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಲೋವೆರಾ ಬೆಳೆಸಿ ಲಕ್ಷಗಟ್ಟಲೆ ಹಣ ಗಳಿಕೆ ಮಾಡಬಹುದು (How To Start Aloe Vera Farming). ಹೇಗೆ ಅಂತಿರಾ? ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Business Idea:ಈ ಕೃಷಿಯನ್ನು ಕೇವಲ 2 ಸಾವಿರದಲ್ಲಿ ಪ್ರಾರಂಭಿಸಿ, 4 ಲಕ್ಷದವರೆಗೆ ಗಳಿಸಿ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಆಲೋವೆರಾ ಕೃಷಿಯಲ್ಲಿ ಜಬರ್ದಸ್ತ್ ಲಾಭ ಸಿಗುತ್ತದೆ - ಅಲೋವೆರಾ ಕೃಷಿಯಲ್ಲಿ ನೀವು ಅಪಾರ ಲಾಭವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಇದು ಭಾರತದಲ್ಲಿ ತುಂಬಾ ಟ್ರೆಂಡಿ ಬಿಸಿನೆಸ್ ಆಗಿ ಹೊರಹೊಮ್ಮಿದೆ. ಇದಕ್ಕಾಗಿ, ಹೊಲದಲ್ಲಿ ಹೆಚ್ಚು ತೇವಾಂಶ ಇಲ್ಲದಿರುವುದು ಮುಖ್ಯ, ಹಾಗೆಯೇ ಹೊಲದಲ್ಲಿ ನೀರು ನಿಲ್ಲಬಾರದು. ಅಲೋವೆರಾ ಕೃಷಿಗೆ ಮರಳು ಮಣ್ಣು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಕಾಲಕಾಲಕ್ಕೆ ಹೊಲವನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಇದಕ್ಕಾಗಿ ನೀವು ಅದರ ಕೃಷಿಯ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು.

2 /5

2. ಯಾವ ಪ್ರಜಾತಿಯ ಆಲೋವೆರಾ ಬೆಳೆಸುವುದು ಲಾಭದಾಯಕ - ಹಾಗೆ ನೋಡಿದರೆ, ಅಲೋವೆರಾದಲ್ಲಿ ಹಲವು ಜಾತಿಗಳಿವೆ. ಆದರೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇಂಡಿಗೋ ಅತ್ಯಂತ ಜನಪ್ರಿಯವಾಗಿದೆ. ಆದರೆ ಅದರ ಅಲೋವೆರಾ ಬಾರ್ಬಡೆನ್ಸಿಸ್ ಪ್ರಭೇದವನ್ನು ಪ್ರಸ್ತುತ ಹೆಚ್ಚು ಬಳಸಲಾಗುತ್ತಿದೆ. ಜ್ಯೂಸ್ ಮಾಡುವುದರಿಂದ ಹಿಡಿದು ಕಾಸ್ಮೆಟಿಕ್ ವಸ್ತುಗಳ ತಯಾರಿಕೆಯವರೆಗೆ ಇದನ್ನು ಬಳಸುತ್ತಾರೆ. ಬೇಡಿಕೆಯ ಕಾರಣ, ರೈತರು ಇದನ್ನು ಹೆಚ್ಚು ನೆಡಲು ಇಷ್ಟಪಡುತ್ತಾರೆ ಏಕೆಂದರೆ ಇದರ ಎಲೆಗಳು ದೊಡ್ಡದಾಗಿರುತ್ತವೆ ಮತ್ತು ಇದು ಹೆಚ್ಚಿನ ಜೆಲ್ ಹೊಂದಿರುತ್ತದೆ.

3 /5

3. ಯಾವಾಗ ಮತ್ತು ಹೇಗೆ ಈ ಆಲೋವೆರಾ ಕೃಷಿಯನ್ನು ಮಾಡಬೇಕು - ಅಲೋವೆರಾವನ್ನು ಫೆಬ್ರವರಿಯಿಂದ ಅಕ್ಟೋಬರ್-ನವೆಂಬರ್ ವರೆಗೆ ಬಿತ್ತನೆ ಮಾಡಬಹುದು. ಆದರೆ, ರೈತರು ವರ್ಷವಿಡೀ ಬಿತ್ತನೆ ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ. ನಾಟಿ ಮಾಡುವಾಗ ಎರಡು ಗಿಡಗಳ ನಡುವೆ 2 ಅಡಿ ಅಂತರವಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಒಮ್ಮೆ ಗಿಡ ನೆಟ್ಟರೆ ರೈತರು ವರ್ಷಕ್ಕೆ ಎರಡು ಬಾರಿ ಅದರ ಎಲೆಗಳನ್ನು ಕೊಯ್ದು ಮಾರಾಟ ಮಾಡಿ ಲಾಭ ಗಳಿಕೆ ಮಾಡಬಹುದು. ಈ ಕೃಷಿಯ ವಿಶೇಷತೆ ಎಂದರೆ, ಅಲೋವೆರಾಗೆ ಪ್ರಾಣಿಗಳಿಂದ ಯಾವುದೇ ಹಾನಿ ಇಲ್ಲ.

4 /5

4. ಆಲೋವೆರಾ ಕೃಷಿಯಿಂದ 5 ಪಟ್ಟು ಹೆಚ್ಚು ಲಾಭ ಗಳಿಕೆ ಮಾಡಬಹುದು - ಅಲೋವೆರಾ ಕೃಷಿ ತುಂಬಾ ಸುಲಭ. ರೈತರು ಒಂದು ಎಕರೆ ಜಮೀನಿನಲ್ಲಿ 12 ಸಾವಿರ ಅಲೋವೆರಾ ಗಿಡಗಳನ್ನು ನೆಡಬಹುದು. ಒಂದು ಅಲೋವೆರಾ ಗಿಡದ ಬೆಲೆ 3 ರಿಂದ 4 ರೂ. ಅಂದರೆ, ಒಬ್ಬ ರೈತ ಎಕರೆ ಗದ್ದೆಯಲ್ಲಿ ಅಲೋವೆರಾ ಕೃಷಿಯನ್ನು ಪ್ರಾರಂಭಿಸಿದರೆ, ಅವನು ಸಸ್ಯದ ಖರೀದಿಗೆ ಸುಮಾರು 40 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇನ್ನೊಂದೆಡೆ  ನಾವು ಲಾಭದ ಕುರಿತು ಮಾತನಾಡುವುದಾದರೆ, ಅಲೋವೆರಾದ ಒಂದು ಸಸ್ಯವು 3.5 ಕೆಜಿ ಎಲೆಗಳನ್ನು ನೀಡುತ್ತದೆ ಮತ್ತು ಒಂದು ಎಲೆಯ ಬೆಲೆ 5 ರಿಂದ 6 ರೂಪಾಯಿಗಳವರೆಗೆ ಇರುತ್ತದೆ.

5 /5

5. ಇದರಿಂದ ಲಕ್ಷಾಂತರ ಹೇಗೆ ಸಂಪಾದಿಸಬೇಕು - ಈ ಬೆಲೆಯಿಂದ ಆಗುವ ಲಾಭದ ಕುರಿತು ಮಾತನಾಡುವುದಾದರೆ, ರೈತರು ಸಸ್ಯ ಮತ್ತು ಅದರ ಎಲೆಗಳನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು ಮತ್ತು ಮರಿ ಗಿಡವನ್ನು ಮಾರಾಟ ಮಾಡುವ ಮೂಲಕವೂ ಕೂಡ ಲಾಭ ಗಳಿಸಬಹುದು. ರೈತರು ಅದರ ಜೆಲ್ ಅನ್ನು ತೆಗೆದುಕೊಂಡು ನೇರವಾಗಿ ಯಾವುದೇ ಕಂಪನಿಯಿಂದ ಮಾರಾಟ ಮಾಡಬಹುದು. ಅಲೋವೆರಾ ಕೃಷಿಯಲ್ಲಿ ಯಾವುದೇ ರೀತಿಯ ಕೀಟನಾಶಕಗಳನ್ನು (ಯೂರಿಯಾ ಅಥವಾ ಡಿಎಪಿ) ಬಳಸಲಾಗುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.