ಸೂರ್ಯನಿಂದ ರೂಪುಗೊಂಡ ಬುಧಾದಿತ್ಯ ಯೋಗ; ಈ 6 ರಾಶಿಯವರಿಗೆ ದೊರೆಯಲಿದೆ ರಾಜಯೋಗ!

Budhaditya Rajayoga 2024: ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿರುತ್ತದೆ. ಜೂನ್ 15ರಿಂದ ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿ ಸಾಗುವುದರಿಂದ ಕೆಲ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ. ​

Budhaditya Rajayoga 2024: ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಯಶಸ್ಸನ್ನು ಪ್ರತಿನಿಧಿಸುವ ಗ್ರಹವೆಂದು ನಂಬಲಾಗಿದೆ. ಜೀವನದಲ್ಲಿ ಯಾವುದೇ ವ್ಯಕ್ತಿ ಪಡೆಯುವ ಯಶಸ್ಸು ಅವರ ಜನ್ಮ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಅವಲಂಭಿಸಿರುತ್ತದೆ. ಜೂನ್ ತಿಂಗಳಿನಲ್ಲಿ ಸೂರ್ಯನ ಪ್ರಮುಖ ಸಂಚಾರವಿದೆ. ಇದು ಕೆಲವು ರಾಶಿಗಳಿಗೆ ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಜೂನ್ 15ರಂದು ಮಧ್ಯಾಹ್ನ 12.16ಕ್ಕೆ ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಿದೆ. ಜೂನ್ 14ರಂದು ಬುಧವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಹೀಗಾಗಿ ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಸಾಗಿದಾಗ ಎರಡೂ ಗ್ರಹಗಳು ಆ ರಾಶಿಯಲ್ಲಿ ಯೋಗವನ್ನು ರೂಪಿಸುತ್ತವೆ.

ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಈ ಯೋಗ ಜೂನ್ 29ರವರೆಗೆ ಇರುತ್ತದೆ. ನಂತರ ಬುಧ ಗ್ರಹವು ಕರ್ಕ ರಾಶಿಗೆ ಚಲಿಸಲಿದೆ. ಮತ್ತೊಂದೆಡೆ ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿರುತ್ತದೆ. ಜೂನ್ 15ರಿಂದ ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿ ಸಾಗುವುದರಿಂದ ಕೆಲ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ. ಆ ಅದೃಷ್ಟ ರಾಶಿಗಳ ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೇಷ ರಾಶಿಯ 5ನೇ ಮನೆಯ ಅಧಿಪತಿಯಾದ ಸೂರ್ಯನು ಪ್ರಸ್ತುತ 3ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಈ ಅವಧಿಯಲ್ಲಿ ನೀವು ಪ್ರಗತಿಯ ಹಾದಿಯಲ್ಲಿ ಸಾಗುತ್ತೀರಿ ಹಾಗೂ ಆರ್ಥಿಕ ಲಾಭ ಗಳಿಸುವಿರಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಪರವಾಗಿ ನೀವು ಗಮನಾರ್ಹ ಯಶಸ್ಸು ಸಾಧಿಸುತ್ತೀರಿ. ಅನೇಕ ಹೊಸ ಉದ್ಯೋಗಾವಕಾಶ ಪಡೆಯುತ್ತೀರಿ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.  

2 /6

ಸೂರ್ಯನು ವೃಷಭ ರಾಶಿಯವರ 4ನೇ ಮನೆಯನ್ನು ಆಳುತ್ತಾನೆ. ಈ ಸಂಕ್ರಮಣದ ಸಮಯದಲ್ಲಿ ಸೂರ್ಯನು 2ನೇ ಮನೆಗೆ ಹೋಗುತ್ತಾನೆ. ಇದರಿಂದ ನಿಮ್ಮ ಸಂವಹನ ಕೌಶಲ್ಯಗಳು ಉತ್ತಮವಾಗುತ್ತವೆ. ವೃತ್ತಿಪರವಾಗಿ ನಿಮ್ಮ ಸಾಮಾರ್ಥ್ಯ ಹೆಚ್ಚಾಗುತ್ತದೆ. ನಿಮಗೆ ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನವು ಮತ್ತಷ್ಟು ಪ್ರಗತಿಯಾಗಲಿದೆ. 

3 /6

ಸೂರ್ಯನು ಮಿಥುನ ರಾಶಿಯ 3ನೇ ಮನೆಯನ್ನು ಆಳುತ್ತಾನೆ. ಈ ಸಂಕ್ರಮಣದ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ವೃತ್ತಿಜೀವನದಲ್ಲಿ ನೀವು ಅನಿರೀಕ್ಷಿತ ಪ್ರಗತಿ ಸಾಧಿಸುವಿರಿ. ಕೆಲಸದಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಪಡೆಯುತ್ತೀರಿ. ಉದ್ಯೋಗಸ್ಥರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಾರೆ & ಮೇಲಾಧಿಕಾರಿಗಳಿಂದ ಯಶಸ್ಸು ಸಾಧಿಸುತ್ತಾರೆ.

4 /6

ಸಿಂಹ ರಾಶಿಯ ಮೊದಲ ಮನೆಯನ್ನು ಸೂರ್ಯನು ಆಳುತ್ತಾನೆ. ಈಗ ಸೂರ್ಯ ಗ್ರಹವು ಸಿಂಹ ರಾಶಿಯವರ ಮೊದಲ ಮನೆಯಲ್ಲಿ ಸಾಗುತ್ತಿದೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ನಿಮ್ಮ ವೃತ್ತಿ ಜೀವನದಲ್ಲಿ ಮಾಡಿದ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗುತ್ತದೆ. ವೃತ್ತಿಜೀವನದಲ್ಲಿ ಬಡ್ತಿಯ ಅವಕಾಶಗಳು ಸಹ ದೊರೆಯಲಿವೆ.

5 /6

ಸೂರ್ಯನು ಕನ್ಯಾ ರಾಶಿಯವರ 12ನೇ ಮನೆಯನ್ನು ಆಳುತ್ತಾನೆ. ಪೂರ್ವಿಕರ ಆಸ್ತಿಯಿಂದ ಅನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆಯಿದೆ. ವೃತ್ತಿಯ ವಿಷಯದಲ್ಲಿ ನಿಮ್ಮ ಕೆಲಸವನ್ನು ಬದಲಾಯಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ನೀವು ವಿದೇಶಕ್ಕೆ ಹೋಗುವ ಸಾಧ್ಯತೆಗಳೂ ಇವೆ.

6 /6

ತುಲಾ ರಾಶಿಯ 11ನೇ ಮನೆಯ ಅಧಿಪತಿಯಾದ ಸೂರ್ಯನು ಪ್ರಸ್ತುತ 9ನೇ ಮನೆಯಲ್ಲಿ ನೆಲೆಸಿದ್ದಾನೆ. ವಿದೇಶದಲ್ಲಿರುವ ಸ್ನೇಹಿತರ ಮೂಲಕ ಲಾಭ ಸಿಗಲಿದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ಕೆಲಸದಲ್ಲಿ ನೀವು ಅನೇಕ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ.