ದೇವ-ದೇವತೆಗಳ ಗುರು ಬೃಹಸ್ಪತಿಯ ರಾಶಿಯಲ್ಲಿ 'ಬುದ್ಧಾದಿತ್ಯ ರಾಜಯೋಗ' ಈ ಮೂರು ರಾಶಿಗಳಿಗೆ ಅಪಾರ ಧನ ಲಾಭ!

Auspicious Rajyog In pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೇವ ಗುರು ಬೃಹಸ್ಪತಿಯ ರಾಶಿಯಾಗಿರುವ ಮೀನ ರಾಶಿಯಲ್ಲಿ ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ನಿರ್ಮಾಣದಿಂದ ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಹಲವು ಧನಾತ್ಮಕ ಬದಲಾವಣೆಗಳು ಆಗಲಿವೆ. ಇದರ ಜೊತೆಗೆ ಅವರ ಜೀವನದಲ್ಲಿ ಅಪಾರ ಧನಾಗಮನದಿಂದ ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಒಮ್ಮೆ ತಿಳಿದುಕೊಳ್ಳೋಣ,
 

Budhaditya Rajyog In Meen Rashi: ಜೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಶುಭ  ಹಾಗೂ ಅಶುಭ ಯೋಗಗಳ ರಚನೆಗೆ ಕಾರಣವಾಗುತ್ತವೆ. ಈ ಯೋಗಗಳು ಭೂಮಿಯ ಮೇಲಿರುವ ಸಕಲ ಚರಾಚರ, ದೇಶ ಹಾಗೂ ಇಡೀ ವಿಶ್ವದ ಮೇಲೆ ಪ್ರಭಾವ ಬೀರುತ್ತವೆ. ಮಾರ್ಚ್ 16 ರಂದು ಮೀನ ರಾಶಿಯಲ್ಲಿ ಸೂರ್ಯ ಹಾಗೂ ಬುದ್ಧನ ಮೈತ್ರಿಯಿಂದ ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಂಡಿದೆ. ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದೆ. ಆದರೆ, 3 ರಾಶಿಗಳ ಜನರ ಜೀವನದಲ್ಲಿ ಈ ರಾಜಯೋಗದ ಪರಿಣಾಮ ಆಕಸ್ಮಿಕ ಧನ ಹರಿದುಬರಲಿದೆ. ಅವರಿಗೆ ಸ್ಥಾನಮಾನದ ಜೊತೆಗೆ ಸಮಾಜದಲ್ಲಿ ಘನತೆ-ಗೌರವ ಕೂಡ ಪ್ರಾಪ್ತಿಯಾಗಲಿದೆ.

 

ಇದನ್ನೂ ಓದಿ-Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

 

ಇದನ್ನೂ ನೋಡಿ-

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ಮೀನ ರಾಶಿಯಲ್ಲಿ ನಿರ್ಮಾಣಗೊಂಡಿರುವ ಈ ಬುದ್ಧಾದಿತ್ಯ ರಾಜಯೋಗ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರಕ್ಕೆ ಸಾಕಷ್ಟು ಅನುಕೂಲಕರವಾಗಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದ ಮೇಲೆ ರೂಪುಗೊಂಡಿದೆ. ಹೀಗಾಗಿ, ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಜೊತೆಗೆ ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೇ, ಬೇರೊಂದು ಬಿಸ್ನೆಸ್ ಟೆಕ್ ಓವರ್ ಮಾಡುವುದರ ಬಗ್ಗೆ ಯೋಚಿಸಬಹುದು ಅಥವಾ ಹೊಸ ಡೀಲ್ ಮಾಡಿಕೊಳ್ಳಬಹುದು ಸಮಯ ಅನುಕೂಲಕರವಾಗಿದೆ. ಈ ಒಪ್ಪಂದ ನಿಮಗೆ ನಿಮ್ಮ ಭವಿಷ್ಯದಲ್ಲಿ ಅತ್ಯಂತ ಶುಭ ಪರಿಣಾಮಗಳನ್ನು ನೀಡಲಿದೆ. ನೌಕರವರ್ಗದ ಜನರಿಗೆ ಮಾಚ್ ತಿಂಗಳ ಆಸುಪಾಸಿನಲ್ಲಿ ಇಂಕ್ರಿಮೆಂಟ್-ಪ್ರಮೋಷನ್ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.  

2 /3

ಕನ್ಯಾ ರಾಶಿ: ಬೃಹಸ್ಪತಿಯ ರಾಶಿಯಲ್ಲಿ ನಿರ್ಮಾಣಗೊಂಡಿರುವ ಈ ಬುದಾದಿತ್ಯ ರಾಜಯೋಗ. ನಿಮ್ಮ ಪಾಲಿಗೆ ಶುಭ ಫಲಪ್ರದಾಯಿ ಸಿದ್ಧವಾಗಲಿದೆ. ಏಕೆಂದರೆ ಈ  ಯೋಗ ನಿಮ್ಮ ಜಾತಕದ ಸಪ್ತಮೇಷ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ವೈವಾಹಿಕ ಜೀವನ ಹಾಗೂ ಪಾರ್ಟ್ನರ್ಶಿಪ್ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಅಲ್ಲದೆ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಗೆಳೆತನ ಹಾಗೂ ಕೌಟುಂಬಿಕ ಜೀವನದಲ್ಲಿ ಶುಭ ಫಲಿತಾಂಶಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ. ಆರ್ಥಿಕ ವ್ಯವಹಾರ ಹಾಗೂ ವ್ಯಾಪಾರದಲ್ಲಿ ಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪಾರ್ಟ್ನರ್ಶಿಪ್ ನಲ್ಲಿ ಯಾವುದಾದರೊಂದು ಹೊಸ ವ್ಯವಹಾರವನ್ನು ನೀವು ಪ್ರಾರಂಭಿಸಲು ಬಯಸುತ್ತಿದ್ದರೆ ಈ ಸಮಯ ಅತ್ಯಂತ ಅದ್ಭುತ ಹಾಗೂ ಯಶಸ್ಸಿನ ಸಮಯವಾಗಿದೆ. ಅವಿವಾಹಿತ ಜನರಿಗೆ ವಿವಾಹ ಯೋಗ ನಿರ್ಮಾಣಗೊಳ್ಳುತ್ತಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)   

3 /3

ಧನು ರಾಶಿ: ಬುದ್ಧಾದಿತ್ಯ ರಾಜಯೋಗ ಧನು ಜಾತಕದ ಸ್ಥಳೀಯರಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ರಾಶಿಯ ಧನ ಭಾವದ ಮೇಲೆ ರೂಪುಗೊಂಡಿದೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ನಿಮಗೆ ಉತ್ತಮ ಆರ್ಡರ್ಗಳು ಸಿಗಲಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಕಂಡುಬರಲಿದೆ. ಇದರಿಂದ ಜನರು ನಿಮ್ಮ ಮೇಲೆ ಇಂಪ್ರೆಸ್ ಆಗಲಿದ್ದಾರೆ. ಆಸ್ತಿ ಪಾಸ್ತಿ, ವಾಹನ ಖರೀದಿಯ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ನೀವು ಸಾಕಷ್ಟು ಯೋಚಿಸಿ ನಿರ್ದಾರ ಕೈಗೊಳ್ಳಬೇಕು. ಮನೆಯಲ್ಲಿ ಗುರು ಹಿರಿಯರ ಸಲಹೆ ಪಡೆದು ನಿರ್ಧಾರ ಕೈಗೊಂಡರೆ ಉತ್ತಮ, ತರಾತುರಿ ಬೇಡ.