Budh-Guru Revati Nakshatra Gochar: ರೇವತಿ ನಕ್ಷತ್ರದಲ್ಲಿ ಬುಧ-ಬೃಹಸ್ಪತಿಯ ಮೈತ್ರಿ, 5 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

Budh-Guru Yuti In Revati Nakshatra: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹವು ಜ್ಞಾನದ ಅಂಶವಾಗಿದೆ. ಬುಧವು ತರ್ಕ ಮತ್ತು ಗಣಿತದ ಅಂಶವಾಗಿದೆ. ಈ ನಕ್ಷತ್ರದಲ್ಲಿ ಇವೆರಡರ ಸಂಯೋಜನೆಯಿಂದ 5 ರಾಶಿಗಳ ಭವಿಷ್ಯ ಬದಲಾಗಲಿದೆ.
 

Mercury-Jupiter In Revati Nakshatra: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿ ಹಾಗೂ ಬುಧರನ್ನು ಅತ್ಯಂತ ಶುಭ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇದೀಗ ಈ ಎರಡು ಗ್ರಹಗಳ ಮೈತ್ರಿ ನೆರವೇರಲಿದೆ. ಈ ಎರಡೂ ಗ್ರಹಗಳು ರೇವತಿ ನಕ್ಷತ್ರ ಪ್ರವೇಶಿಸುವ ಮೂಲಕ ಮೈತ್ರಿಯನ್ನು ಮಾಡಿಕೊಳ್ಳಲಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹ ಜ್ಞಾನ ಕಾರಕವಾದರೆ,  ಬುಧನನ್ನು ತರ್ಕ ಮತ್ತು ಗಣಿತದ ಕಾರಕ ಎಂದು ಭಾವಿಸಲಾಗುತ್ತದೆ. ರೇವತಿ ನಕ್ಷತ್ರದಲ್ಲಿ ಇವೆರಡರ ಸಂಯೋಜನೆಯಿಂದ 5 ರಾಶಿಗಳ ಜನರ ಭವಿಷ್ಯ ಬದಲಾಗಲಿದೆ.

 

ಇದನ್ನೂ ಓದಿ-Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ- ಈ ಎರಡು ಶುಭ ಗ್ರಹಗಳಿಂದ ಮೇಷ ರಾಶಿಯವರಿಗೆ ಭಾರಿ ಅದೃಷ್ಟ ಒಲಿದುಬರಲಿದೆ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಮಾರ್ಚ್ ಕೊನೆಯ ವಾರದಲ್ಲಿ ಸಹೋದರ ಸಹೋದರಿಯರಿಂದ ಬೆಂಬಲ ಸಿಗಲಿದೆ. ಇದಲ್ಲದೇ ಹಣ ಗಳಿಸಲು ಹಲವು ಅವಕಾಶಗಳೂ ನಿರ್ಮಾಣಗೊಳ್ಳಲಿವೆ.  

2 /5

ಮಿಥುನ ರಾಶಿ-ಮಿಥುನ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ರೇವತಿ ನಕ್ಷತ್ರದಲ್ಲಿನ ಸಂಯೋಗವು ಅತ್ಯಂತ ಫಲದಾಯಕವಾಗಿರುತ್ತದೆ. ನೀವು ನಿಮ್ಮ  ವೃತ್ತಿಜೀವನದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯುವಿರಿ. ಇದಲ್ಲದೆ, ಸಾಕಷ್ಟು ಪ್ರಗತಿಯನ್ನು ಸಾಧಿಸುವಿರಿ. ಉದ್ಯೋಗಸ್ಥರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಇದಲ್ಲದೇ ವಾಹನ, ಜಮೀನು, ಆಸ್ತಿ ಖರೀದಿಗೂ ಅವಕಾಶ ನಿರ್ಮಾಣಗೊಳ್ಳುತ್ತಿದೆ.  

3 /5

ವೃಶ್ಚಿಕ ರಾಶಿ- ಬುಧ ಮತ್ತು ಗುರುಗಳ ರೇವತಿ ನಕ್ಷತ್ರದ ಸಂಯೋಜನೆಯಿಂದಾಗಿ, ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಇದಲ್ಲದೇ ಆದಾಯವೂ ಹೆಚ್ಚಾಗಲಿದೆ. ಸೃಜನಶೀಲ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವವರಿಗೆ, ಈ ಮೈತ್ರಿಯು ಶುಭ ಸಮಯವನ್ನು ತರಲಿದೆ.  

4 /5

ಧನು ರಾಶಿ- ಈ ಮೈತ್ರಿಯು ಧನು ರಾಶಿಯವರಿಗೆ ಅತ್ಯಂತ ಶುಭ ಫಲದಾಯಕವಾಗಿರುತ್ತದೆ. ನೀವು ಕೆಲಸವನ್ನು ಬದಲಾಯಿಸುವ ಅವಕಾಶವನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ನಿಮ್ಮ ವೃತ್ತಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಇದಲ್ಲದೆ, ನೀವು ಭೂಮಿ ಅಥವಾ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸಮಯವು ತುಂಬಾ ಮಂಗಳಕರವಾಗಿದೆ.  

5 /5

ಕುಂಭ ರಾಶಿ- ಬುಧ ಮತ್ತು ಗುರುವಿನ ಮೈತ್ರಿಯಿಂದ ಈ ರಾಶಿಯ ಸ್ಥಳೀಯ  ಶಿಕ್ಷಕರಿಗೆ ಬಹಳಷ್ಟು ಲಾಭವಾಗಲಿದೆ. ಈ ಅವಧಿಯು ನಿಮಗೆ ಮಂಗಳಕರವಾಗಿರುತ್ತದೆ. ಅಷ್ಟೇ ಅಲ್ಲ ನಿಮ್ಮ ಮಾತಿನಲ್ಲೂ ಶಕ್ತಿಯ ಪ್ರಭಾವ ಇರಲಿದೆ. ವ್ಯಾಪಾರಸ್ಥರು ಅನೇಕ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)