ನೂರು ವರ್ಷಗಳ ಬಳಿಕ ನೀಚ್ ಭಂಗ್ ಹಾಗೂ ಮಹಾಧನ ಯೋಗಗಳ ರಚನೆ, ವರ್ಷಾರಂಭದಲ್ಲಿಯೇ ಈ ಜನರ ಭಾಗ್ಯೋದಯ ಪಕ್ಕಾ!

Budh Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನೂರು ವರ್ಷಗಳ ಬಳಿಕ ಮಹಾಧನ ಹಾಗೂ ನೀಚ್ ಭಂಗ್ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿವೆ. ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳ ಪ್ರಭಾವ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸುತ್ತದೆ. ಹೊಸ ವರ್ಷಾರಂಭದಲ್ಲಿ ಬುಧ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಮೀನ ರಾಶಿ ಬುಧನ ನೀಚ ರಾಶಿಯಾಗಿದೆ. ಇದರಿಂದ ಅಲ್ಲಿ ನೀಚಭಂಗ ಹಾಗೂ ಮಹಾಧನ ರಾಜಯೋಗ ರೂಪುಗೊಳ್ಳುತ್ತಿದೆ. ಈ ಎರಡೂ ಯೋಗಗಳ ಕಾರಣ ಕೆಲ ರಾಶಿಗಳ ಜನರಿಗೆ ಅಪಾರ ಧನಲಾಭ ಉಂಟಾಗಲಿದ್ದು, ಜೀವನದಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ಹತ್ತು ದಿನಗಳ ಬಳಿಕ 'ಬುದ್ಧಾದಿತ್ಯ ರಾಜಯೋಗ' ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Budh Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನೂರು ವರ್ಷಗಳ ಬಳಿಕ ಮಹಾಧನ ಹಾಗೂ ನೀಚ್ ಭಂಗ್ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿವೆ. ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)

2 /5

ಮಿಥುನ ರಾಶಿ: ಬುಧ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ. ಇದಲ್ಲದೆ ಆತ ಈ ಅವಧಿಯಲ್ಲಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೃತ್ತಿ-ವ್ಯಾಪಾರದಲ್ಲಿ ಭಾರಿ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯೂ ಕೂಡ ಸಾಕಷ್ಟು ಬಲವಾಗಿರಲಿದೆ. ಮೊದಲಿನಿಗಿಂತ ದುಪ್ಪಟ್ಟು ಹಣ ನಿಮ್ಮ ಬಳಿ ಇರುವ ಸಾಧತೆ ಇದೆ. ಬಿಸ್ನೆಸ್ ನಲ್ಲಿಯೂ ಕೂಡ ನಿಮಗೆ ಸಕಾರಾತ್ಮಕ ಫಲಗಳು ಪ್ರಾಪ್ತಿಯಾಗಲಿವೆ. ನಿರುದ್ಯೋಗಿಗಳಿಗೆ ನೌಕರಿ ಅವಕಾಶಗಳು ಒದಗಿಬರಲಿವೆ. ನೌಕರಿಯಲ್ಲಿರುವವರ ಪದೋನ್ನತಿಯಾಗಲಿದೆ. 

3 /5

ವೃಷಭ ರಾಶಿ: ಈ ಅವಧಿಯಲ್ಲಿ ಬುಧ ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭದ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವಾಗಲಿದೆ. ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಮೊದಲಿಗಿಂತ ಗಟ್ಟಿಯಾಗಲಿದೆ. ಸಂತಾನ ಸುಖ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೂಡಿಕೆಗಳಿಂದ ಲಾಭ ನಿಮ್ಮದಾಗಲಿದೆ. ಹಣ ಹೂಡಿಕೆಗೆ ಇದು ಅದ್ಭುತ ಸಮಯವಾಗಿದೆ. ಭವಿಷ್ಯದಲ್ಲಿ ಅದು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. 

4 /5

ಕರ್ಕ ರಾಶಿ: ಈ ಎರಡೂ ರಾಜಯೋಗಗಳ ನಿರ್ಮಾಣದ ಅವಧಿಯಲ್ಲಿ ಬುಧ ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಕೌಟುಂಬಿಕ ಜೀವನ ಕೂಡ ಉತ್ತಮವಾಗಿರಲಿದೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ, ಮನೆ ಅಥವಾ ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ಸಂಕೇತಗಳಿವೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳ ಆಸೆ ಈಡೇರಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)