Bollywood actresses: ಬಾಲಿವುಡ್‌ನಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಫೇಶಿಯಲ್ ಸರ್ಜರಿ, ಲಿಪ್ ಫಿಲ್ಲರ್, ಬೊಟಾಕ್ಸ್ ನಂತಹ ಹಲವು ವಿಧಾನಗಳನ್ನು ನಟಿಯರು ಅನುಸರಿಸುತ್ತಾರೆ.
Bollywood actresses: ಈಗಿನ ಕಾಲದಲ್ಲಿ ದೇವರು ಕೊಡಲಾರದ ಸೌಂದರ್ಯವನ್ನು ವೈದ್ಯರು ಕೊಡಬಲ್ಲರು ಎಂಬ ಮಾತಿದೆ. ಆದರೆ ಕೆಲವೊಮ್ಮೆ ಅವರಿಗೆ ಈ ಸರ್ಜರಿಗಳೇ ಕುತ್ತು ತರುತ್ತವೆ. ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಟಿಯರ ಬಗ್ಗೆ ಇಂದು ಹೇಳಲಿದ್ದೇವೆ.
ಶಿಲ್ಪಾ ಶೆಟ್ಟಿ: ಶಿಲ್ಪಾ ಶೆಟ್ಟಿ ಮೂಗಿನ ಸರ್ಜರಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತದೆ. ನಿರಂತರವಾಗಿ ಪ್ರಶ್ನಿಸಿದ ಬಳಿಕ ಶಿಲ್ಪಾ ಶೆಟ್ಟಿ ತಮ್ಮ ನೋಸ್ ಸರ್ಜರಿ ವಿಚಾರವನ್ನು ಒಪ್ಪಿಕೊಂಡರು.
ಪ್ರಿಯಾಂಕಾ ಚೋಪ್ರಾ: ಪ್ರಿಯಾಂಕಾ ಚೋಪ್ರಾ ಒಂದಲ್ಲ ಹಲವು ಬಾರಿ ಸರ್ಜರಿ ಮಾಡಿದ್ದಾರೆ. ಅವರ ಮೂಗಿನಿಂದ ತುಟಿಗಳವರೆಗೆ, ಎಲ್ಲವನ್ನೂ ಸರ್ಜರಿ ಮೂಲಕ ಬದಲಾಯಿಸಿದ್ದಾರೆ ಎನ್ನಲಾಗಿದೆ. ನಟಿ ಈ ಸತ್ಯವನ್ನು ಎಂದಿಗೂ ಒಪ್ಪಿಕೊಂಡಿಲ್ಲ.
ಕತ್ರಿನಾ ಕೈಫ್: ಕತ್ರಿನಾ ಕೈಫ್ ಒಂದಲ್ಲ ಹಲವು ಬಾರಿ ಸರ್ಜರಿ ಮಾಡಿದ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಕತ್ರಿನಾ ಕೈಫ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಕ್ಯಾಟ್ ನಿಜವಾಗಿಯೂ ಅವರ ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರಾ ಅಥವಾ ಇಲ್ಲವೇ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಜಾನ್ವಿ ಕಪೂರ್: ಜಾನ್ವಿ ಕಪೂರ್ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ತನ್ನ ಮುಖದ ಜೊತೆಗೆ ತನ್ನ ದೇಹವನ್ನು ಕಿಮ್ ಕಾರ್ಡಶಿಯಾನ್ ಹಾಗೆ ಕಾಣುವಂತೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎನ್ನಲಾಗುತ್ತದೆ. ಆದರೆ ಜಾನ್ವಿ ಇದನ್ನು ಎಂದಿಗೂ ಒಪ್ಪಿಕೊಂಡಿಲ್ಲ.
ಅನುಷ್ಕಾ ಶರ್ಮಾ: ಲಿಪ್ ಜಾಬ್ ಮಾಡಿದ ನಂತರ ಅನುಷ್ಕಾ ಶರ್ಮಾ ಎಲ್ಲರ ಗಮನ ಸೆಳೆದರು. PK ಚಿತ್ರದಲ್ಲಿ ಅವರ ಲುಕ್ ಅನ್ನು ಸಾಕಷ್ಟು ಅಪಹಾಸ್ಯ ಮಾಡಲಾಗಿತ್ತು. ತನಗೆ ದಪ್ಪವಾದ ತುಟಿಗಳು ಬೇಕು ಎಂದು ನಟಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಈ ಕಾರಣದಿಂದಾಗಿ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿಸಿದರು.