Bollywood Actress: 'ತಂದೆಯ ವಯಸ್ಸಿನ ವ್ಯಕ್ತಿ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಕರೆದ, ಮತ್ತು..!'

Bollywood Actress Manisha Rani On Casting Couch: ಬಾಲಿವುಡ್ ಆಗಿರಲಿ ಅಥವಾ ದಕ್ಷಿಣ ಚಿತ್ರರಂಗೆವೆ ಆಗಿರಲಿ, ಕಾಸ್ಟಿಂಗ್ ಕೌಚ್ ಬಗ್ಗೆ ನಾವು ಅನೇಕ ಸಂಚಲನ ಮೂಡಿಸುವ ಕತೆಗಳನ್ನು ಕೇಳಿದ್ದೇವೆ. ಆದರೆ, ಕೆಲವು ನಟಿಯರು ತಮ್ಮನ್ನು ಯಾವುದೇ ಚಿತ್ರದಲ್ಲಿ ನಟಿಸಲು ಹೇಗೆ ಕರೆಯಲಾಯಿತು ಮತ್ತು ನಂತರ ಅದಕ್ಕೆ ಹೇಗೆ ಬಲಿಯಾಗಬೇಕಾಯಿತು ಎಂಬುದನ್ನೂ  ಕೂಡ ಬಹಿರಂಗಪಡಿಸಿದ್ದಾರೆ. 

Bollywood Actress Manisha Rani On Casting Couch Industry: ಬಾಲಿವುಡ್ ಆಗಿರಲಿ ಅಥವಾ ದಕ್ಷಿಣ ಚಿತ್ರರಂಗೆವೆ ಆಗಿರಲಿ, ಕಾಸ್ಟಿಂಗ್ ಕೌಚ್ ಬಗ್ಗೆ ನಾವು ಅನೇಕ ಸಂಚಲನ ಮೂಡಿಸುವ ಕತೆಗಳನ್ನು ಕೇಳಿದ್ದೇವೆ. ಆದರೆ, ಕೆಲವು ನಟಿಯರು ತಮ್ಮನ್ನು ಯಾವುದೇ ಚಿತ್ರದಲ್ಲಿ ನಟಿಸಲು ಹೇಗೆ ಕರೆಯಲಾಯಿತು ಮತ್ತು ನಂತರ ಅದಕ್ಕೆ ಹೇಗೆ ಬಲಿಯಾಗಬೇಕಾಯಿತು ಎಂಬುದನ್ನೂ  ಕೂಡ ಬಹಿರಂಗಪಡಿಸಿದ್ದಾರೆ. ಇಂದು ನಾವು ನಿಮಗೆ ಓರ್ವ ಬಿಗ್ ಬಾಸ್ OTT ಫೇಮ್ ಕುರಿತು ಹೇಳುತ್ತಿದ್ದು, ಆಕೆಗೆ ಖ್ಯಾತಿ ಸಿಗುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಇಂದು ಆಕೆ ಓರ್ವ ಪ್ರಸಿದ್ಧ ನಟಿಯಾಗಿದ್ದಾಳೆ. 

 

ಇದನ್ನೂ ಓದಿ-Kalki 2898 AD : ಪ್ರಭಾಸ್ ಅಭಿನಯದ ಸೈನ್ಸ್ ಫಿಕ್ಷನ್ ಕಲ್ಕಿ 2898 ಎಡಿ ಚಿತ್ರದ ಬಿಗ್ ಅಪ್ಡೇಟ್ ಪ್ರಕಟ, ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ Amitabh Bachchan

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಇಂದು, ನಾವು ಹೇಳಲು ಹೊರಟಿರುವ ಪ್ರಸಿದ್ಧ ತಾರೆ ಬೇರೆ ಯಾರೂ ಅಲ್ಲ ಬಿಗ್ ಬಾಸ್ OTT 2 ಮತ್ತು ಮನರಂಜನಾ ಉದ್ಯಮದ ಬಬ್ಲಿ ಮನಿಶಾ ರಾಣಿ ಕುರಿತು. ಇತ್ತೀಚೆಗಷ್ಟೇ ತನ್ನ ಆರಂಭದ ಪ್ರಯಾಣದ ಸಾಕಷ್ಟು ಸಂಗತಿಗಳ ಕುರಿತು ಮಾತನಾಡಿರುವ ಮನೀಶಾ, ಕಾಸ್ಟಿಂಗ್ ಕೌಚ್ ಬಗ್ಗೆ ಕೂಡ ಮಾತನಾಡಿದ್ದಾರೆ.  

2 /7

ಹೆಸರಾಂತ ಮಾಧ್ಯಮ ಸಂಸ್ಥೆಯ ಜೊತೆಗಿನ ಸಂವಾದದ ವೇಳೆ ಮನಿಷಾ ರಾಣಿ ಹಲವು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಇದುವರೆಗಿನ ತನ್ನ  ಪಯಣ ಅಷ್ಟೇನೂ ಸುಲಭವಲ್ಲ ಎಂದು ಮನೀಶಾ ಹೀಲಿದ್ದಾರೆ. ಅವರು ಬಿಗ್ ಬಾಸ್ ಪ್ರವೇಶಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಬಿಗ್ ಬಾಸ್ ನೆಪದಲ್ಲಿ ವ್ಯಕ್ತಿಯೊಬ್ಬ ತನ್ನನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಮನೀಶಾ ಹೇಳಿದ್ದಾಳೆ, ಆದರೂ ಆ ವ್ಯಕ್ತಿ ತಂಡದವರಾಗಿರಲಿಲ್ಲ.  

3 /7

ತಾನು ಬಿಗ್ ಬಾಸ್‌ಗೆ ಬರಲು 3-4 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ ಮತ್ತು ಕಲರ್ಸ್ ತಂಡದ ಜನರ ಮೊಬೈಲ್ ನಂಬರ್ ಅನ್ನು ನಾನು ಎಲ್ಲರ ಬಳಿ ಕೇಳುತ್ತಿದ್ದೆ ಎಂದು ನಟಿ ಹೇಳಿದರು. ಆದಾಗ್ಯೂ, ಆ ಸಮಯದಲ್ಲಿ, ಮನೀಶಾಗೆ ಓರ್ವ ಯುವಕನ ನಂಬರ್ ಸಿಕ್ಕಿದೆ ಮತ್ತು ಮನೀಶಾ ತನ್ನ ಕೆಲವು ವೀಡಿಯೊಗಳನ್ನು ಆತನಿಗೆ ಕಳುಹಿಸಿದ್ದಾಳೆ, ಅದನ್ನು ನೋಡಿದ ನಂತರ ಆತ ನೀನು ಖಂಡಿತವಾಗಿ ಆಯ್ಕೆಯಾಗುತ್ತಿ ಎಂಬ ವಿಶ್ವಾಸ ನೀಡಿದ್ದಾನೆ.  

4 /7

ಮನಿಶಾ ಹೇಳುವ ಪ್ರಕಾರ ಓರ್ವ 50 ವರ್ಷ ವಯಸ್ಸಿನ ಮುದಿ ವ್ಯಕ್ತಿ ಆಕೆಗೆ ಭರವಸೆ ನೀಡಿ ಮುಂಬೈಗೆ ಕರೆಸಿಕೊಂಡ. ಆಗ ಮನಿಶಾ ಬಿಹಾರದಿಂದ ಮುಂಬೈಗೆ ಬಂದಿದ್ದರೂ. ನಂತರ ಒಂದು ದಿನ ಮುಂಬೈನಲ್ಲಿ ಆ ವ್ಯಕ್ತಿ ರಾತ್ರಿ 3 ಗಂಟೆಗೆ ತನ್ನ ಮನೆಗೆ ಕರೆದರು ಎಂದು ಹೇಳುತ್ತಾಳೆ. ಆದರೆ, ಮನೆಗೆ ಹೋಗಲು ನಾನು ನಿರಾಕರಿಸಿದೆ ಮತ್ತು ಆತನ ಮೇಲೆ ಕೋಪದಿಂದ ಕಿರುಚಾಡಿದೆ ಎಂದಿದ್ದಾರೆ.   

5 /7

ಆಗ 50 ವರ್ಷದ ವ್ಯಕ್ತಿ ಮನಿಷಾ ರಾಣಿಗೆ ಬೆದರಿಕೆ ಹಾಕಿ,  ನೀನು ನನ್ನ ಮನೆಗೆ ಬರಲು ನಿರಾಕರಿಸುತ್ತೀಯಾ? ನಾನು ಈ ಉದ್ಯಮದಲ್ಲಿ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ ಎಂದು ಮನೀಶಾ ತನ್ನ ಅಳಲು ತೋಡಿಕೊಂಡಿದ್ದಾರೆ. ನಾನು ಅಪರಿಚಿತರ ಸಲಹೆಯನ್ನು ನಂಬಿಡೆ ಮತ್ತು ಈ ಬಗ್ಗೆ ನಾನು ನನ್ನ ಕುಟುಂಬಕ್ಕೆ ಏನನ್ನೂ ಹೇಳಲಿಲ್ಲ ಎಂಬುದಕ್ಕೆ ವಿಷಾಧಿಸುತ್ತೇನೆ ಎಂದು ಮನಿಶಾ ಹೇಳಿದ್ದಾರೆ.  

6 /7

ನಾನು ತುಂಬಾ ಮುಗ್ಧೆ ಮತ್ತು ಎಲ್ಲರ ಮಾತುಗಳಿಂದ ಪ್ರಭಾವಿತಳಾಗುತ್ತೇನೆ ಎಂದು ಮನೀಶಾ ರಾಣಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ ಮತ್ತು ನಾನು ನನ್ನ ಈ ಅಭ್ಯಾಸದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ.  

7 /7

ಮನಿಶಾ ರಾಣಿ ಸಾಮಾಜಿಕ ಮಾಧ್ಯಮದ ತಾರೆ ಮತ್ತು Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ.