Armaan Malik ಮಾತ್ರವಲ್ಲ, ಈ ಬಾಲಿವುಡ್ ನಟರಿಗೂ 2-2 ಹೆಂಡತಿಯರು.!

Actors Who Married Twice:  ಕೆಲವು ಸಮಯದಿಂದ, ಅರ್ಮಾನ್ ಮಲಿಕ್ ಅವರ ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಗರ್ಭಿಣಿಯಾದ ವಿಚಾರವಗಿ ಸುದ್ದಿಯಲ್ಲಿದ್ದರು.  
 

Actors Who Married Twice:  ಕೆಲವು ಸಮಯದಿಂದ, ಅರ್ಮಾನ್ ಮಲಿಕ್ ಅವರ ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಗರ್ಭಿಣಿಯಾದ ವಿಚಾರವಗಿ ಸುದ್ದಿಯಲ್ಲಿದ್ದರು. ಆದರೆ ಯೂಟ್ಯೂಬರ್ ಅರ್ಮಾನ್ ಮಲಿಕ್‌ ಮಾತ್ರವಲ್ಲ, ಬಾಲಿವುಡ್‌ನ ಅನೇಕ ಸ್ಟಾರ್‌‌ಗಳು, ಎರಡು ಮದುವೆಯಾಗಿದ್ದಾರೆ. ಆ ಬಾಲಿವುಡ್‌ ಸ್ಟಾರ್‌ಗಳ ಪಟ್ಟಿ ಇಲ್ಲಿದೆ ನೋಡಿ..
 

1 /5

ಸಲೀಂ ಖಾನ್ ಸುಶೀಲಾ ಚರಕ್ ಎಂಬಾಕೆಯನ್ನು ಪ್ರೀತಿಸಿ ನಂತರ ಪ್ರೀತಿಗಾಗಿ ಧರ್ಮ ಬದಲಿಸಿ ಸುಶೀಲಾ ಸಲ್ಮಾ ಆದರು. ಆದರೆ ಮದುವೆಯಾದ 16 ವರ್ಷಗಳ ನಂತರ, ಸಲೀಂ ಖಾನ್ ಹೆಲೆನ್ ಅವರನ್ನು ವಿವಾಹವಾದಾಗ ಅವರ ಜೀವನದಲ್ಲಿ ಬಿರುಗಾಳಿ ಎದ್ದಿತು, ಅದೂ ಸಲ್ಮಾ ಖಾನ್‌ಗೆ ವಿಚ್ಛೇದನ ನೀಡದೆ ವಿವಾಹವಾಗಿದ್ದರು.  

2 /5

ಸಂಜಯ್ ಖಾನ್ ಜರೀನ್ ಕಾಟ್ರಕ್ ಅವರನ್ನು ವಿವಾಹವಾದರು ನಂತರ ಅವರ ಹೆಸರು ಸುಂದರ ನಟಿ ಜೀನತ್ ಅಮಾನ್ ಅವರೊಂದಿಗೆ ಸೇರಿಕೊಂಡಿತು. ಸಂಜಯ್ ಕೂಡ ಜೀನತ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಈ ಮೊದಲು ಅವರು ಜರೀನ್‌ಗೆ ವಿಚ್ಛೇದನ ನೀಡಿರಲಿಲ್ಲ.  

3 /5

ಮಹೇಶ್ ಭಟ್: ಮಹೇಶ್ ಭಟ್ ಕಾಲೇಜು ದಿನಗಳಲ್ಲಿ ಕಿರಣ್ ನನ್ನು ಪ್ರೀತಿಸಿ ಇಬ್ಬರೂ ಮದುವೆಯಾದರು. ಆದರೆ ನಂತರ ಅವರು ಸೋನಿ ರಜ್ದಾನ್ ಅವರನ್ನು ಪ್ರೀತಿಸಿದರು. ಆದರೆ ಆಗ ಮಹೇಶ್ 2 ಮಕ್ಕಳ ತಂದೆ. ಅವರು ಸೋನಿಯನ್ನು ಮದುವೆಯಾದರು ಆದರೆ ಕಿರಣ್‌ಗೆ ವಿಚ್ಛೇದನ ನೀಡಲಿಲ್ಲ.  

4 /5

ರಾಜ್ ಬಬ್ಬರ್ ಮೊದಲು ನಾದಿರಾ ಬಬ್ಬರ್ ಅವರನ್ನು ಮದುವೆಯಾದರು ಆದರೆ ನಂತರ ಅವರು ಸ್ಮಿತಾ ಪಾಟೀಲ್ ಅವರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ತೊರೆದು ನಟಿಯೊಂದಿಗೆ ವಾಸಿಸಲು ಪ್ರಾರಂಭಿಸಿದರು. ನಾದಿರಾಗೆ ವಿಚ್ಛೇದನ ನೀಡದೆ ಸ್ಮಿತಾಳನ್ನು ಮದುವೆಯಾದರು. ಆದರೆ ಸ್ಮಿತಾ ಗಂಡು ಮಗುವಿಗೆ ಜನ್ಮ ನೀಡುವಾಗಲೇ ಸಾವನ್ನಪ್ಪಿದ್ದಾರೆ. ಅದರ ನಂತರ ಮತ್ತೆ ತನ್ನ ಮೊದಲ ಹೆಂಡತಿ ನಾದಿರಾ ಬಳಿಗೆ ಮರಳಿದರು.  

5 /5

ನಟ ಧರ್ಮೇಂದ್ರ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ, ಅವರು ಈಗಾಗಲೇ ಮದುವೆಯಾಗಿದ್ದರು. ಆದರೆ ಹೇಮಾ ಮಾಲಿನಿಯ ಮೇಲೆ ಪ್ರೀತಿ ಬೆಳೆಯಿತು. ಅದೇ ಸಮಯದಲ್ಲಿ ಡ್ರೀಮ್ ಗರ್ಲ್ ಕೂಡ ಧರ್ಮೇಂದ್ರನಿಗೆ ತನ್ನ ಹೃದಯವನ್ನು ಕೊಟ್ಟರು. ಆಗ ಮೊದಲ ಹೆಂಡತಿಯ ಅಸಮಾಧಾನವನ್ನು ಲೆಕ್ಕಿಸದೆ ಧರ್ಮೇಂದ್ರ ತನ್ನ ಧರ್ಮವನ್ನು ಬದಲಿಸಿ ಹೇಮಾ ಮಾಲಿನಿಯನ್ನು ಮದುವೆಯಾದರು.