Coconut Water-Sabja seed for diabetes: ಜೀವನಶೈಲಿ ಸರಿಯಿಲ್ಲದಿದ್ದರೆ, ದೇಹದಲ್ಲಿ ಅನೇಕ ರೋಗಗಳು ಬರಲು ಪ್ರಾರಂಭಿಸುತ್ತವೆ. ಆಯಾಸ ಮತ್ತು ಅನಾರೋಗ್ಯವು ವ್ಯಕ್ತಿಯನ್ನು ಒತ್ತಡಕ್ಕೆ ತರಬಹುದು. ಹಾಳಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಅನೇಕ ರೋಗಗಳು ಜನರನ್ನು ಬಾಧಿಸುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಮಧುಮೇಹ, ಮಲಬದ್ಧತೆಯಂತಹ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಮಧುಮೇಹ ಇರುವುದು ಸಾಮಾನ್ಯ ಸಂಗತಿಯಂತಾಗಿದೆ. ಮಲಬದ್ಧತೆಯ ಸಮಸ್ಯೆಯು ನೀರು ಮತ್ತು ನಾರಿನ ಕೊರತೆಯಿಂದ ಉಂಟಾಗಬಹುದು.
ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಅಥವಾ ಪರಿಹಾರವನ್ನು ಪಡೆಯಲು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಈ ಲೇಖನದಲ್ಲಿ ನಾವು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲ್ಪಟ್ಟ ಕಾಮಕಸ್ತೂರಿ ಬೀಜ ಮತ್ತು ಎಳನೀರಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಧುಮೇಹವನ್ನು ತೊಡೆದುಹಾಕಲು ಸಾಧ್ಯವಿಲ್ಲ. ಆದರೆ ಈ ಮಿಶ್ರಣವನ್ನು ಸೇವಿಸುವುದರಿಂದ ನಿಯಂತ್ರಣದಲ್ಲಿ ಇಡಬಹುದು.
ನಾವು ಸಬ್ಜಾ ಬೀಜಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ. ಆಗಾಗ್ಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ಪ್ರತಿದಿನ ಸಬ್ಜಾ ಬೀಜಗಳನ್ನು ಸೇವಿಸಿ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವುದರಿಂದ ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ.
ಇನ್ನು ಮಧುಮೇಹದಿಂದ ಬಳಲುತ್ತಿರುವ ಜನರು ಸಬ್ಜಾ ಬೀಜಗಳನ್ನು ಸೇವಿಸಬಹುದು. ಇದನ್ನು ಎಳನೀರಿನ ಜೊತೆ ಸೇವಿಸಿದರೆ ಉತ್ತಮ. ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ. ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತದೆ.
ಕಡಿಮೆ ನೀರು ಕುಡಿಯುವುದರಿಂದ ಮತ್ತು ಹಾಳಾದ ಜೀವನಶೈಲಿಯಿಂದ ಮೂತ್ರದ ಸೋಂಕು ಸಂಭವಿಸಬಹುದು. ಮೂತ್ರದ ಸೋಂಕಿಗೆ, ಸಾಧ್ಯವಾದಷ್ಟು ನೀರು ಕುಡಿಯುವುದನ್ನು ಹೊರತುಪಡಿಸಿ, ಸಬ್ಜಾ ಬೀಜಗಳನ್ನು ಸೇವಿಸಿದರೆ ಕೂಡ ಪರಿಹಾರ ಪಡೆಯಬಹುದು.
(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ. ತಜ್ಞರನ್ನು ಸಂಪರ್ಕಿಸಿದ ನಂತರವೇ ಬಳಕೆ ಮಾಡಿ)