ಸೂಪರ್ ಹಿಟ್ ಜೋಡಿ ಎನ್‌ಟಿಆರ್ ಮತ್ತು ಶ್ರೀದೇವಿ ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾಗಳಿವು..!

NTR-Sridevi : ದಿವಂಗತ ನಟರಾದ ನಂದಮೂರಿ ತಾರಕ ರಾಮರಾವ್, ಎನ್‌ ಟಿ ಆರ್‌ ಎಂದೇ ಜನಪ್ರಿಯವಾದವರು. ಜೊತೆಗೆ ದಕ್ಷಿಣ ಭಾರತದ ಖ್ಯಾತ ನಟಿ ಶ್ರೀದೇವಿ ಭಾರತೀಯ ಚಿತ್ರರಂಗದ ದೊಡ್ಡ ತಾರೆಗಳಾಗಿದ್ದರು. ಈ ಸೂಪರ್‌ ಹಿಟ್‌ ಜೋಡಿ ತಮ್ಮ ಅಭಿನಯದಿಂದಲೇ ಭಾರತೀಯ ಚಲನಚಿತ್ರೋದ್ಯಮದಲ್ಲಿ ಚಾಪು ಮೂಡಿಸಿದ್ದಾರೆ. ಈ ಜೋಡಿ ಅಪಾರ ಮೆಚ್ಚುಗೆ ಗಳಿಸುವುದರ ಜೊತೆಗೆ ಉತ್ತಮ ಆನ್-ಸ್ಕ್ರೀನ್ ಜೋಡಿಯೆನಿಸಿಕೊಂಡಿತ್ತು. ಇಬ್ಬರು ಸಾಕಷ್ಟು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ ಅವರ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ ನೋಡಿ
 

1 /6

ವೆಟಗಾಡು : ಈ ವೆಟಗಾಡು ಚಿತ್ರದಿಂದಲೇ ಮೊದಲ ಬಾರಿಗೆ ಎನ್‌ಟಿಆರ್ ಮತ್ತು ಶ್ರೀದೇವಿ ತೆರೆ ಹಂಚಿಕೊಂಡಿದ್ದರು. ಇದು 1979 ರಲ್ಲಿ ಬಿಡುಗಡೆಯಾದ ತೆಲುಗು ಸಾಹಸಮಯ ಚಿತ್ರವಾಗಿದ್ದು, ಇದನ್ನು ಕೆ ರಾಘವೇಂದ್ರ ರಾವ್ ನಿರ್ದೇಶಿಸಿದ್ದಾರೆ. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.  

2 /6

ಆಟಗಾಡು : ಇದು ತೆಲುಗು ಭಾಷೆಯ ಸಾಹಸಮಯ ಚಿತ್ರವಾಗಿದ್ದು, ಇದು 1980 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ನಿರ್ದೇಶಕರು ತಾತಿನೇನಿ ರಾಮರಾವ್, ಮತ್ತು ಇದನ್ನು ಜಿ ರಾಜೇಂದ್ರ ಪ್ರಸಾದ್ ನಿರ್ಮಿಸಿದ್ದಾರೆ. ಚಕ್ರವರ್ತಿ ಸಂಗೀತ ಸಂಯೋಜಕರಾಗಿದ್ದರು.  

3 /6

ರೌಡಿ ರಾಮುಡು ಕೊಂಟೆ ಕೃಷ್ಣುಡು : ಈ ಚಿತ್ರವನ್ನು ಕೆ ರಾಘವೇಂದ್ರ ರಾವ್ ನಿರ್ದೇಶಿಸಿದ್ದಾರೆ ಮತ್ತು ಇದು 1980 ರಲ್ಲಿ ಬಿಡುಗಡೆಯಾಯಿತು. ತೆಲುಗು ಆಕ್ಷನ್ ಚಿತ್ರದ ನಿರ್ಮಾಪಕ ಎನ್ಟಿಆರ್, ಇದು ರಾಮಕೃಷ್ಣ ಸಿನಿ ಸ್ಟುಡಿಯೋಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿತ್ತು.   

4 /6

ಸರ್ದಾರ್ ಪಾಪಾ ರಾಯುಡು : ಈ ಚಿತ್ರವು ತೆಲುಗು ಐತಿಹಾಸಿಕ ಕಾಲ್ಪನಿಕ ಚಲನಚಿತ್ರವಾಗಿದ್ದು, ದಾಸರಿ ನಾರಾಯಣ ರಾವ್ ನಿರ್ದೇಶಿಸಿದ್ದಾರೆ ಮತ್ತು 1980 ರಲ್ಲಿ ಬಿಡುಗಡೆಯಾಯಿತು. ಇದನ್ನು ಕ್ರಾಂತಿ ಕುಮಾರ್ ನಿರ್ಮಿಸಿದ್ದರು.  

5 /6

ಗಜ ಡೊಂಗ : ಕೆ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ 1981 ರಲ್ಲಿ ಬಿಡುಗಡೆಯಾದ ಆಕ್ಷನ್ ಕ್ರೈಮ್ ಚಿತ್ರವಾಗಿದೆ. ಇಬ್ಬರು ನಾಯಕಿಯರ ಹೊರತಾಗಿ, ಚಿತ್ರದಲ್ಲಿ ಜಯಸುಧಾ ಕೂಡ ನಟಿಸಿದ್ದಾರೆ.

6 /6

ಸತ್ಯಂ ಶಿವಂ : 1981 ರ ಈ ಚಲನಚಿತ್ರವನ್ನು ಕೆ ರಾಘವೇಂದ್ರ ರಾವ್ ನಿರ್ದೇಶಿಸಿದ್ದಾರೆ ಮತ್ತು ಎನ್‌ಟಿಆರ್, ಶ್ರೀದೇವಿ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ರತಿ ಅಗ್ನಿಹೋತ್ರಿ ನಟಿಸಿದ್ದಾರೆ. ಇದನ್ನು ಈಶ್ವರಿ ಕ್ರಿಯೇಷನ್ಸ್ ಅಡಿಯಲ್ಲಿ ಡಿ ವೆಂಕಟೇಶ್ವರ ರಾವ್ ನಿರ್ಮಿಸಿದ್ದಾರೆ. ಈ ಚಿತ್ರವು 1979 ರಲ್ಲಿ ಬಿಡುಗಡೆಯಾದ ಸುಹಾಗ್ ಹಿಂದಿ ಚಲನಚಿತ್ರದ ತೆಲುಗು ರಿಮೇಕ್ ಆಗಿದೆ.