ಬಿಗ್‌ಬಾಸ್‌ ಶಾಕಿಂಗ್‌ ಟ್ವಿಸ್ಟ್..‌ ದೊಡ್ಮನೆಯಿಂದ ಐಶ್ವರ್ಯ ಸಿಂಧೋಗಿ ಔಟ್?!

Bigg Boss Kannada Aishwarya Sindhogi: ಇಂದು ನಡೆಯಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಎಲಿಮಿನೇಷನ್‌ ಹಂತದಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುತ್ತಾರೆ ಎಂದು ಹಲವು ವರದಿಗಳು ಹೇಳುತ್ತಿವೆ.. ಆದರೆ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಇಲ್ಲಿ ತಿಳಿಯಿರಿ.. 
 

1 /6

ಸೋಷಿಯಲ್‌ ಮಿಡಿಯಾದಲ್ಲಿ ಎದ್ದಿರುವ ಚರ್ಚೆಯ ಪ್ರಕಾರ ಈ ವಾರ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಹೋಗುತ್ತಾರೆ ಎನ್ನುವುದಕ್ಕೆ ಟಾಪ್‌ ಸ್ಪರ್ಧಿಯ ಹೆಸರೊಂದು ಕೇಳಿಬರುತ್ತಿದೆ.. ಅದು ಬೇರಾರೂ ಅಲ್ಲ.. ಐಶ್ವರ್ಯ ಸಿಂಧೋಗಿ..  

2 /6

ನಾಮಿನೇಟ್‌ ಆಗಿರುವ ಐಶ್ವರ್ಯ ಸಿಂಧೋಗಿ ಬಿಗ್‌ಬಾಸ್‌ ಮನೆಯಲ್ಲಿ ಇಡೀ ವಾರ ಏನು ಟಾಸ್ಕ್‌ ಆಡಿದ್ದಾರೆ? ಎಷ್ಟು ಎಂಟರ್‌ಟೇನ್‌ ಮಾಡಿದ್ದಾರೆ ಎನ್ನುವ ಪ್ರಶ್ನೆಯೊಂದು ಇಲ್ಲಿ ಉದ್ಭವವಾಗುತ್ತದೆ.. ವಾಸ್ತವೇನೆಂದರೇ ಎಲ್ಲರೂ ಗಮನಿಸಿದಂತೆ ದೊಡ್ಮನೆಯಲ್ಲಿ ಐಶ್ವರ್ಯ ಅಷ್ಟಾಗಿ ವಿಶೇಷವಾಗೇನೂ ಕಾಣಿಸಿಕೊಂಡಿಲ್ಲ.. ಯಾವಾಗಲೂ ಶಿಶಿರ್‌ ಅವರ ಕೈ ಹಿಡಿದುಕೊಂಡು ಓಡಾಡುತ್ತಾರೆ ಎನ್ನಲಾಗಿತ್ತು..   

3 /6

ಸದ್ಯ ದೊಡ್ಮನೆಯಲ್ಲಿ 50 ದಿನ ಕಳೆದಿರುವ ಐಶ್ವರ್ಯ ಸಿಂಧೋಗಿ ಟಾಸ್ಕ್‌ ಅಂತ ಬಂದರೇ ಎಲ್ಲೂ ಅಷ್ಟಾಗಿ ಮಿಂಚಿಲ್ಲ.. ಹೇಳಿಕೊಳ್ಳುವಷ್ಟರ ಮಟ್ಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ ಎನ್ನುವ ಭಾವನೆಯೊಂದು ಪ್ರೇಕ್ಷಕರಲ್ಲಿದೆ.. ಇದಲ್ಲದೇ ಆಕೆ ಯಾವುದೇ ಎಂಟರ್‌ಟೇನ್‌ಮೆಂಟ್‌ ಕೂಡ ಮಾಡಿಲ್ಲ..   

4 /6

ಕೆಲವರು ಪ್ರಕಾರ ಐಶ್ವರ್ಯ ಸಿಂಧೋಗಿ ಎಮೋಷನಲ್‌ ಕಾರ್ಡ್‌ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗಿದೆ.. ಅಲ್ಲದೇ ಅವರು ಹೆಚ್ಚಾಗಿ ಶಿಶಿರ್‌ ಜೊತೆ ಕ್ಲೋಸ್‌ ಆಗಿರೋದರಿಂದ ಮನೆಮಂದಿಯೇ ಆಕೆಯ ಮೇಲೆ ಡೈಲಾಗ್‌ ಹೊಡೆದಿರುವುದು ಉಂಟು.. ಹಾಗಂತ ಅವರಿಬ್ಬರೂ ದೂರವಾಗಿಲ್ಲ.. ಇನ್ನಷ್ಟು ಹತ್ತಿರವಾಗಿದ್ದಾರೆ..   

5 /6

ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಆಗಮಿಸಿದ ಶೋಭಾ ಶೆಟ್ಟಿ ಮಾತ್ರ ಭರ್ಜರಿಯಾಗಿಯೇ ಆಟವಾಡಿದರು.. ಆದರೆ ಅವರೆಲ್ಲರ ಮುಂದೆ ಐಶ್ವರ್ಯ ಸ್ವಲ್ಪ ಡಲ್‌ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.. ಬರೀ ಈಗಷ್ಟೇ ಅಲ್ಲ.. ಮೊದಲಿನಿಂದಲೂ ಐಶ್ವರ್ಯ ಪಾತ್ರ ಎಲ್ಲದರಲ್ಲೂ ಕಡಿಮೆಯೇ ಎನ್ನುವಂತಾಗಿದೆ.   

6 /6

ಶಿಶಿರ್‌ ಹಾಗೂ ಐಶ್ವರ್ಯ ಯಾವಾಗಲೂ ಅಂಟಿಕೊಂಡೇ ಇರುವುದರಿಂದ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್‌ ಬಾರೀ ಡೈಲಾಗ್‌ ಹೇಳುವ ಮೂಲಕ ಅವರಿಗೆ ಟಾಂಗ್‌ ಕೊಟ್ಟಿದ್ದರು.. ಹುಡುಗಿಯ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್‌ಬಾಸ್‌ ಕಪ್‌ ಗೆಲ್ಲೋದು ಎಂದೆಲ್ಲ ಹೇಳಿದ್ದರು.. ಒಟ್ಟಾರೆಯಾಗಿ ಹೇಳುವುದಾದರೇ ಈ ವಾರ ಬಿಗ್‌ಬಾಸ್‌ ಮನೆಯಿಂದ ಐಶ್ವರ್ಯ ಸಿಂಧೋಗಿ ಎಲಿಮಿನೇಟ್‌ ಆಗಬಹುದು ಎನ್ನುವ ಮಾತು ಕೇಳಿಬರುತ್ತಿದೆ..