ಸಂಗೀತಾ ಶೃಂಗೇರಿ ಅನ್ನೋದು ನನ್ನ ನಿಜವಾದ ಹೆಸರಲ್ಲ, ಇದು ನನ್ನ ರಿಯಲ್ ನೇಮ್: ಸ್ವಾಮೀಜಿ ಮುಂದೆ ಸತ್ಯ ಬಾಯ್ಬಿಟ್ಟ ನಟಿ

Sangeetha Sringeri Real Name: ಸಂಗೀತಾ ಶೃಂಗೇರಿ… ಬಿಗ್ ಬಾಸ್ ಮನೆಯ ಪ್ರಮುಖ ಸ್ಪರ್ಧಿ. ಇವರು ತನ್ನ ನಿಜವಾದ ಹೆಸರೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್’ಗೆ ಸ್ವಾಮೀಜಿ ಆಗಮಿಸಿ ಸ್ಪರ್ಧಿಗಳ ಭವಿಷ್ಯ ಹೇಳಲು ಮುಂದಾದಾಗ ನಟಿ ತಮ್ಮ ನಿಜನಾಮದ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

1 /5

ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಸಂಗೀತಾ, ಇದೀಗ ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಹರಹರ ಮಹಾದೇವ ಧಾರವಾಹಿಯಲ್ಲಿ ಸತಿಯಾಗಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದ ನಟಿ, ಅದಾದ ಬಳಿಕ ಮತ್ತಷ್ಟು ಹೆಸರು ಮಾಡಿದ್ದು 777 ಚಾರ್ಲಿ ಸಿನಿಮಾದ ಮೂಲಕ.

2 /5

2014 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದ ಸಂಗೀತಾ, ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಕೂಡ ಆಗಿದ್ದರು.

3 /5

ಇನ್ನು ಸಂಗೀತಾ ಅವರ ಆರಂಭಿಕ ಮತ್ತು ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ, ಇವರು ಹುಟ್ಟಿದ್ದು ಮೇ 13, 1996ರಲ್ಲಿ. ಇವರ ತಂದೆ ಶಿವಕುಮಾರ್ ಕೆ ಅವರು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ, ಇದೀಗ ನಿವೃತ್ತಿ ಪಡೆದಿದ್ದಾರೆ. ಇನ್ನು ತಾಯಿ ಭವಾನಿ ಶಿವಕುಮಾರ್ ಗಿಡಮೂಲಿಕೆಗಳ ಕ್ಷೇಮ ತರಬೇತುದಾರ (herbal wellness coach) ಆಗಿದ್ದಾರೆ. ಇನ್ನು ಸಂಗೀತಾ NCC ಕೆಡೆಟ್ ಆಗಿದ್ದಲ್ಲದೆ, ಖೋ ಖೋದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, 2012 ರಲ್ಲಿ ಚಿನ್ನದ ಪದಕವನ್ನು ಸಹ ಪಡೆದಿದ್ದರು.

4 /5

ಸಂಗೀತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿ ಮೂಲಕ ನಟನೆ ಆರಂಭಿಸಿದರು. ಇದರಲ್ಲಿ ಸತಿ ಪಾತ್ರಕ್ಕೆ ಜೀವ ತುಂಬಿದ್ದ ಸಂಗೀತಾ ಅದ್ಭುತವಾಗಿ ನಟಿಸಿದ್ದರು. ಸಂಗೀತಾಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ 2022 ರಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ.

5 /5

ಅಂದಹಾಗೆ ಸಂಗೀತಾ ಅವರ ನಿಜವಾದ ಹೆಸರು ಶ್ರೀದೇವಿ ಅಂತಾ. ಈ ಬಗ್ಗೆ ಸ್ವತಃ ಅವರೇ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದಾರೆ. ಸ್ವಾಮೀಜಿ ಭವಿಷ್ಯ ನುಡಿಯುತ್ತಿದ್ದ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಂಗೀತಾ, ನಾನು ಇಂಡಸ್ಟ್ರಿಗೆ ಬಂದ ಬಳಿಕ ಈ ಹೆಸರು ಬಳಕೆ ಮಾಡಿದ್ದೆ, ಆದರೆ ನನ್ನ ನಿಜವಾದ ಹೆಸರು ಶ್ರೀದೇವಿ ಎಂದು ಹೇಳಿದ್ದಾರೆ.