ಭೂಲೋಕದ ಸ್ವರ್ಗ ಉತ್ತರಾಖಂಡ್‌: ಇಲ್ಲಿನ ರಮಣೀಯ ಸ್ಥಳಗಳು ನಿಮ್ಮ ಟೂರ್‌ ಪ್ಲ್ಯಾನ್‌ಗೆ ಬೆಸ್ಟ್‌

ಉತ್ತರಾಖಂಡವು ದೇಶದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲಿ ಗಿರಿಧಾಮಗಳ ಜೊತೆಗೆ ಹಿಂದೂ ಧರ್ಮದ ಅನೇಕ ಪವಿತ್ರ ಯಾತ್ರಾ ಸ್ಥಳಗಳಿವೆ. ಈ ಸ್ಥಳದ ಸೌಂದರ್ಯವನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಉತ್ತರಾಖಂಡದ ಸೌಂದರ್ಯವನ್ನು ವಿವರಿಸುವ ಈ ಚಿತ್ರಗಳನ್ನ ನೀವು ನೋಡಬಹುದು.

1 /5

ಮಸ್ಸೂರಿಯನ್ನು 'ಬೆಟ್ಟಗಳ ರಾಣಿ' ಎಂದೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 7000 ಅಡಿ ಎತ್ತರದಲ್ಲಿರುವ ಈ ನಗರ ಪ್ರವಾಸಿಗರಿಗೆ ಸ್ವರ್ಗಕ್ಕಿಂತ ಕಡಿಮೆಯಿಲ್ಲ.  

2 /5

ನೈನಿತಾಲ್ ಬೆಟ್ಟಗಳ ಮಧ್ಯದಲ್ಲಿರುವ ಸುಂದರವಾದ ಗಿರಿಧಾಮವಾಗಿದ್ದು, ಇದನ್ನು 'ನೈನಿ ಸರೋವರ' ಎಂದೂ ಕರೆಯುತ್ತಾರೆ. ನೈಸರ್ಗಿಕ ಸೌಂದರ್ಯ ಮತ್ತು ಸರೋವರಗಳ ಈ ನಗರದ ಸೌಂದರ್ಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ.

3 /5

ಗಂಗಾ ನದಿಯ ಜೊತೆಗೆ ಹಿಮಾಲಯದ ಸಮೀಪವಿರುವ ಅನೇಕ ಪ್ರಾಚೀನ ದೇವಾಲಯಗಳಿಗೆ ರಿಷಿಕೇಶವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ಸಾಹಸ ಕ್ರೀಡೆಯ ತಾಣವಾಗಿಯೂ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ನೀವು ವಾಟರ್ ರಾಫ್ಟಿಂಗ್, ಫ್ಲೈಯಿಂಗ್ ಫಾಕ್ಸ್, ಮೌಂಟೇನ್ ಬೈಕಿಂಗ್, ಬಂಗೀ ಜಂಪಿಂಗ್ ಮುಂತಾದ ಚಟುವಟಿಕೆಗಳನ್ನು ಆನಂದಿಸಬಹುದು.

4 /5

ಕೇದಾರನಾಥವು ಪುರಾತನವಾದ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಹಿಮನದಿಗಳು ಮತ್ತು ಕೇದಾರನಾಥ ಶಿಖರಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಸೌಂದರ್ಯಕ್ಕಾಗಿ ಜಗತ್ಪ್ರಸಿದ್ಧವಾಗಿದೆ. ಹಿಮ ಶಿಖರಗಳನ್ನು ಹೊಂದಿರುವ ಲೆಕ್ಕವಿಲ್ಲದಷ್ಟು ಪರ್ವತ ಶ್ರೇಣಿಗಳು ನಿಮ್ಮನ್ನು ಆಕರ್ಷಿಸುತ್ತವೆ.

5 /5

ಬದ್ರಿನಾಥ್ ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ಒಂದಾಗಿದೆ. ಇದು ವಿಷ್ಣುವಿಗೆ ಸಮರ್ಪಿತವಾಗಿದೆ. ವೇದಗಳಲ್ಲಿಯೂ ಇದರ ಉಲ್ಲೇಖವಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.