Best Budget Smartphones: 15 ಸಾವಿರ ಒಳಗಿನ ಟಾಪ್ 5 ಬೆಸ್ಟ್ ಸ್ಮಾರ್ಟ್​ಫೋನ್ಸ್!

Best Budget Smartphones: ಗ್ರಾಹಕರ ಬಜೆಟ್‍ಗೆ ತಕ್ಕಂತೆ ಉತ್ತಮ ವಿಶೇಷನಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್‍ಗಳ ಮಾಹಿತಿಯನ್ನು ಇಂದು ನಾವು ನಿಮಗೆ ನೀಡುತ್ತಿದ್ದೇವೆ. 15 ಸಾವಿರ ರೂ.ದೊಳಗಿನ ಟಾಪ್ 5 ಸ್ಮಾರ್ಟ್‍ಫೋನ್‍ಗಳ ಮಾಹಿತಿ ಇಲ್ಲಿದೆ ನೋಡಿ.

Best Budget Smartphone Under Rs 15,000: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‍ಫೋನ್‍ಗಳಿವೆ. ಅತ್ಯಂತ ಕಡಿಮೆ ಬೆಲೆಗೆ ಅತ್ಯದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್‍ಗಳಿವೆ. ಗ್ರಾಹಕರ ಬಜೆಟ್‍ಗೆ ತಕ್ಕಂತೆ ಉತ್ತಮ ವಿಶೇಷನಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್‍ಗಳ ಮಾಹಿತಿಯನ್ನು ಇಂದು ನಾವು ನಿಮಗೆ ನೀಡುತ್ತಿದ್ದೇವೆ. 15 ಸಾವಿರ ರೂ.ದೊಳಗಿನ ಟಾಪ್ 5 ಸ್ಮಾರ್ಟ್‍ಫೋನ್‍ಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Redmi 12 5G ಸ್ಮಾರ್ಟ್‍ಫೋನ್‍ 6.79-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್‍ನೊಂದಿಗೆ ಬರುವ ಇದು ಬಲಿಷ್ಠ ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4 Gen 2 ಪ್ರೊಸೆಸರ್ ಹೊಂದಿದೆ. 50MP ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 4GB+128GB ರೂಪಾಂತರಕ್ಕೆ 10,999 ರೂ., 6GB+128GB ರೂಪಾಂತರಕ್ಕೆ 12,499 ರೂ.  ಮತ್ತು 8GB+256GB ಮಾದರಿಗೆ 14,499 ರೂ. ಇದೆ.

2 /5

Tecno Pova 5 Pro 6.78-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್‍ನೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಹೊಂದಿದೆ. ಇದು ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಹೊಂದಿದ್ದು, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾಯಿದೆ. 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 8GB+128GB ವೇರಿಯಂಟ್‌ಗೆ 14,999 ರೂ. ಮತ್ತು 8GB+256GB ಮಾದರಿಗೆ 15,999 ರೂ. ಇದೆ.

3 /5

VIVO Y27 6.64 ಇಂಚಿನ IPS LCD ಪೂರ್ಣ HD+  ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ ಮೀಡಿಯಾಟೆಕ್ ಹಿಲಿಯೊ G85 ಚಿಪ್‍ಸೆಟ್ ನೀಡಲಾಗಿದೆ. ಹಿಂಭಾಗದಲ್ಲಿ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವಿದೆ. 44W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಹೊಂದಿದೆ. ಇದು ಆಂಡ್ರಾಯ್ಡ್ 13 ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999ರೂ. ಇದೆ.

4 /5

POCO M6 Pro 5G 6.79 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದ್ದು,  90 Hz ರಿಫ್ರೆಶ್ ರೇಟ್‍ನೊಂದಿಗೆ ಬರುತ್ತದೆ. ಇದು ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4Gen2 ಚಿಪ್‌ಸೆಟ್ ಹೊಂದಿದೆ. ಹಿಂಭಾಗದಲ್ಲಿ 50MP ಮತ್ತು 2MP ಹಾಗೂ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಸೆಟಪ್ ಇದೆ. 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ 4GB+64GB ರೂಪಾಂತರದ ಬೆಲೆ 10,999 ರೂ. ಆದರೆ, 6GB+128GB ಬೆಲೆ 12,999 ರೂ. ಇದೆ.

5 /5

Oppo A58 4G 6.72-ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್‌ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 50MP, 2MP ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿ 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 500mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂ. ಇದೆ.