Benefits of Ragi: ರಾಗಿಯಿಂದ ಸಿಗುವ ಈ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ!

                   

Benefits of Ragi: ಸಿರಿಧಾನ್ಯಗಳಲ್ಲಿ ಪ್ರಮುಖವಾದದ್ದು ರಾಗಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ರಾಗಿಯಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ನಿಮ್ಮ ದಿನನಿತ್ಯದ ಆಹಾರದಲ್ಲಿ ತಪ್ಪದೇ ರಾಗಿಯನ್ನು ಸೇವಿಸುತ್ತೀರಿ. ಹಾಗಾದರೆ ಈ ಫೋಟೋ ಗ್ಯಾಲರಿಯಲ್ಲಿ ರಾಗಿಯ ಪ್ರಯೋಜನಗಳೇನು ಎಂದುತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಧುಮೇಹ ನಿಯಂತ್ರಣ:  ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಅಧಿಕವಾಗಿದೆ. ಮಧುಮೇಹ ಇರುವವರು ಪ್ರತಿದಿನ ರಾಗಿಯನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

2 /5

ಅಧಿಕ ಪ್ರಮಾಣದಲ್ಲಿ ಕಂಡು ಬರುವ ಖನಿಜಾಂಶಗಳು: ರಾಗಿಯಲ್ಲಿ ಪೊಟ್ಯಾಶಿಯಂ, ರಂಜಕ ಮತ್ತು ಕಬ್ಬಿಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಹಿಮೋಗ್ಲೋಬಿನ್ (Hemoglobin) ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

3 /5

ಮೂಳೆಗಳನ್ನು ಬಲಪಡಿಸುತ್ತದೆ: ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವುದರಿಂದ ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗುತ್ತವೆ (Strengthens the bones) . ಇದು ಕೀಲು ನೋವು, ಮೊಣಕಾಲು ನೋವು ಮತ್ತು ಮುರಿತದಂತಹ ಸಮಸ್ಯೆಗಳನ್ನು ತಡೆಯಬಹುದು. ಇದನ್ನೂ ಓದಿ- ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ

4 /5

ದೇಹಕ್ಕೆ ವಿಶ್ರಾಂತಿ: ಇದರಲ್ಲಿರುವ ಅಮೈನೋ ಆಸಿಡ್ ಖಿನ್ನತೆ (Depression), ತಲೆನೋವು ಮತ್ತು ನಿದ್ರಾಹೀನತೆಯಂತಹ ರೋಗಗಳನ್ನು ಗುಣಪಡಿಸುತ್ತದೆ. ಇದನ್ನೂ ಓದಿ- Immunity Booster: ಬೇವು ಹಾಗೂ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರ ಹಲವು ಲಾಭಗಳಿವೆ, PM Modi ಕೂಡ ಈ ಉಪಾಯ ಅನುಸರಿಸುತ್ತಾರೆ

5 /5

ಕೊಬ್ಬುಗಳನ್ನು ಕರಗಿಸುತ್ತದೆ:  ರಾಗಿಯಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಯಕೃತ್ತಿನಿಂದ ಬಿಡುಗಡೆಯಾದ ಕೊಬ್ಬನ್ನು ಕರಗಿಸಲು ಮತ್ತು ಶುದ್ಧೀಕರಿಸಲು ಥ್ರಯೋನಿನ್ ಎಂಬ ಅಮೈನೋ ಆಸಿಡ್ ಸಹಾಯ ಮಾಡುತ್ತದೆ.