ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು.ನುಗ್ಗೆ ಸೊಪ್ಪಿನಲ್ಲಿ ಶೇಖಡಾ 4 ರಷ್ಟು ವಿಟಮಿನ್ ' ಎ ' ಅಂಶ ಹೆಚ್ಚಾಗಿದೆ ಎಂದು ಸಂಶೋಧಿಸಲಾಗಿದೆ.
ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು.ನುಗ್ಗೆ ಸೊಪ್ಪಿನಲ್ಲಿ ಶೇಖಡಾ 4 ರಷ್ಟು ವಿಟಮಿನ್ ' ಎ ' ಅಂಶ ಹೆಚ್ಚಾಗಿದೆ ಎಂದು ಸಂಶೋಧಿಸಲಾಗಿದೆ. 100 ಗ್ರಾಂ ಮೋರಿಂಗ ಎಲೆಗಳಲ್ಲಿ ಸುಮಾರು 7564 ಐ ಯು ಯೂನಿಟ್ ಗಳಷ್ಟು ವಿಟಮಿನ್ ' ಎ ' ಅಂಶ ಇದ್ದು, ಇದು ಮನುಷ್ಯನ ದೇಹದ ದೈನಂದಿನ ವಿಟಮಿನ್ ಅವಶ್ಯಕತೆಗೆ ಪೂರಕವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನುಗ್ಗೆ ಸೊಪ್ಪಿನಲ್ಲಿ ಐಸೋಥಿಯೋಸಿಯಾನೇಟ್ ಎಂಬ ಸಕ್ರಿಯ ವಸ್ತುವಿದ್ದು, ಇದು ನಿಮ್ಮ ದೇಹ ಪ್ರತಿದಿನ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುತ್ತದೆ.
ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪು ಮಲಬದ್ಧತೆ, ಉಬ್ಬರಿಕೆ, ಅನಿಲ, ಜಠರದ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆ ಇರುವವರು , ತಮ್ಮ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ.
ನುಗ್ಗೆ ಸೊಪ್ಪಿನಲ್ಲಿರುವ ಅಧಿಕ ಪೋಷಕಾಂಶವು ತಾಯಿಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗು ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟುವ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ.